Gujarat : ತಾನು ಯಾವುದೇ ಕಾರಣಕ್ಕೂ ಬಿಜೆಪಿ(bjp) ಸೇರ್ಪಡೆಯಾಗುವುದಿಲ್ಲ. ನಾನು ನನ್ನ ಕ್ಷೇತ್ರದ ಮತದಾರರಿಗೆ ಏನು ಬೇಕು ಎಂದು ಕೇಳುತ್ತೇನೆ ಮತ್ತು ನಂತರ ಅವರು ನೀಡುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಭೂಪತ್ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ಭೂಪತ್ ಭಯಾನಿ(AAP MLA Bhupat Bhayani) ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆಯ(Assembly election) ಬಳಿಕ ಇತರ ಪಕ್ಷಗಳಲ್ಲಿ ಗೆದ್ದ ಶಾಸಕರು ಪಕ್ಷಾಂತರವಾಗುತ್ತಿದ್ದಾರೆ.
ಅವರ ಪೈಕಿ ಆಪ್ ಶಾಸಕ ಭೂಪತ್ ಭಯಾನಿ ಅವರ ಹೆಸರು ಮುಂಚೂಣಿಯಲ್ಲಿದೆ ಅನ್ನೋ ಊಹಾಪೋಹಕ್ಕೆ ಸದ್ಯ ತೆರೆ ಎಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ಶಾಸಕ ಭೂಪತ್ ಭಯಾನಿ, ನಾನು ಬಿಜೆಪಿ ಪಕ್ಷಕ್ಕೆ ಎಂದಿಗೂ ಸೇರುವುದಿಲ್ಲ. ನಾನು ಸಾರ್ವಜನಿಕರಿಗೆ ಏನು ಬೇಕು ಎಂದು ಕೇಳುತ್ತೇನೆ.
ಆ ಬಳಿಕ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದು ಭೂಪತ್ ಭಯಾನಿ ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/elon-musk-trolled/
ಭಯಾನಿ ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಎಎಪಿ ಟಿಕೆಟ್‌ನಲ್ಲಿ ವಿಸಾವದರ್ ವಿಧಾನಸಭಾ ಸ್ಥಾನವನ್ನು ಗೆದ್ದಿದ್ದರು.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ಜಯಗಳಿಸಿತ್ತು. ಗುಜರಾತಿನಲ್ಲಿ ಕೇವಲ 17 ಸೀಟುಗಳನ್ನು ಗೆದ್ದು ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿತ್ತು. https://youtube.com/shorts/N31q5oOc_Iw

ಈ ಮಧ್ಯೆ ಗುಜರಾತ್ ರಾಜಕೀಯ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶಿಸಿದ ಆಮ್ ಆದ್ಮಿ(AAP MLA Bhupat Bhayani) ಪಕ್ಷವು ಐದು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನ ಬಗ್ಗೆ ಗರ್ವದಿಂದ ಮಾತನಾಡಿದ ಎಎಪಿ ನಾಯಕ, ದೆಹಲಿ ಮುಖ್ಯಮಂತ್ರಿ(Delhi CM) ಅರವಿಂದ್ ಕೇಜ್ರಿವಾಲ್(Arvind Kejriwal) ನಮ್ಮ ಗೆಲುವಿಗೆ ಕಾರಣರಾದ ಗುಜರಾತ್ ಜನತೆಗೆ ಧನ್ಯವಾದ ತಿಳಿಸಿದ್ದರು. ಅಲ್ಲದೆ ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ ಎಂದು ಘೋಷಿಸಿದ್ದರು.