ಕನ್ನಡ ಕಿರುತೆರೆಯ(Small Screen) ಜನಪ್ರಿಯ ‘ಜೊತೆ ಜೊತೆಯಲಿ’(Jothe Jotheyali) ಧಾರವಾಹಿ(Serial) ಇದೀಗ ನಿರ್ಮಾಪಕ(Producer) ಆರೂರು ಜಗದೀಶ್(Aroor Jagadish) ಮತ್ತು ಮುಖ್ಯಪಾತ್ರಧಾರಿ ಅನಿರುದ್ದ್(Aniruddha) ಅವರ ನಡುವಿನ ಬಿರುಕಿನಿಂದ ನಿಂತು ಹೋಗಿದೆ.

ಕಳೆದ ಕೆಲವು ದಿನಗಳಿಂದ ನಿರ್ಮಾಪಕ ಆರೂರು ಜಗದೀಶ್ ಮತ್ತು ಮುಖ್ಯಪಾತ್ರಧಾರಿ ಅನಿರುದ್ದ್ ನಡುವೆ ಮಾತಿನ ಸಮರ ಕೂಡಾ ನಡೆದಿದ್ದು, ಇಬ್ಬರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದಾರೆ. ಈ ನಡುವೆ ನಟ ಅನಿರುದ್ದ್ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ನಟಿಸಲು ಪಡೆದುಕೊಳ್ಳುತ್ತಿದ್ದ ಸಂಭಾವನೆಯ(Remanrution) ವಿವರ ಬಹಿರಂಗಗೊಂಡಿದೆ.
ಇದನ್ನೂ ಓದಿ : https://vijayatimes.com/support-to-veera-savarkar-from-north-karnataka/
ಕನ್ನಡದ ಜೀ ವಾಹಿನಿಯಲ್ಲೇ ನಟ ಅನಿರುದ್ದ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಇನ್ನು ಅನಿರುದ್ದ್ ಅವರ ಸಂಭಾವನೆ ಕೋವಿಡ್ ನಂತರ ಸಾಕಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ‘ಜೊತೆ ಜೊತೆಯಲಿʼ ಧಾರವಾಹಿ ಪ್ರಾರಂಭವಾದಾಗ ನಟ ಅನಿರುದ್ದ್ ಅವರು ನಿರ್ಮಾಪಕರೊಂದಿಗೆ ಮಾಡಿಕೊಂಡಿರುವ ಒಂದು ವರ್ಷದ ಒಪ್ಪಂದದ ಪ್ರಕಾರ,

ಮೊದಲ ಒಂದು ವರ್ಷ ಪ್ರತಿದಿನ 25,000 ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಒಂದು ವರ್ಷದ ನಂತರ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅವರು ಆರು ತಿಂಗಳು ಸಂಭಾವನೆಯನ್ನು ಹೆಚ್ಚಿಸಿಕೊಂಡಿಲ್ಲ. ಕೋವಿಡ್ ನಂತರ ಅವರು ತಮ್ಮ ಸಂಭಾವನೆಯನ್ನು ತೀವ್ರಗತಿಯಲ್ಲಿ ಹೆಚ್ಚಿಸಿಕೊಂಡಿದ್ದು, ಪ್ರತಿದಿನ 38,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದೆ.
ಇಷ್ಟು ಸಂಭಾವನೆಯನ್ನು ಪಡೆಯುತ್ತಿದ್ದ ಕನ್ನಡದ ಬೆರಳೆಣಿಕೆಯ ಕಲಾವಿದರಲ್ಲಿ ಅನಿರುದ್ದ್ ಕೂಡಾ ಒಬ್ಬರು ಎಂದು ಹೇಳಲಾಗುತ್ತಿದೆ. ಇನ್ನು ಸಂಭಾವನೆಯ ವಿಚಾರದಲ್ಲೂ ನಿರ್ಮಾಪಕ ಆರೂರು ಜಗದೀಶ್ ಮತ್ತು ನಟ ಅನಿರುದ್ದ್ ಅವರ ನಡುವೆ ಮನಸ್ತಾಪ ಆಗಿತ್ತು ಎನ್ನುವುದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.