Visit Channel

ಬಾಲಿವುಡ್ ಚಿತ್ರರಂಗಕ್ಕೆ ಗುಡ್‍ಬೈ ಸೂಚಿಸಿದ ಮಿ. ಪರ್ಫೆಕ್ಷನಿಸ್ಟ್ ; ಬಿಟ್ಟುಹೋಗಲು ಅಸಲಿ ಕಾರಣವೇನು?

actor

ಬಾಲಿವುಡ್(Bollywood) ಚಿತ್ರರಂದಗದಲ್ಲಿ ಮಿಲ್ಕ್ ಬಾಯ್, ಮಿಸ್ಟರ್ ಪರ್ಫೆಕ್ಷನಿಸ್ಟ್(Mr. Perfectionist) ಎಂದೇ ಖ್ಯಾತಿ ಗಳಿಸಿದ್ದ ನಟ ಎಂದರೇ ಅದು ಅಮೀರ್ ಖಾನ್(Aamir Khan) ಹೌದು, ಬಾಲಿವುಡ್ ಚಿತ್ರರಂಗಕ್ಕೆ 1973 ರಲ್ಲಿ `ಯಾದೋನ್ ಕೀ ಭಾರತ್' ಸಿನಿಮಾದ ಮೂಲಕ ಬಾಲನಟನಾಗಿ ಎಂಟ್ರಿಕೊಟ್ಟ ಅಮೀರ್ ಖಾನ್,1984 ರಲ್ಲಿ ಬಾಲಿವುಡ್ ಮಂದಿಗೆ ತಮ್ಮ ಅಭಿನಯದ ಬಣ್ಣಗಳನ್ನು `ಹೋಲಿ’(Holi) ಸಿನಿಮಾದ ಮೂಲಕ ಪರಿಚಯಿಸಿದರು.

bollywood actor

ಇದಾದ ಬಳಿಕ ನಟ ಅಮೀರ್ ಖಾನ್ ಅವರು ಚಿತ್ರರಂಗ ಬಿಟ್ಟು ಓದು, ಕೆಲಸದತ್ತ ಮುಖಮಾಡುತ್ತಾರೆ ಎಂಬ ಊಹಾಪೋಹಗಳು ಹರಿದಾಡಿದವೂ. ಇದಕ್ಕೆಲ್ಲಾ ಬ್ರೇಕ್ ಕೊಟ್ಟಂತ ಅಮೀರ್ ಖಾನ್ ಅವರು. 1988 `ಕಯಾಮತ್ ಸೇ ಕಯಾಮತ್ ತಕ್’ ಸಿನಿಮಾದ ಮುಖೇನ ಪರಿಪೂರ್ಣ ನಟನಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಅಲ್ಲಿಂದ ಅಭಿನಯದ ಓಟವನ್ನು ಶುರು ಮಾಡಿದ ಅವರು ಇಲ್ಲಿಯವರೆಗೂ ವಿಭಿನ್ನವಾಗಿ ನಟಿಸಿ, ಅಭಿಮಾನಿಗಳನ್ನು ಮನರಂಜಿಸಿದ್ದಾರೆ. ಆದ್ರೆ ಅಭಿಮಾನಿಗಳು ಇಂಥ ಅದ್ಭುತ ನಟನನ್ನು ನಾವು ಮುಂದೆ ಸಿನಿಮಾದಲ್ಲಿ ನೋಡಲು ಆಗೋದಿಲ್ವಾ? ಎಂಬ ಬೇಸರವನ್ನು ಅಭಿಯಾನದಂತೆ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಬಾಲಿವುಡ್‍ನ ಖಾನ್‍ಗಳ ಇತಿಹಾಸದಲ್ಲಿ ಅತೀ ಹೆಚ್ಚು ಹೆಸರು ಗಳಿಸಿದ್ದು ಅಂದ್ರೆ ಅದು ಅಮೀರ್ ಖಾನ್, ಶಾರೂಖ್ ಖಾನ್ ಮತ್ತು ಸಲ್ಮಾನ್ ಖಾನ್. ಈ ಮೂವರ ನಡುವೆ ಅಮೀರ್ ಖಾನ್ ಕೊಂಚ ಅಭಿಮಾನಿಗಳಿಗೆ ವಿಶೇಷ ಪ್ರೀತಿ, ಉತ್ಸಾಹವೇ ಸರಿ. ಇದಕ್ಕೆ ಕಾರಣ ಬಾಲಿವುಡ್ನ ಚಾಕಲೇಟ್ ಹೀರೋ ಎಂದು ಕರೆಯಲು ಪ್ರಾರಂಭಿಸಿದ ಅಭಿಮಾನಿಗಳು, ತದನಂತರ ಅವರ ಅಭಿನಯಕ್ಕೆ ಫಿದಾ ಆಗಿ “ಮಿಸ್ಟರ್ ಪರ್ಫೆಕ್ಷನಿಸ್ಟ್” ಎಂದು ಕರೆಯಲು ಪ್ರಾರಂಭಿಸಿದರು.

bollywood

ಯಾವುದೇ ಪಾತ್ರ ಬಂದರೂ ಅದನ್ನು ಕಣ್ಮುಚ್ಚಿ ಒಪ್ಪದೇ, ಸೂಕ್ತವಾಗಿ ಪರಿಶೀಲನೆ ಮಾಡಿ ಆ ಪಾತ್ರಕ್ಕೊಂದು ಗೌರವ, ಹೆಸರು ತಂದುಕೊಡುತ್ತಿದ್ದಂತ ನಟ ಅಮೀರ್ ಖಾನ್. ಯಾವುದೇ ಪಾತ್ರವಿರಲಿ ಆ ಪಾತ್ರವನ್ನು ಲೀಲಾಜಾಲವಾಗಿ, ಅಚ್ಚುಕಟ್ಟಾಗಿ ಅಭಿನಯಿಸಿ ಆ ಪಾತ್ರಕ್ಕೆ ಜೀವತುಂಬುತ್ತಿದ್ದರು. ಇಂಥ ಅದ್ಭುತ, ಉತ್ತಮ ಕಲಾವಿದನನ್ನು ಕಳೆದುಕೊಳ್ಳಲು ಬಾಲಿವುಡ್ ಚಿತ್ರರಂಗ ಮತ್ತು ಅಭಿಮಾನಿಗಳು ನಿರಾಕರಿಸುತ್ತಿದ್ದಾರೆ. ಹೌದು, ಅಷ್ಟಕ್ಕೂ ಅಮೀರ್ ಖಾನ್ ದಿಢೀರ್ ಎಂದು ಬಾಲಿವುಡ್ ಚಿತ್ರರಂಗವನ್ನು ತ್ಯಜಿಸಲು ಇರುವ ಅಸಲಿ ಕಾರಣವೇನು ಎಂಬುದು ಅಭಿಮಾನಿಗಳಿಗೆ ಗೊಂದಲದ ಸಂಗತಿಯಾಗಿದೆ!

ಅಮೀರ್ ಖಾನ್ ಬಾಲಿವುಡ್ ಚಿತ್ರರಂಗ ಸಾಕು ಎಂದಿದ್ಯಾಕೆ?

1999 ರಲ್ಲಿ ತಮ್ಮದೇ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಚಿತ್ರಣಗೊಂಡ ಲಗಾನ್(Lagan) ಸಿನಿಮಾದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನು ತಮ್ಮತ್ತ ಸೆಳೆಯುವಂತೆ ಮಾಡಿದ ನಟ. ಈ ಸಿನಿಮಾ ಬಳಿಕ ಅವರು ಅಭಿನಯದ ಅನೇಕ ಸಿನಿಮಾಗಳಿಗೆ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿತ್ತು. ಬೆಸ್ಟ್ ಫಾರಿನ್ ಲಾಂಗ್ವೇಜ್ ಸಿನಿಮಾ, ನ್ಯಾಷನಲ್ ಆವಾರ್ಡ್ ಫಾರ್ ಬೆಸ್ಟ್ ಪಾಪ್ಯೂಲರ್ ಸಿನಿಮಾ ಸೇರಿದಂತೆ ನಿರ್ದೇಶಕರ ಅಚ್ಚುಮೆಚ್ಚಿನ ನಟನಿಗೆ ಈಗ ಒದಗಿರುವ ಪರಿಸ್ಥಿತಿ ಹೇಳಿಕೊಳ್ಳಲಾಗದಂತಿದೆ.

aamir khan

ಹೌದು, ಇತ್ತೀಚಿಗಷ್ಟೇ ಮುಂಬೈನಲ್ಲಿ ನಡೆದ ಎಬಿಪಿ ಐಡಿಯಾಸ್ ಆಫ್ ಇಂಡಿಯಾ ಇವೆಂಟ್‍ನಲ್ಲಿ ನಟ ಅಮೀರ್ ಖಾನ್ ಅವರು ಭಾಗಿಯಾಗಿದ್ದರು. ವೇದಿಕೆಗೆ ಬಂದು ಮಾತನಾಡಿದ ಅವರು, ನಾನು ಜೀವನದಲ್ಲಿ ತುಂಬ ನೋವನ್ನು ನೋಡಿದ್ದೇನೆ. ಪಡೆದುಕೊಳ್ಳುವುದಕ್ಕಿಂತ ಕಳೆದುಕೊಂಡಿರುವುದೇ ಹೆಚ್ಚು! ನಾನು ಜೀವನಕ್ಕಾಗಿ ದುಡಿದ್ದಿದ್ದೇನೇ ಆದ್ರೆ ನನ್ನ ಮಕ್ಕಳೊಂದಿಗೆ ಸಮಯ ಕಳೆಯಲು ಆಗಿಲ್ಲ! ಇಷ್ಟು ವರ್ಷಗಳ ಕಾಲ ಅಮೂಲ್ಯವಾದ ಸಮಯವನ್ನು ಕಳೆದುಕೊಂಡಿದ್ದೇನೆ. ಹೀಗಾಗಿ ನಾನು ಚಿತ್ರರಂಗವನ್ನು ತೊರೆಯಲು ಕಠಿಣವಾಗಿ ನಿರ್ಧರಿಸಿರುವೇ, ಇಲ್ಲಿಂದ ನನ್ನ ಜೀವನಕ್ಕೆ ಈಗ ನ್ಯೂ ಬಿಗಿನಿಂಗ್ಸ್ ಎಂದು ಒತ್ತಿ ಹೇಳಿದರು.

ಸಿನಿಮಾ…ಸಿನಿಮಾ ಎಂದು ಅದರ ಬೆನ್ನತ್ತಿದ ನನಗೆ ನನ್ನನ್ನು ಪ್ರೀತಿಸುವ ಜೀವಗಳಿಗೆ, ಪ್ರೀತಿಪಾತ್ರರೊಂದಿಗೆ ಕಳೆಯಬೇಕಿದ್ದ ಅಮೂಲ್ಯ ಕ್ಷಣಗಳು ಕಳೆದುಹೋಗಿವೆ. ಈ ಕ್ಷಣವನ್ನು ಮತ್ತೆ ಸೃಷ್ಟಿಸಿಕೊಳ್ಳಲು ನನಗೆ ಇನ್ನೂ ಸಮಯವಿದೆ. ಇದೇ ಕಾರಣಕ್ಕೆ ಈ ದೃಢ ಸಂಕಲ್ಪ ಮಾಡಿಕೊಂಡಿದ್ದೇನೆ. ನನ್ನ ಮಗಳಿಗೆ ಈಗ 23 ವರ್ಷ ಅವಳು ಚಿಕ್ಕವಳಿದ್ದಾಗ ನನ್ನ ಪ್ರೀತಿಯಿಂದ ವಂಚಿತಗೊಂಡಿದ್ದಾಳೆ ಎಂಬ ಸಂಗತಿ ನನಗೆ ಖಾತ್ರಿಯಾಗಿದೆ!

aamir khan

ನನ್ನ ಮಗಳ ಆತಂಕಗಳು ಮತ್ತು ಕನಸುಗಳ ಬಗ್ಗೆ ನನಗೆ ಅರಿವಿರಲಿಲ್ಲ, ನಾನು ಯಾವತ್ತು ಅದನ್ನು ತಿಳಿಯುವ ಪ್ರಯತ್ನವೇ ಮಾಡಲಿಲ್ಲ. ನಮ್ಮ ಮಕ್ಕಳಿಗೆ ಸರಿಯಾದ ಮೌಲ್ಯಗಳೊಂದಿಗೆ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳುವ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗುಡ್‍ಬೈ ಹೇಳಿದ್ದಾರೆ. ಈ ಸಂಗತಿ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದಿದೆ ಎಂದೇ ಹೇಳಬಹುದು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.