New Delhi : ದೆಹಲಿಯಲ್ಲಿ ಪಟಾಕಿಯನ್ನು (AAP Ban Fire Crackers) ನಿಷೇಧಿಸಿರುವ ದೆಹಲಿ ಸರ್ಕಾರದ ನಿರ್ಧಾರದ ವಿರುದ್ದ ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದೂಗಳು ತಮ್ಮ ಹಬ್ಬದ ದಿನದಂದು ಪಟಾಕಿ ಸುಟ್ಟರೆ ಮಾತ್ರ ಮಾಲಿನ್ಯವಾಗುತ್ತದೆಯೇ? ಎಂದು ಎಎಪಿ ಸರ್ಕಾರವನ್ನು ಬಿಜೆಪಿ ಪ್ರಶ್ನಿಸಿದೆ.

ಎಎಪಿ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ, “ದೆಹಲಿಯ ನೂತನ ಸಚಿವ ರಾಜ್ ಕುಮಾರ್ ಆನಂದ್ ಅವರ ಬೆಂಬಲಿಗರು ಸಚಿವರ ನೇಮಕವನ್ನು ಅವರ ನಿವಾಸದಲ್ಲಿ ಪಟಾಕಿ ಸುಟ್ಟು ಸಂಭ್ರಮಿಸಿದರು.
ಆದರೆ ಇದೀಗ ದೀಪಾವಳಿಯಂದು (AAP Ban Fire Crackers) ಪಟಾಕಿ ನಿಷೇಧದ ಕುರಿತು ಮಾತನಾಡುತ್ತಿದ್ದಾರೆ.
ಹಿಂದೂಗಳು ದೀಪಾವಳಿಯಂದು ಪಟಾಕಿಗಳನ್ನು ಸುಟ್ಟರೆ ಮಾಲಿನ್ಯ ಉಂಟಾಗುತ್ತದೆ. ಅರವಿಂದ್ ಕೇಜ್ರಿವಾಲ್(Aravind Kejrival) ಅವರನ್ನು ಜೈಲಿಗೆ ಕಳುಹಿಸುತ್ತಾರೆ, ಆದರೆ ಕೇಜ್ರಿವಾಲ್ ಮಂತ್ರಿಯಾದ ಸಂಭ್ರಮದಲ್ಲಿ ಪಟಾಕಿ ಸುಟ್ಟರೆ ಅದರಿಂದ ಆಮ್ಲಜನಕ ಹೊರಬರುತ್ತದೆ.
ಇದನ್ನೂ ಓದಿ : https://vijayatimes.com/judge-to-prajwal-revanna/
ಕೇಜ್ರಿವಾಲ್ ಅವರೇ, ನಿಮ್ಮ ಹಿಂದೂ ವಿರೋಧಿ ಮುಖ ಮತ್ತೆ ಬಯಲಾಗಿದೆ. ನಿಮಗೆ ದೀಪಾವಳಿಯಲ್ಲಿ ಸಮಸ್ಯೆ ಇದೆ, ಪಟಾಕಿಯಿಂದಲ್ಲ” ಎಂದು ಲೇವಡಿ ಮಾಡಿದ್ದಾರೆ.
ಇನ್ನು ರಾಜಧಾನಿ ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸಿದರೆ 200 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ನಿರ್ಧಾರವನ್ನು ದೆಹಲಿ ಸರ್ಕಾರ ಹೊರತಂದಿದೆ.
ಪಟಾಕಿಗಳನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು 5,000 ರೂಪಾಯಿಗಳವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9B ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹ ಅಪರಾಧ ಎಂದು ಎಎಪಿ ಸರ್ಕಾರ ಘೋಷಿಸಿದೆ.

ದೆಹಲಿ ಸರ್ಕಾರದ ಈ ನಿರ್ಧಾರ ವಿರುದ್ದ ಹಿಂದೂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಎಎಪಿ ಸರ್ಕಾರದ ಈ ನಿರ್ಧಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂಗಳ ಹಬ್ಬಕ್ಕೆ ಮಾತ್ರ ನಿಷೇಧವೇಕೆ? ಎಂದು ಪ್ರಶ್ನಿಸಲಾಗುತ್ತಿದೆ.
- ಮಹೇಶ್.ಪಿ.ಎಚ್