Delhi AAP MLA Amanatullah Khan arrested by ED
Delhi: ಮತ್ತೊಬ್ಬ ಆಮ್ ಆದ್ಮಿ ಪಕ್ಷದ ಶಾಸಕನ ವಶಕ್ಕೆ ಪಡೆದ ಇಡಿ, ಅಕ್ರಮ ಹಣ ವರ್ಗಾವಣೆ, ನೇಮಕಾತಿ ಪ್ರಕ್ರಿಯೆ ಜಾಲದಲ್ಲಿ ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಬಂಧನವಾಗಿದೆ.
ಆಮ್ ಆದ್ಮಿ ಪಾರ್ಟಿ (Aam Aadmi Party) ಹಾಗೂ ಇಡಿ ನಡುವಿನ ಜಟಾಪಟಿಗೆ, ಈಗ ಆಪ್ ಶಾಸಕ ಅಮಾನತುಲ್ಲಾ ಖಾನ್ ಸೇರಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ, ನೇಮಕಾತಿ ಕುರಿತು ಇಡಿ ಅಧಿಕಾರಿಗಳು ಶಾಸಕನ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಂಧನಕ್ಕೂ ಮೊದಲು ಸರಣಿ ಸಂದೇಶಗಳ ಮೂಲಕ ಆಪ್ ಶಾಸಕ ಅಮಾನತುಲ್ಲಾ ಖಾನ್, ಸರ್ವಾಧಿಕಾರಿಯ ಕೈಗೊಂಬೆಯಾಗಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ವ್ಯಾಪಕ ಶೋಧದಲ್ಲಿ ತೊಡಗಿದ್ದಾರೆ, ಅವರು ನನ್ನನ್ನು ಬಂಧಿಸಬಹುದು ಎಂದು ತಿಳಿಸಿದ್ದರು.
ಶಾಸಕ ಅಮಾನತುಲ್ಲಾ ಖಾನ್ ದೆಹಲಿ ವಕ್ಫ್ ಮಂಡಳಿಯ (Delhi Waqf Board) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮ ನೇಮಕಾತಿ ಮತ್ತು ಹಣಕಾಸಿನ ಅವ್ಯವಹಾರದ ನಡೆಸಿರುವ ಆರೋಪದಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ, ಅರೆ ಸೇನಾ ಪಡೆ, ಪೊಲೀಸ್ ಕಾವಲಿನಲ್ಲಿ ನಡೆಯುತ್ತಿರುವ ಪರಿಶೀಲನೆಗೆ ಖಂಡನೆ ವ್ಯಕ್ತಪಡಿಸಿರುವ ಶಾಸಕ ಪರೋಕ್ಷವಾಗಿ ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದರು.
ಇಡಿ ದಾಳಿ, ದಾಖಲೆ ಪರಿಶೀಲನೆಗೆ ಶಾಸಕ ಖಾನ್ ಇದು ನಮ್ಮ ಪಕ್ಷದ ಮೇಲಿನ ದಾಳಿ, ಇಡಿ (ED) ಕಿರುಕುಳಕ್ಕೆ ನಾವು ಹೆದರುವುದಿಲ್ಲ, ಸರ್ವಾಧಿಕಾರಿಯ ಅಣತಿಯಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದು ಅಪರಾಧವೇ.. ಅಷ್ಟಕ್ಕೂ ಈ ಸರ್ವಾಧಿಕಾರ ಎಷ್ಟು ಕಾಲ ಉಳಿಯುತ್ತದೆ ಎಂದು ಖಾನ್ ಎಕ್ಸ್ ಖಾತೆಯಲ್ಲಿ ಸಂದೇಶ ಹರಿಬಿಟ್ಟಿದ್ದರು