ಬೇಡದ ಗರ್ಭವನ್ನು ತೆಗೆಸುವ ಹಕ್ಕು ಅತ್ಯಾಚಾರ ಸಂತ್ರಸ್ತೆಯರಿಗೆ ಇರುತ್ತದೆ ಎಂಬ ತನ್ನ ಹಿಂದಿನ ಆದೇಶವನ್ನು ಕಡೆಗಣಿಸಿ (abortion permission from sc) ಸಂತ್ರಸ್ತೆಯ ಗರ್ಭಪಾತಕ್ಕೆ
ಅನುಮತಿ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ (Gujarat High court) ಅನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಜತೆಗೆ 27 ತಿಂಗಳ ಗರ್ಭವನ್ನು ತೆಗೆಸಲು ಸಂತ್ರಸ್ತ
ಮಹಿಳೆಗೆ (abortion permission from sc) ಅನುಮತಿ ಕೊಟ್ಟಿದೆ.

ಅಲ್ಲದೆ ಗರ್ಭಪಾತ ಮನವಿಯನ್ನು ತಿರಸ್ಕರಿಸಿದ್ದ ಗುಜರಾತ್ ಹೈಕೋರ್ಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಗರ್ಭಪಾತ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್ನ ನಡೆಯು
ಸಂವಿಧಾನದ ತತ್ವಕ್ಕೆ ವಿರುದ್ಧವಾದುದು ಎಂದು ಸುಪ್ರೀಂ ಕೋರ್ಟ್ (Supreme Court) ನ್ಯಾಯಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಗುಜರಾತ್ ಹೈಕೋರ್ಟ್ನಲ್ಲಿ (Gujarat High court) ನಡೆಯುತ್ತಿರುವುದಾದರೂ ಏನು, ಸುಪ್ರೀಂ ಕೋರ್ಟ್ನ ಆದೇಶಗಳಿಗೆ ನ್ಯಾಯಮೂರ್ತಿಗಳು ಹೀಗೆ ಉತ್ತರ ನೀಡಬಹುದಾ, ಇದನ್ನು ಒಪ್ಪಲಾಗದು
ಅಲ್ಲದೆ ಅತ್ಯಾಚಾರ ಸಂತ್ರಸ್ತೆಯು ಗರ್ಭಿಣಿಯಾಗಿ ಮುಂದುವರಿಯಲು ಆದೇಶಿಸುವ ಮೂಲಕ ಆಕೆಗೆ ಆದ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನದಿಂದ ಹೈಕೋರ್ಟ್ ಹಿಂದೆ ಸರಿದಿದ್ದು, ಇದು ಸುಪ್ರೀಂ
ಕೋರ್ಟ್ನ ಆದೇಶಗಳನ್ನು ಕಡೆಗಣನೆ ಮಾಡಿದಂತೆ ಭಾಸವಾಗುತ್ತಿದೆ ಎಂದು 25 ವರ್ಷದ ಅತ್ಯಾಚಾರ ಸಂತ್ರಸ್ತೆಯ ಅರ್ಜಿ ವಿಚಾರಣೆ ವೇಳೆ ನ್ಯಾ. ಬಿ.ವಿ. ನಾಗರತ್ನ (B V Nagarathna) ಮತ್ತು
ನ್ಯಾ. ಉಜ್ಜಲ್ ಭುಯಾನ್ (Ujjal Bhuyan) ಅವರಿದ್ದ ಪೀಠ ಚಾಟಿ ಬೀಸಿದೆ.
ವಿವಾಹೇತರ ಗರ್ಭಾವಸ್ಥೆಯು ಅಪಾಯಕಾರಿಯಾಗಿದ್ದು, ಅದರಲ್ಲೂ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ಅದು ಸಂತ್ರಸ್ತೆಗೆ ಆಘಾತ, ಮಾನಸಿಕ ಮತ್ತು ದೈಹಿಕ ಒತ್ತಡ ಉಂಟುಮಾಡುತ್ತದೆ.
ಲೈಂಗಿಕ ದೌರ್ಜನ್ಯವು ಯಾತನೆಯಾಗಿದ್ದು, ಗರ್ಭಾವಸ್ಥೆಯಲ್ಲಿ ಕೇಳಿಬರುವ ನಿಂದನೆಗಳು ಘಾಸಿಗೊಳಿಸುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸಂತ್ರಸ್ತೆಯ ಚರ್ಚೆ ಮತ್ತು ವೈದ್ಯಕೀಯ ವರದಿಗಳನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡುತ್ತಿದ್ದೇವೆ. ಸಂತ್ರಸ್ತೆಯು ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹಾಜರಾಗುವಂತೆ ನಿರ್ದೇಶನ
ನೀಡುತ್ತಿದ್ದೇವೆ ಎಂದು ಪೀಠ ಹೇಳಿದ್ದು, ತನ್ನ ದೇಹದ ಮೇಲೆ ಮಹಿಳೆಗೆ ಮಾತ್ರವೇ ಹಕ್ಕು ಇರುವುದು ಎಂದು ಪುನರುಚ್ಚರಿಸಿರುವ ಪೀಠ ಅಬಾರ್ಷನ್ (Abortion) ಮಾಡಿಸಿಕೊಳ್ಳಬೇಕೇ ಎಂಬ ಪ್ರಶ್ನೆ
ಎದುರಾದಾಗ ಆಕೆಯೇ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುತ್ತಾಳೆ ಎಂದಿದೆ.
ದೇಶದ ಬೇರೆ ಯಾವ ನ್ಯಾಯಾಲಯವೂ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಡೆಗಣಿಸುವಂತೆ ಇಲ್ಲ ಎಂದು ಗುಜರಾತ್ ಹೈಕೋರ್ಟ್ ನಡೆಗೆ ಸುಪ್ರೀಂಕೋರ್ಟ್ ಕಿಡಿಕಾರಿದ್ದು, ಶನಿವಾರ ರಜಾ
ದಿನವಾಗಿದ್ದರೂ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ವಿಚಾರಣೆ ನಡೆಸಲಾಗಿತ್ತು. ಸುರಕ್ಷಿತ ಗರ್ಭಪಾತ ಪ್ರಕ್ರಿಯೆಗೆ ಇರುವ ಅವಕಾಶಗಳನ್ನು ಮೌಲ್ಯಮಾಪನ ಮಾಡಿ ಹೊಸದಾಗಿ ವರದಿ
ಸಲ್ಲಿಸುವಂತೆ ವೈದ್ಯರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಸುರಕ್ಷಿತ ಗರ್ಭಪಾತ ಸಾಧ್ಯ ಎಂದು ವೈದ್ಯಕೀಯ ವರದಿ ತಿಳಿಸಿತ್ತು. ಇದರ ಬೆನ್ನಲ್ಲ ಆಕೆಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡಿದೆ.
ಗುಜರಾತ್ ಹೈಕೋರ್ಟ್ನ ಏಕಸದಸ್ಯ ಪೀಠ ಅತ್ಯಾಚಾರ ಸಂತ್ರಸ್ತೆಯೊಬ್ಬರ ಗರ್ಭಪಾತ ಮನವಿಯನ್ನು ಶನಿವಾರ ನಿರಾಕರಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ದಿನ ಸುಪ್ರೀಂ ಕೋರ್ಟ್
ಸಂತ್ರಸ್ತೆಯ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿತ್ತು. ಭ್ರೂಣ ಒಂದು ವೇಳೆ ಬದುಕುಳಿಯುವ ಸಾಧ್ಯತೆ ಕಂಡುಬಂದರೆ ಅದನ್ನು ಉಳಿಸಿಕೊಳ್ಳಲು ವೈದ್ಯಕೀಯ ಸೂಕ್ತ ಕ್ರಮಗಳನ್ನು ಆಸ್ಪತ್ರೆ
ಕೈಗೊಳ್ಳಬೇಕು. ಭ್ರೂಣ ಬದುಕುಳಿದರೆ ಕಾನೂನಿನ ಪ್ರಕಾರ ರಾಜ್ಯ ಸರ್ಕಾರ ಮಗುವನ್ನು ದತ್ತು ಪಡೆಯಬೇಕು ಎಂದೂ ನ್ಯಾಯಪೀಠ ಹೇಳಿದೆ.
ಭವ್ಯಶ್ರೀ ಆರ್.ಜೆ