ಮುಂಬೈ, ಜು. 03: ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಅಮೀರ್ಖಾನ್ ಮತ್ತು ಪತ್ನಿ ಕಿರಣ್ ರಾವ್ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ.
ಲಗಾನ್ ಸಿನೇಮಾದಲ್ಲಿ ಆತ್ಮೀಯರಾಗಿದ್ದ ಅಮೀರ್ ಖಾನ್ ಹಾಗೂ ಕಿರಣ್ ರಾವ್, ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಬಯಸುತ್ತೇವೆ ಎಂದು ಈ ದಂಪತಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆ ಮೂಲಕ ಈ ಇಬ್ಬರ ನಡುವಿನ 16 ವರ್ಷದ ದಾಂಪತ್ಯದ ಅಂತ್ಯಕ್ಕೆ ನಿರ್ಧರಿಸಿದ್ದಾರೆ.
ನಟ ಅಮೀರ್ ಖಾನ್ ಈ ಹಿಂದೆ 2002ರಲ್ಲಿ ಮೊದಲ ಪತ್ನಿ ರೀಮಾ ರಾವ್ಗೆ ವಿಚ್ಛೇದನ ನೀಡಿದ್ದರು.