ಮೈಸೂರು (ಜು.05): ಸಿದ್ದರಾಮಯ್ಯನವರ ಮಗ ಪುತ್ರ ಯತೀಂದ್ರ ಸಿದ್ದರಾಮಯ್ಯ (about yathindra siddaramaiah statement) ತಮ್ಮ ವರುಣಾ ಕ್ಷೇತ್ರವನ್ನು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ
ತಂದೆಗೆ (ಸಿದ್ದರಾಮಯ್ಯ) ತ್ಯಾಗ ಮಾಡಿದ್ದರು ಆದರೆ ಇದೀಗ ನನಗೂ ಸ್ಥಾನಮಾನ ಬೇಕು ಎಂದು ಅಧಿಕಾರದ ಆಸೆಯನ್ನು ಬಹಿರಂಗಪಡಿಸಿದ್ದಾರೆ. ಹೌದು! ಯತೀಂದ್ರ ಸಿದ್ದರಾಮಯ್ಯ ತಂದೆಯ
ಜವಾಬ್ದಾರಿಯನ್ನು ವರುಣಾ ಕ್ಷೇತ್ರದಲ್ಲಿ ನಿಭಾಯಿಸಲು ಒಲವು (about yathindra siddaramaiah statement) ತೋರಿದ್ದಾರೆ.

ಸಿಎಂ ಸಿದ್ದರಾಮಯ್ಯ ವರುಣ (Varuna) ಕ್ಷೇತ್ರಕ್ಕೆ ಹೆಚ್ಚು ಸಮಯ ಕೊಡಲಾಗದ ಹಿನ್ನೆಲೆಯಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಸರ್ಕಾರಿ ಸ್ಥಾನಮಾನದ ನಿರೀಕ್ಷೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿ ಸಹ ಸಣ್ಣ ಹುದ್ದೆ ನೀಡಿದರು ನಿಭಾಯಿಸುತ್ತೇನೆ. ಕ್ಷೇತ್ರದ ಜನರಿಗೆ ತಂದೆಯವರು ಸಿಎಂ ಆಗಿರುವ ಕಾರಣ ಹೆಚ್ಚು ಸಮಯ ಕೊಡಲಾಗುತ್ತಿಲ್ಲ. ಅವರನ್ನ ನೋಡಲು
ಬರುವ ರಾಜ್ಯದ ಜನರನನ್ನೆಲ್ಲ ಅವರು ಭೇಟಿಯಾಗಬೇಕು. ಆದ್ದರಿಂದ ಹೆಚ್ಚು ಸಮಯವನ್ನು ವರುಣ ಕ್ಷೇತ್ರದ ಮತದಾರರಿಗೆ ಕೊಡಲಾಗುತ್ತಿಲ್ಲ.
ಇದನ್ನೂ ಓದಿ : ವಿದ್ಯುತ್ ದರ ಏರಿಕೆ ನಂತರ ಮತ್ತೊಂದು ಶಾಕ್ ! ನೀರಿನ ದರ ಶೇ.12-15 ಏರಿಸಲು ಜಲಮಂಡಳಿ ಚಿಂತನೆ
ಅಧಿಕಾರಿಗಳೊಂದಿಗೆ ಜನರ ಸಮಸ್ಯೆಯನ್ನ ಚರ್ಚಿಸಬೇಕು. ಜನರ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಹೇಳಲು ಸರ್ಕಾರಿ ಸ್ಥಾನಮಾನ ಇರಬೇಕು. ನನಗೆ ಚಿಕ್ಕದಾದ ಸ್ಥಾನಮಾನ
ಯಾವುದಾದರು ನೀಡಿದ್ರು ಸಹಕಾರಿ ಆಗುತ್ತೆ. ಆಶ್ರಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಳೆದ ಬಾರಿ ನೀಡಿದ್ದರು. ಅದು ಏನೂ ದೊಡ್ಡ ಹುದ್ದೆಯಾಗಿರಲಿಲ್ಲ ಆದರೂ ಈಗಲೂ ಅಂತಹದೇ ಸಣ್ಣ ಹುದ್ದೆ ನೀಡಿದರೂ
ಕೂಡ ಜನರ ಸೇವೆ ಮಾಡಲು ನಾನು ಸಿದ್ದನಿದ್ದೇನೆ. ಎಂದು ಯತಿಂದ್ರ ಸಿದ್ದರಾಮಯ್ಯ ತಿಳಿಸಿದರು.

ಯತೀಂದ್ರರನ್ನು ಸಂಪುಟಕ್ಕೆ ಸೇರಿಸಿ:
ಶಾಸಕ ಕೆ. ಹರೀಶ್‌ಗೌಡ(K.Harish Gowda) ವಿಧಾನಪರಿಷತ್ತು ಸದಸ್ಯರನ್ನಾಗಿ ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಸಮರ್ಥ ನಾಯಕತ್ವದ ಅಗತ್ಯ ಮೈಸೂರಿನ(Mysore) ಅಭಿವೃದ್ಧಿಗೆ ಬೇಕಾಗಿದೆ. ಆ ಸಾಮರ್ಥ್ಯ ಡಾ. ಯತೀಂದ್ರ ಅವರಲ್ಲಿ ಇದೆ
ಆದ್ದರಿಂದ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು. ನನ್ನ ಗೆಲುವಿಗೆ ಚಾಮರಾಜ (Chamaraja Nagara) ಕ್ಷೇತ್ರದಲ್ಲಿ ಮತದಾರರು ಎಷ್ಟು ಸಹಕಾರ ನೀಡಿದ್ದಾರೋ
ಅಷ್ಟೇ ಸಹಕಾರವನ್ನು ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಜನಪರ ಸೇವೆಯ ಆಕಾಂಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರು ನನ್ನ ಭರವಸೆಯಾಗಿದ್ದರು ಎಂದು ಅವರು ತಿಳಿಸಿದರು.ಇನ್ನು ಡಾ.ಕೆ. ಕಾಳಚನ್ನೇಗೌಡ (Dr.K.Kalachennegowda)
ಮಾತನಾಡಿ, ಮೈಸೂರಿನ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿಯನ್ನು ಸುಧಾರಿಸಲು ಶಾಸಕ ಕೆ. ಹರೀಶ್‌ಗೌಡ ಮತ್ತು ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕ್ರಮ ವಹಿಸಬೇಕು.
ತಮ್ಮ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಿ ವ್ಯವಸ್ಥೆಗಳ ಸುಧಾರಣೆಗೆ ಪ್ರತಿ ಶಾಸಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.ನಗರದ ಸರ್ಕಾರಿ ಶಾಲಾ ಕಾಲೇಜುಗಳು ಮತ್ತು
ಮೈಸೂರು ವಿವಿ (Mysore University) ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ.ವಿದ್ಯಾರ್ಥಿ ನಿಲಯಗಳಲ್ಲಿ ತಡವಾಗಿ ಪ್ರವೇಶಾತಿ ಕೈಗೊಳ್ಳುವುದು ಮತ್ತು ಅತಿಥಿ ಉಪನ್ಯಾಸಕರ ನೇಮಕಾತಿ
ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಗತಿಗೆ ಮಾರಕವಾಗಿ ಪರಿಣಮಿಸಿದೆ. ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದರು.
ರಶ್ಮಿತಾ ಅನೀಶ್