Bengaluru : ನೂತನ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ ಯೋಜನೆ (about GruhaJyoti zero bill) ಕೂಡ ಒಂದಾಗಿದೆ. ಇದೇ ತಿಂಗಳಿನಿಂದ ಪ್ರತಿ ಮನೆಗೆ
ಮಾಸಿಕ 200 ಯುನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಅಂದರೆ ಜುಲೈ ತಿಂಗಳಿನಲ್ಲಿ 200 ಯೂನಿಟ್ ಒಳಗೆ ವಿದ್ಯುತ್ ಬಳಸಿದವರು ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ್
ಪಾವತಿಸುವ ಅಗತ್ಯ (about GruhaJyoti zero bill) ಇರುವುದಿಲ್ಲ.

ಆದರೂ ಸಹ ಈ ಬಾರಿ ಈ ಯೋಜನೆಯಿಂದ ಕೆಲವರು ವಂಚಿತರಾಗುವ ಸಾಧ್ಯತೆ ಇದೆ. ಏಕೆಂದರೆ ನೀವು ಗೃಹಜ್ಯೋತಿ ಯೋಜನೆಯ ಫಲಾನುಭವಿ ಆಗಬೇಕೆಂದರೆ ಇದರ ನೋಂದಣಿ ಕಡ್ಡಾಯವಾಗಿದೆ
ಒಂದು ವೇಳೆ ನೀವು ನೋಂದಣಿ ಮಾಡಿಕೊಳ್ಳದಿದ್ದರೆ ಆಗ ಯೋಜನೆಯ ಫಲಾನುಭವಿ ಎಂದು ಅಂಥವರನ್ನು ಪರಿಗಣಿಸುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಹೀಗಾಗಿ ಗೃಹಜ್ಯೋತಿ ಯೋಜನೆ ಮೂಲಕ ಮೊದಲ ತಿಂಗಳಿನಿಂದಲೇ ಅದರ ಪ್ರಯೋಜನ ಪಡೆಯಬೇಕಾದರೆ ನೀವು ಈ ಜುಲೈನಲ್ಲೇ (July) ನೋಂದಣಿ ಮಾಡಿಸಿಕೊಂಡಿರಬೇಕಾಗುತ್ತದೆ.
ಈ ಕುರಿತು ವಿಧಾನಸೌಧದಲ್ಲಿ (Vidhana soudha) ಇಂಧನ ಸಚಿವ ಕೆ.ಜೆ.ಜಾರ್ಜ್ (K.J George) ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಗೃಹಜ್ಯೋತಿ ನೋಂದಣಿಗೆ ಕೊನೆಯ ದಿನಾಂಕ ಎಂಬುವುದು ಇಲ್ಲ ಆದರೂ ಒಂದು ವೇಳೆ ನೀವು ಶೂನ್ಯ ಬಿಲ್ ಅನ್ನು ಆಗಸ್ಟ್ (August) ತಿಂಗಳಲ್ಲಿ ನೀವು ಪಡೆಯಬೇಕಾದರೆ ನಿಗದಿತ ಅವಧಿಗೂ
ಮೊದಲೇ ಈ ಯೋಜನೆಯ ನೋಂದಣಿ ಮಾಡಿಸಿಕೊಂಡಿರಬೇಕು. ಅಂದರೆ ನೀವು ಈ ತಿಂಗಳು ಅಂದರೆ ಜುಲೈ 26 ಅಥವಾ 27ರ ಒಳಗೆ ನೋಂದಣಿ ಮಾಡಿಸಿಕೊಂಡಿದ್ದರೆ ಮಾತ್ರ ಆಗಸ್ಟ್ ನಲ್ಲಿ ನಿಮಗೆ
ಶೂನ್ಯ ಬಿಲ್ ಬರಲಿದೆ. ಇಲ್ಲವಾದಲ್ಲಿ ಎಂದಿನಂತೆ ಬಿಲ್ ಬರುತ್ತದೆ , ಆಗ ಸಾರ್ವಜನಿಕರು ಅದನ್ನು ಪಾವತಿಸುವುದು ಅನಿವಾರ್ಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಗೃಹಜ್ಯೋತಿ ನೋಂದಣಿಗೆ ಈ ಲಿಂಕ್ ಬಳಸಿ: https://sevasindhugs.karnataka.gov.in
ಗೃಹಜ್ಯೋತಿ ನೋಂದಣಿ ಸ್ಟೇಟಸ್ ಪರೀಕ್ಷಿಸಿಕೊಳ್ಳಲು ಈ ಲಿಂಕ್ ಬಳಸಿ: https://sevasindhu.karnataka.gov.in/statucTrack/Track_ಸ್ಟೇಟಸ್
- ರಶ್ಮಿತಾ ಅನೀಶ್