- ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್
- ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನೋಟಿಸ್ (Acquiring illegal assets)
- ಸೂಕ್ತ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚನೆ
Shimoga: ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಹಿನ್ನಲೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ (KS Eshwarappa), ಪುತ್ರ ಕಾಂತೇಶ್(Kantesh) ಮತ್ತು ಸೊಸೆ ಶಾಲಿನಿ(Shalini) ವಿರುದ್ಧ ಎಫ್‌ಐಆರ್(FIR) ದಾಖಲಾಗಿದೆ.
ವಕೀಲ ವಿನೋದ(Lawyer Vinoda) ಅವರು ಸಲ್ಲಿಸಿದ್ದ ಖಾಸಗಿ ದೂರಿನ(Private complaint) ಮೇರೆಗೆ ಬೆಂಗಳೂರಿನ(Bangalore) ಜನಪ್ರತಿನಿಧಿಗಳ ನ್ಯಾಯಾಲಯವು ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು.
ಅದರಂತೆ ಇದೀಗ ಶಿವಮೊಗ್ಗ ಲೋಕಾಯುಕ್ತ (Shivamogga Lokayukta) ಈಶ್ವರಪ್ಪ,
ಕಾಂತೇಶ್ ಹಾಗೂ ಶಾಲಿನಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್(Notice) ಜಾರಿ ಮಾಡಿದೆ. ಈ ಮೂಲಕ ಈಶ್ವರಪ್ಪ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ನ(Court of Representatives) ಆದೇಶದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ(Control of Corruption Act)
ಈಶ್ವರಪ್ಪ ವಿರುದ್ಧ ಸೆಕ್ಷನ್ 13(1)(d), 13(1)(e), 120(B), 420ರಡಿ ಎಫ್‌ಐಆರ್ ದಾಖಲಾಗಿದ್ದು, ಇಂದೇ ( july 4) ರಂದು ವಿಚಾರಣೆಗೆ ಹಾಜರಾಗುವಂತೆ ಶಿವಮೊಗ್ಗ ಲೋಕಾಯುಕ್ತ ನೋಟಿಸ್ ನೀಡಿದೆ.
ಆದ್ರೆ, ಈಶ್ವರಪ್ಪ ಕುಟುಂಬ ಕೇರಳ ಪ್ರವಾಸದಲ್ಲಿದ್ದು. ಈಶ್ವರಪ್ಪ ಅವರು ಜಲಸಂಪನ್ಮೂಲ ಸಚಿವರಾಗಿದ್ದ(Former Minister of Water Resources) ವೇಳೆ ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ(Anti-Corruption Act) 1988ರ ಕಲಂ 13(1)(ಡಿ) ಹಾಗೂ 13(1)(ಇ) ಮತ್ತು ಭಾರತೀಯ ದಂಡ ಸಂಹಿತೆ(Indian Penal Code) 1860ರ ಕಲಂ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರ ಬಿ ವಿನೋದ್ ಅವರು 2-26ರಲ್ಲಿ ಸಲ್ಲಿಸಿದ್ದ ಈ ಖಾಸಗಿ ದೂರನ್ನು ಲೋಕಾಯುಕ್ತ ಕೋರ್ಟ್(Lokayukta Court) ವಜಾಗೊಳಿಸಿತ್ತು.
ವಜಾ ಆದೇಶವನ್ನು ಪ್ರಶ್ನಿಸಿ ವಿನೋಧ್ ಹೈಕೋರ್ಟ್(High Court) ಮೆಟ್ಟಿಲೇರಿದ್ದು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ದೂರಿನ ಮರು ಪರಿಗಣನೆಗೆ ಆದೇಶಿಸಿತ್ತು.
ಖಾಸಗಿ ದೂರಿನ ಅನ್ವಯ ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿತ್ತು. ಕೋರ್ಟ್ ಸೂಚನೆ ಬಳಿಕ ಲೋಕಾಯುಕ್ತ ಠಾಣೆಯಲ್ಲಿ ಕೇಸ್ ಆಗಿದೆ.
ಪ್ರಕರಣದ ಬೆನ್ನಲ್ಲೇ ದಾಖಲೆಗಳನ್ನ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ.
ಇದನ್ನು ಓದಿ : ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರಸರ್ಕಾರ ಅಸ್ತು, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಗೈಡ್ಲೈನ್ಸ್
ದೂರು ನೀಡಿದ್ದ ವಕೀಲ ವಿನೋದ್‌ಗೆ ದಾಖಲಾತಿ ಸಲ್ಲಿಸಲು ನೋಟಿಸ್ ಕೊಡಲಾಗಿದೆ. (Acquiring illegal assets) ಜುಲೈ 4ರಂದು ಶಿವಮೊಗ್ಗ ಲೋಕಾಯುಕ್ತದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.