Bengaluru: ಬೆಂಗಳೂರು ನಗರದಲ್ಲಿರುವ 159 ಶಿಕ್ಷಣ ಸಂಸ್ಥೆಗಳ (Educational institutions) ಪೈಕಿ 58 ಸಂಸ್ಥೆಗಳ ಮುಖ್ಯಸ್ಥರು (Educational institutions) ಬಿಬಿಎಂಪಿಯ (BBMP) ಹಣವನ್ನು ಪಡೆದು ಹಂಚಿಕೆ ಮಾಡದೇ ಇರುವ ಆರೋಪದ ಹಿನ್ನಲೆಯಲ್ಲಿ ಅಂತಹ ಶಾಲಾ ಕಾಲೇಜುಗಳ (Schools and Colleges) ಮುಖ್ಯಸ್ಥರ ಮೇಲೆ ಬಿಬಿಎಂಪಿ ಕಠಿಣ ಕ್ರಮ (BBMP strict action) ಜರುಗಿಸಲು ಮುಂದಾಗಿದೆ. ಯಾವ ಉದ್ದೇಶಕ್ಕಾಗಿ ಹಣ ಮಂಜೂರು (Allotment of money) ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಹಣ ಬಳಸಬೇಕು ಎಂದು ಮೊದಲೇ ಬಿಬಿಎಂಪಿ ಸುತ್ತೋಲೆ (BBMP Circular) ಹೊರಡಿಸಿದ್ದರು ಸಹ ಹಣವನ್ನು ದುರುಪಯೋಗ ಪಡಿಸಿಕೊಂದಿರುವುದು ಅಧಿಕಾರಿಗಳ (Officers) ಗಮನಕ್ಕೆ ಬಂದಿದೆ.

ಪ್ರತಿ ವರ್ಷವೂ ಬಿಬಿಎಂಪಿ ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲ ಶಾಲಾ ಕಾಲೇಜುಗಳಿಗೆ ವಾರ್ಷಿಕ ಕಾರ್ಯಕ್ರಮಗಳು (Annual programs), ಶೈಕ್ಷಣಿಕ ಪ್ರವಾಸ (Educational tour), ಲೇಖನ ಸಾಮಗ್ರಿಗಳು (Stationery) , ಶಾಲೆ ಕಾಲೇಜುಗಳ ದುರಸ್ತಿ (Repair of schools and colleges) ಹಾಗು ಇತರ ವೆಚ್ಚಗಳಿಗಾಗಿ ಒಂದಿಷ್ಟು ಹಣವನ್ನು ಹಂಚಿಕೆ ಮಾಡುತ್ತದೆ. ಇದು ನೇರವಾಗಿ ಶಾಲೆ ಕಾಲೇಜುಗಳಿಗೆ ನೀಡುವ ಬದಲಾಗಿ ಇದನ್ನು ಸಂಸ್ಥೆಯ ಮುಖ್ಯಸ್ಥರ ಖಾತೆಗಳಿಗೆ (Account of Head of Institution) ವರ್ಗಾಯಿಸಲಾಗುತ್ತದೆ. 58 ಶಾಲಾ ಕಾಲೇಜುಗಳ ಮುಖ್ಯಸ್ಥರು ಹಣವನ್ನು ವಿತ್ಡ್ರಾವಲ್ (Withdrawal of funds) ಮಾಡಿಕೊಂಡಿದ್ದಾರೆ. ಆದರೆ ಸರಿಯಾದ ಉದ್ದೇಶಕ್ಕಾಗಿ ಬಳಸಿರುವುದು ಕಂಡು ಬಂದಿರುವ ಕಾರಣದಿಂದ ನೋಟಿಸ್ (Notice) ನೀಡಲಾಗಿದೆ.
ಇನ್ನು ಬಿಬಿಎಂಪಿಯ ಹಣಕಾಸು ನಿಯಮಗಳನ್ನು (Financial Rules of BBMP) ಗಾಳಿಗೆ ತೂರಿದ 34 ಪ್ರೌಢ ಶಾಲೆಗಳು (High school),16 ಪ್ರಾಥಮಿಕ ಶಾಲೆಗಳ ಮುಖ್ಯಾಪಾಧ್ಯಾಯರ (Principals of Primary Schools) ಹಾಗೂ 8 ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ (Principals of Pre-Graduate Colleges) ನೋಟಿಸ್ ನೀಡಲಾಗಿದೆ. ಈಗಾಗಲೇ ಕೆಲವು ಸಂಸ್ಥೆಗಳ ಮುಖ್ಯಸ್ಥರಿಂದ ವಿವರಣೆ ದೊರೆತಿದೆ. ಕೆಲವರು ಸಣ್ಣ ಪುಟ್ಟ ಉಲ್ಲಂಘನೆ ಮಾಡಿದರೆ ಇನ್ನೂ ಕೆಲವರು ದೊಡ್ಡ ಪ್ರಮಾಣದ ಅಕ್ರಮದಲ್ಲಿ (illegality) ಭಾಗಿಯಾಗಿರುವುದು ಕಂಡು ಬಂದಿದೆ . ಅಂತಹ ಶಾಲಾ ಕಾಲೇಜುಗಳ ಮುಖ್ಯಸ್ಥರ ಮೇಲೆ ಮುಂದಿನ ದಿನಗಳಲ್ಲಿ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ (BBMP Chief Commissioner Tushar Giri Nath) ಹೇಳಿದ್ದಾರೆ.