ಇನ್ನೇನು ಪುಷ್ಪ-2 ಚಿತ್ರದ (Pushpa-2 movie) ಸಕ್ಸಸ್ ಸಂಭ್ರಮದಲ್ಲಿದ್ದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ಗೆ (Allu Arjun) ಬಿಗ್ ಶಾಕ್ ಆಗಿದೆ. ಹೈದ್ರಾಬಾದ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ (Chikkadappli police arrested) . ಇದೀಗ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಿನಿಮಾ ಇನ್ನೇನು ಹಿಟ್ ಆಯ್ತು ಎಂದು ಸಂತೋಷದಲ್ಲಿ ಇದ್ದ ನಟ ಅಲ್ಲೂ ಅರ್ಜುನ್ (Actor Allu Arjun) ಗೆ ಹಾಗೂ ಅಭಿಮಾನಿಗಳ ಗೆ ಬೇಸರ ಮೂಡುವಂತಾಗಿದೆ.
ಡಿಸೆಂಬರ್ 4 ರಂದು ಪುಷ್ಪ-2 (pushpa-2) ಪ್ರಿಮಿಯರ್ ಶೋ ಇತ್ತು. ಅಂತೆಯೇ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ (Sandhya Theatre, Hyderabad) ಅಭಿಮಾನಿಗಳ ಜೊತೆ ಚಿತ್ರ ವೀಕ್ಷಣೆಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ಅಭಿಮಾನಿಗಳು ಅಲ್ಲು ಅರ್ಜುನ್ (Allu Ajun) ಅವರನ್ನು ನೋಡಲು ಮುಗಿಬಿದ್ದಿದ್ದರು. ಆಗ ಕಾಲ್ತುಳಿತ ಸಂಭವಿಸಿ ರೇವತಿ ಎಂಬ ಮಹಿಳೆ (woman named Revathi got trampled) ಪ್ರಾಣ ಕಳೆದುಕೊಂಡಿದ್ದರು. ಅವರ ಮಗನಿಗೂ ಕೂಡ ಗಂಭೀರ ಗಾಯಗಳಾಗಿತ್ತು.ಈ ಸಂಬಂಧ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿತ್ತು.ಅಲ್ಲು ಅರ್ಜುನ್ ಆಗಮನದ ಬಗ್ಗೆ ಪೊಲೀಸರಿಗೆ ಮಾಹಿತಿ (Inform the police) ಇರಲಿಲ್ಲ. ಅಲ್ಲು ಅರ್ಜುನ್ ತಮ್ಮ ಖಾಸಗಿ ಭದ್ರತೆಯೊಂದಿಗೆ (Private security) ಥಿಯೇಟರ್ ಆವರಣವನ್ನ ಪ್ರವೇಶಿಸುತ್ತಿದ್ದಂತೆ ಕಾಲ್ತುಳಿತ ಸಂಭವಿಸಿದೆ ಅಂತ ಹೇಳಲಾಗ್ತಿದೆ. ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ತಳ್ಳಾಟದಿಂದ ನೂಕು ನುಗ್ಗಲು ಇನ್ನಷ್ಟು ಉಲ್ಬಣವಾಗಿದೆ ಎಂಬ ಆರೋಪ ಕೂಡಾ ಇದೆ.
ಈಗಾಗಲೇ ಇದೇ ಪ್ರಕರಣದಲ್ಲಿ ಸಂಧ್ಯಾ ಚಿತ್ರಮಂದಿರದ ಮಾಲೀಕ (Theatre owner) , ಚಿತ್ರಮಂದಿರದ ಮ್ಯಾನೇಜರ್ (Theatre manager) ಹಾಗೂ ಕಾಲ್ತುಳಿತ ನಡೆದ ದಿನ ಅಲ್ಲು ಅರ್ಜುನ್ ಜೊತೆಗೆ ಇದ್ದ ಕೆಲವು ಬೌನ್ಸರ್ಗಳನ್ನು ಸಹ ಈಗಾಗಲೇ ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 ಸೆಕ್ಷನ್ (105, 118 Sec) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಇನ್ನು ನನ್ನ ಪರವಾಗಿ ಸಂತ್ರಸ್ತ ಕುಟುಂಬಕ್ಕೆ (victim’s family) 25 ಲಕ್ಷ ರೂ. ಅಲ್ಲದೆ, ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ (Help as much as possible) ಮಾಡುತ್ತೇನೆ. ಬನ್ನಿ ರೇವತಿ ಕುಟುಂಬವನ್ನು ಖುದ್ದು ಭೇಟಿ ಮಾಡುವುದಾಗಿ ಅಲ್ಲು ಅರ್ಜುನ್ (Allu Arjun) ಭರವಸೆ ನೀಡಿದ್ದರು. ಈ ಸಂಬಂಧ ಅಲ್ಲು ಅರ್ಜುನ್ ಟ್ವಿಟ್ಟರ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದರು. ಆದ್ರೆ ಅಲ್ಲು ಅರ್ಜುನ್ ಅವರು ಏಕಾಏಕಿ ಅರೆಸ್ಟ್ ಆಗಿದ್ದರಿಂದ ಚಿತ್ರರಂಗದ ಜೊತೆ ಜೊತೆಗೇ ಅಭಿಮಾನಿಗಳು ಕೂಡಾ ಶಾಕ್ ಆಗಿದ್ದಾರೆ.