Karnataka : 2014ರಲ್ಲಿ ಬಿಜೆಪಿಯು (about BJP governmenet promises) ತನ್ನ ಪ್ರಣಾಳಿಕೆ ಜನರ ಮುಂದಿಟ್ಟು ದೇಶದ ಎಲ್ಲರನ್ನೂ ಗಮನ ಸೆಳೆದಿತ್ತು. ಅದರಲ್ಲಿ ಎಲ್ಲರಿಗೂ ಶೀಘ್ರ ನ್ಯಾಯ
ಕೊಡಿಸುವ ಭರವಸೆಯೂ ಒಂದು. ಆದರೆ ಈಗ ಏನಾಯಿತು? ಬಿಜೆಪಿ ಅಧಿಕಾರಕ್ಕೆ ಬಂದಾಗ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದನ್ನು ದೇಶದಾದ್ಯಂತ ಜನರು ನೋಡುತ್ತಿದ್ದಾರೆ.
ಬಿಜೆಪಿ ಈ ಉಪಾಯವನ್ನು ಮಾಡಿದ್ದು ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಉದ್ದೇಶದಿಂದಲ್ಲ, ಸಾಮಾನ್ಯ ಜನರನ್ನು ಮೆಚ್ಚಿಸಲು ಎಂದು ತೋರುತ್ತದೆ. ಹಾಗಾದರೆ ಬಿಜೆಪಿಯ
ಭರವಸೆಗಳು (about BJP governmenet promises) ಏನಾದವು?

ಉದ್ಯೋಗ
ಉದ್ಯೋಗ ಸೃಷ್ಟಿಯು ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸ್ಥಿರತೆಗೆ ನಿರ್ಣಾಯಕವಾಗಿದೆ. ಲಕ್ಷಾಂತರ ಉದ್ಯೋಗಾವಕಾಶಗಳನ್ನು ಒದಗಿಸುವ ಭರವಸೆ ನೀಡಲಾಗಿತ್ತು. ಉದ್ಯೋಗ ವಿನಿಮಯ
ಕೇಂದ್ರಗಳನ್ನು ಯುವಜನರು ಉದ್ಯೋಗಾವಕಾಶಗಳ ಬಗ್ಗೆ ಕಲಿಯುವ ವೃತ್ತಿ ಕೇಂದ್ರಗಳಾಗಿ ಪರಿವರ್ತಿಸಲು ಬಿಜೆಪಿ ವಾಗ್ದಾನ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯ ಮಾತನ್ನಾಡಿತ್ತು.
ಕೋಟಿ ಕೋಟಿ ಉದ್ಯೋಗಗಳ ಆಶ್ವಾಸನೆ ಅಲ್ಲೇ ಉಳಿದಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಹಾಗೆ ಹೇಳಿಕೊಂಡು ಅಧಿಕಾರಕ್ಕೆ ಬಂದವರು ಒಂಬತ್ತು ವರ್ಷದಿಂದಲೂ ಕಥೆ ಹೇಳುತ್ತಿದ್ದಾರೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ವಿಚಾರ ಹಾಗಿರಲಿ, ಇರುವ ಉದ್ಯೋಗಗಳೂ ಈಗ ಇಲ್ಲವಾಗಿವೆ.
ಉನ್ನತ ಪದವಿ ಪಡೆದ ಯುವಕರು ವಾಹನ ಚಾಲನೆ,ಡ್ರೈವರ್ ಕೆಲಸಕ್ಕೆ, ಕೂಲಿ ಕೆಲಸಕ್ಕೆ ಅರ್ಜಿ ಹಾಕುತ್ತಿರುವ, ಹಾಗೂ ಟೀ ಪಕೋಡ ಅಂಗಡಿ ಇಡುವ ಕಟು ವಾಸ್ತವವನ್ನು ಇದೀಗ ಈ ದೇಶ ನೋಡಬೇಕಾಗಿದೆ.
ಉದ್ಯೋಗ ಕೇಳಿದರೆ, ಪಕೋಡ ಮಾರಬಹುದಲ್ಲವೆ? ಅದನ್ನೂ ಉದ್ಯೋಗ ಎನ್ನುತ್ತೇವಲ್ಲವೆ? ಎಂದು ಪ್ರಧಾನಿಯೇ ಹೇಳುತ್ತಾರೆ.

ದೇಶವು 2017 ರಿಂದ ನಿರುದ್ಯೋಗವನ್ನು ಎದುರಿಸುತ್ತಿದೆ. ಜನರು ತೀವ್ರ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಗ್ರಾಮೀಣ ಉದ್ಯೋಗದ ವಿಷಯದಲ್ಲಿ, ನಾವು ಮಹಾತ್ಮ ಗಾಂಧಿ
(Mahatma Gandhi) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ ಕಾರ್ಯಕ್ರಮಕ್ಕಾಗಿ 2023 ರ ಫೆಡರಲ್ ಬಜೆಟ್ ಅನ್ನು ನೋಡಿದರೆ, ಕಾರ್ಯಕ್ರಮದ ಅನುದಾನವನ್ನು ಗಣನೀಯವಾಗಿ
ಕಡಿತಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದರೂ, ಪ್ರಸ್ತುತ ಗುಣಮಟ್ಟದ ಉದ್ಯೋಗ ಆಯ್ಕೆಗಳ ಕೊರತೆಯಿದೆ. ಗ್ರಾಮೀಣ ಭಾರತದಲ್ಲಿ ಕಡಿಮೆ ಸಂಬಳದ
ಉದ್ಯೋಗಗಳು ಹೆಚ್ಚು ಸಾಮಾನ್ಯವಾಗಿದೆ.
ಸ್ಮಾರ್ಟ್ ಸಿಟಿಗಳು
ಜೂನ್ 2015 ರಲ್ಲಿ ಪ್ರಾರಂಭವಾದ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ, ಸರ್ಕಾರವು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ 100 ನಗರಗಳನ್ನು ಆಯ್ಕೆ ಮಾಡಿದೆ. ಜೀವನದ ಗುಣಮಟ್ಟ, ನೈರ್ಮಲ್ಯ, .
ಸಾರಿಗೆ, ವಿದ್ಯುತ್ ಸರಬರಾಜು, ಕೈಗೆಟುಕುವ ವಸತಿ, ಡಿಜಿಟಲೀಕರಣ, ಸುಸ್ಥಿರ ಪರಿಸರ ಮತ್ತು ಉತ್ತಮ ಆಡಳಿತ, ಇತರ ಮೂಲಭೂತ ಅಂಶಗಳನ್ನು ಸುಧಾರಿಸಲು 100 ನಗರಗಳನ್ನು ಆಯ್ಕೆ ಮಾಡಲಾಗಿದೆ.
ಆದರೆ ಸ್ಮಾರ್ಟ್ ಸಿಟಿ ಮಿಷನ್ (Smart City Mission)ಸಂಪೂರ್ಣವಾಗಿ ಹೊಸ ನಗರಗಳನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸುವುದನ್ನು ಒಳಗೊಂಡಿಲ್ಲ ಎಂಬುದನ್ನು ಗಮನಿಸಬೇಕು. ಬದಲಾಗಿ, ಇದು
ಅಸ್ತಿತ್ವದಲ್ಲಿರುವ ನಗರಗಳನ್ನು ಪರಿವರ್ತಿಸಲು ಮತ್ತು ಅವುಗಳ ಮೂಲಸೌಕರ್ಯ, ಸೇವೆಗಳು ಮತ್ತು ಒಟ್ಟಾರೆ ಜೀವನಶೈಲಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಉದಾಹರಣೆಗೆ, ದೆಹಲಿ(Delhi),
ಪುಣೆ(Pune) ಮತ್ತು ಉದಯಪುರ(Udayapura) ಈಗಾಗಲೇ ನಗರಗಳಾಗಿವೆ. ಮತ್ತೆ ಅವುಗಳನ್ನು ಸರ್ಕಾರ ಹೇಗೆ ಸ್ಮಾರ್ಟ್ ಮಾಡುತ್ತದೆ? ಸರ್ಕಾರದ ಪ್ರಕಾರ, “ಸ್ಮಾರ್ಟ್” ನ ವ್ಯಾಖ್ಯಾನವು ಅಸ್ಪಷ್ಟವಾಗಿದೆ.
ಸ್ಮಾರ್ಟ್ ಸಿಟಿಗಳಿಗೆ ಸರಿಯಾದ ಒಳಚರಂಡಿ, ದಕ್ಷ ಆಡಳಿತ, ಉತ್ತಮ ಗಾಳಿ, ಉತ್ತಮ ಪ್ರಯಾಣದ ಸಮಯ ಇತ್ಯಾದಿಗಳ ಅಗತ್ಯವಿರುತ್ತದೆ. ಆದರೆ ಲಭ್ಯವಿರುವ ಸಂಪನ್ಮೂಲಗಳ ಹೊರತಾಗಿಯೂ
ನಗರಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಉತ್ತೇಜಿಸುವುದು ಬಿಜೆಪಿಯ ಏಕೈಕ “ಸ್ಮಾರ್ಟ್” ಕಲ್ಪನೆಯಾಗಿದೆ.
ಬೆಲೆ ಏರಿಕೆ
ಬಿಜೆಪಿ ತನ್ನ 2014 ರ ಪ್ರಣಾಳಿಕೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ಬಡ್ಡಿದರಗಳನ್ನು ನಿಯಂತ್ರಿಸುವ ಬಗ್ಗೆ ಮಾತನಾಡಿದೆ. ಆದರೆ ಏನಾಯಿತು? ಏಪ್ರಿಲ್ 2022 ರಲ್ಲಿ, ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ
ಗರಿಷ್ಠ 7.8% ಅನ್ನು ಮುಟ್ಟಿತು, ಆದರೆ ಸಗಟು ಹಣದುಬ್ಬರವು ಏಕಕಾಲದಲ್ಲಿ ಒಂಬತ್ತು ವರ್ಷಗಳ ಗರಿಷ್ಠ 15.08% ಗೆ ಏರಿತು. ವಾಸ್ತವವಾಗಿ, ಚಿಲ್ಲರೆ ಹಣದುಬ್ಬರವು 2023 ರ RBI ಯ 6% ಗುರಿಗಿಂತ ಸ್ವಲ್ಪ
ಹೆಚ್ಚಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಗತ್ಯ ವಸ್ತುಗಳ ಖರೀದಿಗೆ ಬಂದಾಗ ಎಲ್ಲರೂ (ಶ್ರೀಮಂತರನ್ನು ಹೊರತುಪಡಿಸಿ) ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ ಎಂಬುದು ನಿಜ.

ನಿರಂತರವಾದ ಹೆಚ್ಚಿನ ಹಣದುಬ್ಬರವು 2023 ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಮನೆಯ ಉಳಿತಾಯವನ್ನು 30 ವರ್ಷಗಳ ಹಿಂದೆ ಕಂಡ ಮಟ್ಟಕ್ಕೆ ತಳ್ಳಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ
ಜನರು ಕಷ್ಟಪಟ್ಟು ದುಡಿದ ಉಳಿಕೆಯಿಂದಲೇ ಈ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಆದಾಗ್ಯೂ, ಪ್ರತಿಯೊಬ್ಬರೂ ಹೆಚ್ಚಿನ ಬೆಲೆಯ ಅಗತ್ಯ ವಸ್ತುಗಳನ್ನು ಪಡೆಯಲು ಸಾಧ್ಯವಿಲ್ಲ. ಶ್ರೀಮಂತರು ನಿರಾಳವಾಗಿಯೇ
ಇದ್ದಾರೆ ಮತ್ತು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ ಎಂಬುದನ್ನೇ ಇದು ತೋರಿಸುತ್ತದೆ.
ಇದನ್ನೂ ಓದಿ : ಹಗಲಿನಲ್ಲಿ ಬಳಸುವ ವಿದ್ಯುತ್‌ಗೆ ಶೇ.20 ಕಡಿಮೆ ಶುಲ್ಕ: ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಗೆ ಕೇಂದ್ರ ನಿರ್ಧಾರ
ಅಧಿಕಾರ ಬಂತು.ಆದರೆ ಜನರಿಗಾಗಿ ಏನನ್ನೂ ಮಾಡಿಲ್ಲ ಕೊಟ್ಟ ಭರವಸೆಗಳೆಲ್ಲ ಅಲ್ಲೇ ಉಳಿದವು. ಎಂಬ ಕಿಂಚಿತ್ ಪಶ್ಚಾತ್ತಾಪವೂ ಇಲ್ಲದ ಸರಕಾರ ಇನ್ನೂ ಕೂಡ ಬಡಾಯಿ ಮಾತಾಡುತ್ತಲೇ ಇದೆ.
ಜನರನ್ನು ಮಾತಿನಿಂದಲೇ ಮರುಳುಗೊಳಿಸುವ ತನ್ನ ತಂತ್ರವನ್ನು ಮುಂದುವರಿ ಸಿಯೇ ಇದೆ. ಈ ಹಂತದಲ್ಲಿಯೇ ಇದೀಗ ಇನ್ನೊಂದು ಚುನಾವಣೆ ಎದುರಾಗುತ್ತಿದೆ.
ರಶ್ಮಿತಾ ಅನೀಶ್