ಬೆಂಗಳೂರು : ರಾಜ್ಯ ಸರ್ಕಾರವು(Government) ಪರಿಶಿಷ್ಟ ಜಾತಿ(Scheduled caste) ಹಾಗೂ ಪರಿಶಿಷ್ಟ ಪಂಗಡಗಳ(Scheduled Tribe) ಕಲ್ಯಾಣಕ್ಕೆ ಮತ್ತು ಅವರ ಪ್ರಯೋಜನಗಳಿಗಾಗಿ ಮೀಸಲಿಟ್ಟ ಹಣದಿಂದ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ 11 ಸಾವಿರ ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲಿದೆ. ತನ್ನ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ನಿರತವಾಗಿರುವ ರಾಜ್ಯ ಸರ್ಕಾರ, ಅದನ್ನು ನನಸಾಗಿಸಲು ಅದಕ್ಕಾಗಿ ಪರಿಶಿಷ್ಟರ ಮೀಸಲು ಹಣವನ್ನು ಬಳಕೆ ಮಾಡುವುದಾಗಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಯನ್ನು ಅಂತಿಮಗೊಳಿಸಲಾಗಿದ್ದು, ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ)(SCSP TSP) ಅಡಿಯಲ್ಲಿ 34,293.69 ಕೋಟಿ ರೂ.ಗಳ ಕಾರ್ಯಾಚರಣೆಗೆ ಅನುಮೋದನೆ ನೀಡಲಾಯಿತು. ಇದು ಜಾತಿ/ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಖರ್ಚು ಮಾಡುವುದನ್ನು ಕಡ್ಡಾಯಗೊಳಿಸಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಕಾಂಗ್ರೆಸ್(Congress) ಸರ್ಕಾರ ಎಸ್‌ಸಿ/ಎಸ್‌ಟಿ ಉಪಯೋಜನೆಯ ಹಣವನ್ನು ಬಳಸಿದೆ ಎಂದು ಬಿಜೆಪಿ(BJP) ಹೇಳಿಕೊಂಡಿದೆ.
SC/ST ಕಲ್ಯಾಣಕ್ಕಾಗಿ ಸರ್ಕಾರವು ತನ್ನ ಒಟ್ಟು ಬಜೆಟ್‌ನ(Budjet) 24.1% ರಷ್ಟು ಖರ್ಚು ಮಾಡಬೇಕಾಗುತ್ತದೆ ಎಂದು ಕರ್ನಾಟಕ(Karnataka) ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ ಮತ್ತು ಹಣಕಾಸು ಸಂಪನ್ಮೂಲಗಳ ಬಳಕೆ) ಕಾಯಿದೆಯು ಹೇಳುತ್ತದೆ. ಹಾಗಾಗಿ ಹೆಚ್ಚುವರಿ ಹಂಚಿಕೆಯನ್ನು ಸಮಾಜ ಕಲ್ಯಾಣ ಇಲಾಖೆಗೆ(Department of Social Welfare) ಐದು ಗ್ಯಾರಂಟಿಗಳಿಗಾಗಿ ಹಿಂತಿರುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸ್ಪಷ್ಟವಾಗಿ ಸೂಚನೆ” ನೀಡಿದ್ದಾರೆ ಎಂದು ಮಹದೇವಪ್ಪ ತಿಳಿಸಿದ್ದಾರೆ.
ಎಸ್‌ಸಿಎಸ್‌ಪಿ(HCSP) ಅಡಿಯಲ್ಲಿ 7,700 ಕೋಟಿ ರೂ., ಟಿಎಸ್‌ಪಿ ಅಡಿಯಲ್ಲಿ 3,430 ಕೋಟಿ ರೂ.ಗಳನ್ನು ಐದು ಗ್ಯಾರಂಟಿಗಳಿಗಾಗಿ ಮೀಸಲಿಟ್ಟಿದ್ದೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ(H.C Mahadevappa) ಹೇಳಿದರು. SC/ST ಫಲಾನುಭವಿಗಳ ಸಂಖ್ಯೆಯನ್ನು ನಿರ್ಧರಿಸುವ ಮೂಲಕ ಗ್ಯಾರಂಟಿಗಾಗಿ ಉಪ-ಯೋಜನೆಯ ನಿಧಿಗಳ ಹಣವನ್ನು ಬಳಸುವುದನ್ನು ಸಮರ್ಥಿಸಿಕೊಳ್ಳಲು ಸರ್ಕಾರ ಯೋಜನೆ ರೂಪಿಸಿದೆ. ಎಷ್ಟು ಎಸ್‌ಸಿ/ಎಸ್‌ಟಿ ಜನರು ಗ್ಯಾರಂಟಿ ಅಡಿಯಲ್ಲಿ ಪ್ರಯೋಜನ ಪಡೆಯುತ್ತಾರೆ ಎನ್ನುವುದರ ಕುರಿತೂ ವಿವರಗಳನ್ನು ನೀಡಲು ನಾವು ಇಲಾಖೆಗಳನ್ನು ಕೇಳಿದ್ದೇವೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರವೇ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಳಿಸಿತ್ತು: ಸಿದ್ದರಾಮಯ್ಯ
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ(Shakti Scheme) ಉದಾಹರಣೆಯನ್ನು ಇದಕ್ಕಾಗಿ ಉಲ್ಲೇಖಿಸಿ,ಈ ಶಕ್ತಿ ಯೋಜನೆಯನ್ನು ಎಷ್ಟು ಎಸ್‌ಸಿ/ಎಸ್‌ಟಿ ಸಮುದಾಯದ ಜನರು ಬಳಸಿದ್ದಾರೆ ಎನ್ನುವ ಮಾಹಿತಿ ನಮಗೆ ಇಲ್ಲಿವರೆಗೂ ತಿಳಿದಿಲ್ಲ. ಒಂದು ವೇಳೆ ಒಬ್ಬ ಮಹಿಳೆ ಈ ಯೋಜನೆಯ ಮೂಲಕ 30 ಬಾರಿ ಪ್ರಯಾಣ ಮಾಡಿದರೆ ನಾವು ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದಿದ್ದಾರೆ. ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ(Election) ಘೋಷಣೆ ಮಾಡಿರುವ ಐದು ಗ್ಯಾರಂಟಿ ಜಾರಿಗಾಗಿ ಮೀಸಲಿಡಬೇಕಿದೆ.
2023-24ರ ಬಜೆಟ್ ಗಾತ್ರ ಒಟ್ಟು 3.28 ಲಕ್ಷ ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಅಭಿವೃದ್ಧಿಗೆಂದೇ ಒಟ್ಟು 1.42 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಇದರಲ್ಲಿ 34,221.49 ಕೋಟಿ ರೂಪಾಯಿಗಳನ್ನು ಅಂದರೆ ಶೇ.24.1 ಅನ್ನು ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಡಲಾಗಿದೆ.ಅಷ್ಟೇ ಅಲ್ಲದೆ ಇದರ ಜೊತೆಗೆ ಕಳೆದ ವರ್ಷದ ಬಳಕೆಯಾಗದ 72.70 ಕೋಟಿ ರೂ.ಗಳನ್ನು ಸೇರಿಸಲಾಗಿದೆ.ಎಸ್‌ಟಿಗಳಿಗೆ 9,961 ಕೋಟಿ ರೂ. ಮತ್ತು ಎಸ್‌ಸಿಗಳಿಗೆ 24,333 ಕೋಟಿ ಮತ್ತು ಮೀಸಲಿಡಲಾಗಿದೆ.
ಇದನ್ನೂ ಓದಿ : ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
ಫಲಾನುಭವಿಗಳ ಮೇಲೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣದ ಪರಿಣಾಮದ ಕುರಿತು ಎಲ್ಲ ಇಲಾಖೆಗಳಿಗೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ‘ ಹಣ ಬಳಕೆ ಮಾಡಲು ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.
ರಶ್ಮಿತಾ ಅನೀಶ್