Bengaluru:ಸ್ಯಾಂಡಲ್‌ವುಡ್ ರೆಬೆಲ್‌ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಶ್ (abhishek ambareesh new look) ಅವರು ‘ಅಮರ್’ ಚಿತ್ರದ ಮೂಲಕ ತನ್ನ ಛಾಪು ಮೂಡಿಸಲು ರೆಡಿಯಾಗ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಅವರ ಎರಡನೇ ಚಿತ್ರ ಇದಾಗಿದ್ದು ಯಂಗ್ ರೆಬಲ್ ಸ್ಟಾರ್(abhishek ambareesh new look) ರನ್ನ ಮತ್ತೊಮ್ಮೆ ಪರದೆಯ ಮೇಲೆ ಕಾಣಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಸಿನಿಮಾದಲ್ಲಿ ದುನಿಯಾ ಸೂರಿ (Duniya Suri) ಅಭಿಷೇಕ್ ಅಂಬರೀಶ್ ಗೆ ಮೊದಲ ಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ನೂರು ದಿನಗಳಿಗೂ ಅಧಿಕ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್ ಹಾಗೂ ಟೀಸರ್ (Teaser)ಬಿಡುಗಡೆ ಆಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಅಭಿಷೇಕ್ ಅಂಬರೀಶ್ ಗಂತಲೇ ಇಂಟ್ರಡಕ್ಷನ್ (Introduction)ಹಾಡನ್ನು ವಿಭಿನ್ನವಾಗಿ ಮಾಡಲಾಗಿದಿಯಂತೆ. ಯಂಗ್ ರೆಬಲ್ ಸ್ಟಾರ್ ತಮ್ಮ ಕಾಸ್ಟ್ಯೂಮ್(Costume), ಲುಕ್, ಸ್ಟೈಲ್ ಮೂಲಕ ಈ ಚಿತ್ರದ ಹೈಲೈಟ್ ಆಗಿದ್ದಾರೆ,
ಇದನ್ನು ಓದಿ: <strong>ಮಾಡಾಳ್‌ಗೆ ನಿರೀಕ್ಷಣಾ ಜಾಮೀನು ವಿರೋಧಿಸಿ ಸಿಜೆಐಗೆ ಪತ್ರ ಬರೆದ ವಕೀಲರ ಸಂಘ</strong><strong></strong>
ಸುಧೀರ್ ಈ ಚಿತ್ರದ ನಿರ್ಮಾಪಕರಾಗಿದ್ದು, ಚರಣ್ ರಾಜ್ ಸಂಗೀತ ನಿರ್ದೇಶನದ ಮೂಲಕ, ಮಾಸ್ತಿ, ಅಮ್ರಿ ಸಂಭಾಷಣೆ ಬರೆದ ಚಿತ್ರ ಇದಾಗಿದ್ದು, ಧನು ಮಾಸ್ಟರ್ ಈ ಚಿತ್ರಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ.
ಸಿನಿಮಾಟೊಗ್ರಾಫರ್ ಶೇಖರ್ ಚಿತ್ರದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆಹಿಡಿದಿದ್ದಾರೆ. ಈ ಚಿತ್ರದಲ್ಲಿ ಇಂಟ್ರಡಕ್ಷನ್ ಹಾಡಿನ ಜೊತೆಯಲ್ಲಿ ಟಪಾಂಗುಚ್ಚಿ ಹಾಡು ಕೂಡ ಮೂಡಿ ಬಂದಿದೆಯಂತೆ.