New Delhi: ಮುಂದಿನ ದಿನಗಳಲ್ಲಿ ಟ್ರಕ್ಗಳಲ್ಲಿ ಕ್ಯಾಬಿನ್‌ಗಳು ಹವಾನಿಯಂತ್ರಿತ ವ್ಯವಸ್ತೆಯನ್ನು ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (AC in truck cabins) ಘೋಷಿಸಿದ್ದಾರೆ.

ಟ್ರಕ್‌ಗಳ ಕ್ಯಾಬಿನ್‌ಗಳು (Cabin) ಹವಾನಿಯಂತ್ರಿತ ವ್ಯವಸ್ತೆಯನ್ನು ಹೊಂದಿರುವುದು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ನವದೆಹಲಿಯಲ್ಲಿ
ವಾಹನೋದ್ಯಮದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಘೋಷಿಸಿದ್ರು. ಈ ಕಾರ್ಯಕ್ರಮಕ್ಕೆ ಬರುವ ಮೊದಲು ಟ್ರಕ್ಗಳಲ್ಲಿ ಕ್ಯಾಬಿನ್‌ಗಳು ಹವಾನಿಯಂತ್ರಿತ ವ್ಯವಸ್ತೆಯನ್ನು ಹೊಂದಿರುವುದು
ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಹೀಗಾಗಿ ಇನ್ನು ಮುಂದೆ ಟ್ರಕ್ ಚಾಲಕರು ಕೂಡಾ ಹವಾನಿಯಂತ್ರಿತ ವ್ಯವಸ್ತೆಯೊಂದಿಗೆ ಆರಾಮದಾಯಕವಾಗಿ ಚಾಲನೆ ಮಾಡಬಹುದು ಎಂದಿದ್ದಾರೆ.
ಇದನ್ನು ಓದಿ: ಹೈಡ್ರಾಫೇಶಿಯಲ್ ಮಾಡಿಸಿಕೊಳ್ಳುವವರೇ ಎಚ್ಚರ : 17,000ರೂ ಕೊಟ್ಟು ಫೇಶಿಯಲ್ ಮಾಡಿಸಿ ಮುಖವೇ ಸುಟ್ಟೋಯ್ತು!
ಇನ್ನು ದೇಶದ ಲಾಜಿಸ್ಟಿಕ್ಸ್ (Logistics) ವಲಯದಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕ್ರಮವು ದೀರ್ಘ ಪ್ರಯಾಣದ ಸಮಯದಲ್ಲಿ ಚಾಲಕರ ಆರೋಗ್ಯದ ಮೇಲೆ
ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ರಸ್ತೆ ಅಪಘಾತಗಳನ್ನು ತಡೆಯುತ್ತದೆ. ಟ್ರಕ್ (Truck) ಚಾಲಕರು ಕಠಿಣ ತಾಪಮಾನದಲ್ಲಿ ಚಾಲನೆ ಮಾಡುತ್ತಾರೆ. ಅವರು ಎದುರಿಸುತ್ತಿರುವ ಸವಾಲುಗಳನ್ನು
ನಾವು ಊಹಿಸಿಕೊಳ್ಳಬೇಕು. ಸಾರಿಗೆ ಸಚಿವರಾದ ನಂತರ ಎಸಿ ಕ್ಯಾಬಿನ್ಗಳನ್ನು ಪರಿಚಯಿಸಲು ನಾನು ಉತ್ಸುಕನಾಗಿದ್ದೆ. ಆದರೆ ಟ್ರಕ್ಗಳ ಬೆಲೆ ಹೆಚ್ಚಾಗುತ್ತದೆ ಎಂದು ಕೆಲವರು ಇದನ್ನು ವಿರೋಧಿಸಿದರು.
ಸದ್ಯ ಕಡತಕ್ಕೆ ಸಹಿ ಹಾಕಿದ್ದೇನೆ. ಈಗ ಎಲ್ಲಾ ಟ್ರಕ್ ಕ್ಯಾಬಿನ್ಗಳು ಎಸಿ (AC in truck cabins) ಕ್ಯಾಬಿನ್ಗಳಾಗಿರುತ್ತವೆ ಎಂದಿದ್ಧಾರೆ.

ಭಾರತದಲ್ಲಿ ಟ್ರಕ್ ಚಾಲಕರ ಕೊರತೆಯಿದೆ. ಇದರ ಪರಿಣಾಮವಾಗಿ ಟ್ರಕ್ ಚಾಲಕರು ದಿನಕ್ಕೆ 14-16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇತರ ದೇಶಗಳು ಟ್ರಕ್ ಚಾಲಕರು ಎಷ್ಟು ಗಂಟೆಗಳ ಕಾಲ ಕರ್ತವ್ಯದಲ್ಲಿರಬಹುದು
ಎಂಬುದರ ಕುರಿತು ನಿಬಂಧನೆಗಳನ್ನು ಹೊಂದಿವೆ. ಆದರೆ ಭಾರತದಲ್ಲಿ ಆ ರೀತಿಯ ಯಾವುದೇ ನಿಬಂಧನೆ ಇಲ್ಲದಿರುವುದರಿಂದ ಚಾಲಕರು ಹೆಚ್ಚು ಗಂಟೆಗಳ ಕಾಲ ಟ್ರಕ್ ಚಾಲನೆ ಮಾಡುತ್ತಾರೆ.
ಹೀಗಾಗಿ ಕ್ಯಾಬಿನ್ ಗಳು ಉತ್ತಮ ವ್ಯವಸ್ಥೆ ಹೊಂದುವುದು ಮುಖ್ಯವಾಗಿದೆ. 2025 ರ ವೇಳೆಗೆ ಟ್ರಕ್ ಡ್ರೈವರ್ (Driver) ಕ್ಯಾಬಿನ್ಗಳಲ್ಲಿ ಕಡ್ಡಾಯ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಭಾರತದಲ್ಲಿ ಟ್ರಕ್
ಚಾಲಕರಿಗೆ ಉತ್ತಮ ವ್ಯವಸ್ಥೆಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಕ್ರಮವು ಬಹುಮುಖ್ಯವಾಗಿ. ಇದರಿಂದ ಟ್ರಕ್ ಚಾಲಕರ ಆರೋಗ್ಯದ ಮೇಲಾಗುತ್ತಿರುವ ಋಣಾತ್ಮಕ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ.