• ಭಾರತ ಕಂಡ ಶ್ರೇಷ್ಠ ಪ್ರಧಾನಮಂತ್ರಿ, ಧಿಮಂತ ರಾಜಕೀಯ ನೇತಾರ ಅಟಲ್ ಬಿಹಾರಿ ವಾಜಪೇಯಿ (about atal bihari vajpayee) ಅವರು ಆಗಸ್ಟ್ 16 2018ರಂದು ನಮ್ಮನ್ನು
ಅಗಲಿದರು. ಭಾರತದ ರಾಜಕೀಯ ಚರಿತ್ರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಟಲ್ಜೀ ಅವರ ಕುರಿತ ಅಚ್ಚರಿ ಸಂಗತಿಗಳ ವಿವರ ಇಲ್ಲಿದೆ.

• ಮಧ್ಯಪ್ರದೇಶದ ಮದ್ಯಮ ವರ್ಗದ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ (Krishna Bihari Vajpayee) ಮತ್ತು ಕೃಷ್ಣ ದೇವಿ (Krishna Devi) ದಂಪತಿಗಳ ಮಗನಾಗಿ ಡಿಸೆಂಬರ್ 25,
1924 ರಂದು ಗ್ವಾಲಿಯರ್ನಲ್ಲಿ (about atal bihari vajpayee) ಅಟಲ್ಜೀ ಜನನ.
• 1942ರ ಕ್ವಿಟ್ ಇಂಡಿಯಾ (Quit India) ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಇವರು ಆಮೇಲೆ ಆರೆಸ್ಸೆಸ್ಸ್ ಸೇರಿದರು.
• ಹದಿಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು 1950ರಲ್ಲಿ ಆರೆಸ್ಸೆಸ್ ಮ್ಯಾಗಜಿನ್ (RSS Magazine) ನಡೆಸುವುದಕ್ಕೋಸ್ಕರ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು.
• ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮೂಖರ್ಜಿ (Shyam Prasad Mukherjee) ಅವರ ಆಪ್ತ ಅನುಯಾಯಿಯಾಗಿದ್ದರು.
• ಮೂಖರ್ಜಿಯ ಸಾವು ನಂತರ ವಾಜಪೇಯಿ 1957ರಲ್ಲಿ ಮೊದಲ ಬಾರಿ ಸಂಸತ್ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
• ಮೊರಾರ್ಜಿ ದೇಸಾಯಿ (Morarji Desai) ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಅವರಿಗೆ
ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.
• ಭಾರತ ಸರ್ಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ (Padma Vibhushan) ಮತ್ತು ಮಾರ್ಚ್ 27,2015 ರಂದು ಭಾರತ ರತ್ನ (Bharata Ratna) ಪ್ರಶಸ್ತಿ ನೀಡಿ ಗೌರವಿಸಿದೆ.
• ವಾಜಪೇಯಿ ಅವರು ತಮ್ಮ ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿದ್ದರು ಮತ್ತು ಅವರು ನಮಿತಾ (Namita) ಎಂಬ ಹೆಣ್ಣು ಮಗುವನ್ನು ದತ್ತು ಪಡೆದರು.

• ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್ – ನಾಲ್ಕು ವಿಭಿನ್ನ ರಾಜ್ಯಗಳಿಂದ ಚುನಾಯಿತರಾದ ಭಾರತೀಯ ರಾಜಕೀಯದಲ್ಲಿ ಮಾಸ್ಟರ್ ವಾಗ್ಮಿ ಬಹುಶಃ ಏಕೈಕ ಸಂಸದರಾಗಿದ್ದಾರೆ.
• ವಿರೋಧ ಪಕ್ಷದ ಸಹೋದ್ಯೋಗಿಗಳಿಂದ ಅಪಾರವಾಗಿ ಗೌರವಿಸಲ್ಪಟ್ಟ ಕೆಲವೇ ನಾಯಕರಲ್ಲಿ ಅವರು ಒಬ್ಬರು. ಅವರು ಪೂರ್ಣ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ ಮೊದಲ
ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ.
• ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತ ಪರಮಾಣು ರಾಷ್ಟ್ರವಾಯಿತು. ಭಾರತೀಯ ಸೇನೆಯ ಪೋಖ್ರಾನ್ (Pokhran) ಪರೀಕ್ಷಾ ಶ್ರೇಣಿಯಲ್ಲಿ ಐದು ಪರಮಾಣು ಬಾಂಬ್ಗಳ
ಸರಣಿಯನ್ನು ಸ್ಫೋಟಿಸಿದ ಪೋಖ್ರಾನ್-II ಅನ್ನು ದೇಶವು ಯಶಸ್ವಿಯಾಗಿ ನಡೆಸಿತು.