Agra: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ ಭಾರತೀಯ ಜನತಾ ಪಕ್ಷದ (about Mahesh Baghel funeral) ಮಾಜಿ ಜಿಲ್ಲಾಧ್ಯಕ್ಷ ಮಹೇಶ್ ಬಾಘೇಲ್ (Mahesh Baghel) ಅವರ ಆರೋಗ್ಯ
ತೀವ್ರವಾಗಿ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಲ್ಪ ಸಮಯದ ನಂತರ, ವೈದ್ಯರು ಬಾಘೇಲ್ ಅವರು ನಿಧಾನರಾಗಿದ್ದಾರೆ ಎಂದು ಘೋಷಿಸಿದರು ಮತ್ತು ಅವರ ದೇಹವನ್ನು ಮನೆಗೆ
ಕೊಂಡೊಯ್ಯಲು (about Mahesh Baghel funeral) ಸೂಚಿಸಿದ್ದರು

ಅದರಂತೆ ಬಾಘೇಲ್ ಅವರ ಕುಟುಂಬ ದುಃಖದ ಮುಖದೊಂದಿಗೆ ಮನೆಗೆ ಮರಳಿತು ಮತ್ತು ಬಾಘೇಲ್ ಅವರ ದೇಹವು ಮನೆಗೆ ಸ್ಥಳಾಂತರಗೊಂಡಾಗ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ
ನಡೆಸಲಾಯಿತು. ಬಾಘೇಲ್ ಅವರ ದೇಹದಲ್ಲಿ ಆ ಸಮಯದಲ್ಲಿ ಕೆಲವು ಚಲನವಲಗಳು ಕಾಣಿಸಿತ್ತು. ಸದ್ಯ ಅವರನ್ನು ಆಸ್ಪತ್ರೆಗೆ (Hospital) ವಾಪಸ್ ಕಳುಹಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ಇದನ್ನೂ ಓದಿ : 2023-24ನೇ ಸಾಲಿನ ಖಾಸಗಿ ಕೋಟಾದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕ ಹೆಚ್ಚಳ; ಎಷ್ಟು ಶುಲ್ಕ ಪಾವತಿ?
ಬಾಘೇಲ್ ಕಣ್ಣು ತೆರೆದಾಗ, ಅವರ ಪ್ರೀತಿಪಾತ್ರರು ಮತ್ತು ಸಂಬಂಧಿಕರು ಅಳುತ್ತಿದ್ದರು ಮತ್ತು ಅವರ ದೇಹದಲ್ಲಿ ಚಲನೆ ಇತ್ತು. ಇದನ್ನು ನೋಡಿದ ಸಂಬಂಧಿಕರು ತುಂಬಾ ಖುಷಿಪಟ್ಟು ಆಸ್ಪತ್ರೆಗೆ ಕರೆದೊಯ್ದು
ಚಿಕಿತ್ಸೆ ಕೊಡಿಸುತ್ತಿದ್ದಾರೆ. ಸಹೋದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಬಾಘೇಲ್ ಅವರ ಕಿರಿಯ ಸಹೋದರ ಲಖನ್ ಸಿಂಗ್ ಬಾಘೇಲ್ (Lakhan Singh Baghel) ಹೇಳಿದ್ದಾರೆ. ಅಷ್ಟೇ ಅಲ್ಲದೆ
ಬಾಘೇಲ್ ಅವರ ರಕ್ತದೊತ್ತಡ (Blood Pressure) ಸಾಮಾನ್ಯವಾಗಿದೆ ಎಂದು ಹೇಳಿದರು. ಸದ್ಯ ಅವರಿಗೆ ನೀಡುತ್ತಿರುವ ಚಿಕಿತ್ಸಾ ಪರಿಣಾಮ ಉತ್ತಮವಾಗಿದ್ದು, ಆರೋಗ್ಯವಾಗಿದ್ದಾರೆ ಎಂದರು.

ಮಹೇಶ್ ಬಾಘೇಲ್ ಅವರನ್ನು ನಗರದ ಪುಷ್ಪಾಂಜಲಿ (Pushpanjali) ಆಸ್ಪತ್ರೆಗೆ ಕರೆದೊಕೊಂಡು ಹೋಗಿ ದಾಖಲಿಸಿದ್ದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಅವರನ್ನು ಇದರ ನಂತರ, ಸರಾಯ್ ಖ್ವಾಜಾ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಮನೆ ತಲುಪಿದ ನಂತರ ಬಾಘೇಲ್ ಅವರಿಗೆ ಪ್ರಜ್ಞೆ ಬಂದು ಕಣ್ಣು ತೆರೆದರು ಎಂದು ಬಾಘೇಲ್ ಅವರ ಮಕ್ಕಳಾದ ಅಭಿಷೇಕ್
(Abhishek) ಮತ್ತು ಅಂಕಿತ್ (Akit) ಈ ಬಗ್ಗೆ ಹೇಳಿದ್ದಾರೆ. ಅವರು ಎಚ್ಚರಗೊಂಡಿದ್ದನ್ನು ಕಂಡು ಅವರ ಕುಟುಂಬಸ್ಥರಲ್ಲಿ ಸಂತಸದ ಅಲೆಯೇ ಹರಿದಿತ್ತು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ
(Social Media) ಬಾಘೇಲ್ ಅವರ ನಿಧನದ ಸುಳ್ಳು ಸುದ್ದಿ ಹರಿದಾಡಿ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಲು ಪ್ರಾರಂಭಿಸಿದ್ದರು.
ರಶ್ಮಿತಾ ಅನೀಶ್