Visit Channel

WHO ಪ್ರಕಾರ, ಯಾವ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸಬೇಕು?

centre

ಕೊರೋನಾದ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವುದು ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೋನಾದ ಕರಿ ನೆರಳಿನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಪರದಾಡುತ್ತಿದ್ದಾರೆ. ಮುಖದ ಮೇಲಿನ ಮಾಸ್ಕ್ ಕೊರೋನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ. ಆದರೆ ಮಕ್ಕಳು ಈ ಮಾಸ್ಕ್ ಧರಿಸಬೇಕೇ? ಧರಿಸಿದರೂ ಎಂತಹ ಮಾಸ್ಕ ಮಕ್ಕಳಿಗೆ ಸೂಕ್ತ ಎಂಬ ಗೊಂದಲ ಹೆತ್ತವರದ್ದು. ಅದಕ್ಕಾಗಿ ಈ ಲೇಖನದಲ್ಲಿ WHO ಈ ಕುರಿತು ಏನು ಹೇಳುತ್ತೆ ಎಂಬುದನ್ನು ಹೇಳಿದ್ದೇವೆ.

ಮಕ್ಕಳ ಮಾನಸಿಕ ಮನಸ್ಥಿತಿಯ ಅಂಶಗಳನ್ನು ಆಧರಿಸಿ, WHO ಮತ್ತು ಯುನಿಸೆಫ್ ಮಕ್ಕಳಿಗೆ ಮಾಸ್ಕ್ಕ ಕುರಿತು ಈ ಕೆಳಗಿನ ಸಲಹೆ ನೀಡುತ್ತವೆ:

5 ವರ್ಷಕ್ಕಿಂತ ಕೆಳಗಿರುವ ಮಕ್ಕಳು:
5 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಇದು ಮಗುವಿನ ಸುರಕ್ಷತೆ, ಆಸಕ್ತಿ ಮತ್ತು ಮಾಸ್ಕ್ ಬಳಸುವ ಕನಿಷ್ಠ ಸಾಮರ್ಥ್ಯವನ್ನು ಆಧರಿಸಿದೆ. ಏಕೆಂದರೆ ಮಕ್ಕಳಿಗೆ ಅದನ್ನು ನಿರ್ವಹಿಸುವುದು ಅಸಾಧ್ಯ. ಜೊತೆಗೆ ಉಸಿರುಗಟ್ಟಿದ ಅನುಭವವೂ ಆಗಬಹುದು.

6-11 ವರ್ಷ ವಯಸ್ಸಿನ ಮಕ್ಕಳು:
ಈ ವಯೋಮಾನದ ಮಕ್ಕಳು ಮಾಸ್ಕ್ ಬಳಸುವ ನಿರ್ಧಾರವು ಈ ಕೆಳಗಿನ ಅಂಶಗಳನ್ನು ಆಧರಿಸಿರಬೇಕು.
ಮಗು ಇರುವ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆಯೇ? ಹಾಗಿದ್ದರೆ ಮಾತ್ರ ಮಾಸ್ಕ್ ಬಳಸಿ.
ಮಕ್ಕಳು ಶಾಲೆ ಅಥವಾ ಇತರ ಸ್ಥಳಗಳಿಗೆ ಭೇಟಿ ನೀಡಿದಾಗ ಬಳಸಿ.
ವಯಸ್ಸಾದವರು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆ ಇರುವವರ ಜೊತೆ ಮಗು ಮಾತನಾಡುವಾಗ ಮಾಸ್ಕ್ ಬಳಸಿ.
ಮುಖವಾಡಗಳನ್ನು ಹೇಗೆ ಧರಿಸುವುದು, ತೆಗೆಯುವುದು ಮತ್ತು ಸುರಕ್ಷಿತವಾಗಿ ಧರಿಸುವುದು ಎಂಬುದರ ಕುರಿತು ಮಗುವಿಗೆ ಸಾಕಷ್ಟು ವಯಸ್ಕರ ಮೇಲ್ವಿಚಾರಣೆಯಿದ್ದಾಗ ಬಳಸಿ.

12ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು:
ಡಬ್ಲ್ಯುಎಚ್ಒ ಮತ್ತು ಯುನಿಸೆಫ್ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆಯೇ ಮಾಸ್ಕನ್ನು ಧರಿಸಬೇಕೆಂದು ಸಲಹೆ ನೀಡುತ್ತಾರೆ. ಸೋಂಕಿತ ವ್ಯಕ್ತಿಯಿಂದ ಅಥವಾ ಇತರರಿಂದ ಕನಿಷ್ಠ 1 ಮೀಟರ್ ದೂರದಲ್ಲಿ ಇರದಿದ್ದಾಗ ಮಾಸ್ಕ ಬಳಸಿ. ಅಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಮಕ್ಕಳು ಯಾವ ರೀತಿಯ ಮಾಸ್ಕ್ ಧರಿಸಬೇಕು?:
ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುವ ಮಕ್ಕಳು ವೈದ್ಯಕೀಯೇತರ ಅಥವಾ ಫ್ಯಾಬ್ರಿಕ್ (ಬಟ್ಟೆಯ) ಮಾಸ್ಕ್ ಧರಿಸಬಹುದು. ಇದು ಮೂಲ ರಕ್ಷಣೆಯನ್ನು ಒದಗಿಸುತ್ತದೆ, ಅಂದರೆ ಸೋಂಕಿಗೆ ಒಳಗಾಗಿದ್ದರೆ ಮತ್ತು ಒಳಗಾಗಿರುವುದು ತಿಳಿದಿಲ್ಲದಿದ್ದರೆ ಅದು ಇತರರಿಗೆ ಹರಡದಂತೆ ಮಾಡುತ್ತದೆ.
ಸಿಸ್ಟಿಕ್ ಫೈಬ್ರೋಸಿಸ್, ಕ್ಯಾನ್ಸರ್ ಅಥವಾ ಇಮ್ಯುನೊಸಪ್ರೆಶನ್ನಂತಹ ಆರೋಗ್ಯ ಸಮಸ್ಯೆಯಿರುವ ಮಕ್ಕಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಮೆಡಕಲ್ ಮಾಸ್ಕನ್ನು ಧರಿಸಬೇಕು. ಇದು ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ ಮತ್ತು ರಕ್ಷಣೆ ನೀಡುತ್ತದೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.