Bengaluru (ಜೂ.27): ಮುಂಬರುವ ಲೋಕಸಭೆ ಚುನಾವಣೆ (about caste census report)ಹಿನ್ನೆಲೆಯಲ್ಲಿ ‘ಜಾತಿವಾರು ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ವರದಿ’ ಅಂದರೆ ಜಾತಿಗಣತಿ ವಿಚಾರ
(Caste Census) ದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದಿರಲು ಸದ್ಯಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು
ರಾಜ್ಯ ಕಾಂಗ್ರೆಸ್ (about caste census report) ಸರ್ಕಾರದ ಆರಂಭಿಕ ಸಚಿವ ಸಂಪುಟ ಸಭೆಗಳಲ್ಲೇ ಪ್ರಸ್ತಾಪಿಸಿದ್ದರು.

ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಹಿಂದುಳಿದ ವರ್ಗಗಳ ಆಯೋಗದಿಂದ ಸಿದ್ಧಪಡಿಸಿರುವ ಜಾತಿಗಣತಿ ವರದಿ ಸ್ವೀಕರಿಸುವ ಕುರಿತು ಚರ್ಚೆಯಾಗಿತ್ತು.
ಈ ವೇಳೆ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಜಾತಿ ಹಾಗೂ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಿಗೆ ಕೈ ಹಾಕದಿರುವುದು ಒಳ್ಳೆಯದು ಎಂದು ಬಹುತೇಕ ಸಂಪುಟ ಸದಸ್ಯರು ಸಲಹೆ ನೀಡಿದರು.
ಇದನ್ನೂ ಓದಿ : ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ
ಕಳೆದ ಚುನಾವಣೆ (2018)ಯಲ್ಲಿ ಜಾತಿ ಹಾಗೂ ಧರ್ಮದ ವಿಚಾರದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವಲ್ಲಿ ಎಡವಿದ ಕಾರಣ ಕಹಿ ಅನುಭವ ಕಂಡಿದ್ದೇವೆ. ಪರಿಣಾಮವಾಗಿ 2018ರ ವಿಧಾನಸಭೆ ಚುನಾವಣೆಯಲ್ಲಿ
(Assembly Election) ಸರ್ಕಾರ ಜನಪರ ಆಡಳಿತ ನೀಡಿದ್ದರೂ ಸೋಲುಣ್ಣಬೇಕಾಯಿತು. ಹೀಗಾಗಿ ಇಂತಹ ವಿಷಯಗಳಲ್ಲಿ ಎಚ್ಚರಿಕೆ ಅತೀ ಅಗತ್ಯ ಎಂದು ಸಲಹೆ ಕೇಳಿ ಬಂದಿತ್ತು ಎನ್ನಲಾಗಿದೆ.

ಸರ್ಕಾರವು ಸದ್ಯದ ಮಟ್ಟಿಗೆ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ಸದ್ಯ ರಾಜ್ಯದ ಜನತೆಯು ಕಾಂಗ್ರೆಸ್ ಪಕ್ಷದ ಬಗ್ಗೆ ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದಾಗಿ ಉತ್ತಮ
ಅಭಿಪ್ರಾಯ ಹೊಂದಿದ್ದಾರೆ. ನಾವು ಇದರ ಲಾಭವನ್ನು ಲೋಕಸಭೆ ಚುನಾವಣೆಯಲ್ಲಿ ಪಡೆಯುವ ಬಗ್ಗೆ ಚಿಂತಿಸಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ಜಾತಿ ಗಣತಿಯಂತಹ
ವಿಚಾರಗಳನ್ನು ಪರಿಗಣಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
- ರಶ್ಮಿತಾ ಅನೀಶ್