Bengaluru : ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ(Bengaluru) 3 ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇದನ್ನು ವಿನೋದಕ್ಕಾಗಿ ಮಾಡಲಾಗಿದೆ ಎಂದು ನಟ(Actor) ಮತ್ತು ಸಾಮಾಜಿಕ ಹೋರಾಟಗಾರ ಚೇತನ್(Actor Chetan Justifies) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್(Actor Chetan Justifies) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಿನ್ನೆ ನಡೆದ ಕಾಲೇಜು ಫೆಸ್ಟ್‌ನಲ್ಲಿ ಬೆಂಗಳೂರಿನ 3 ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನು ವಿನೋದಕ್ಕಾಗಿ ಮಾಡಲಾಗಿದೆ.
ಈ ಕಾರಣಕ್ಕಾಗಿ ಆರ್ಯನ್, ರಿಯಾ ಮತ್ತು ದಿನಕರ್ ಅವರನ್ನು ಥಳಿಸಿ ಬೆದರಿಸಿ ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ.
ಪಾಕಿಸ್ತಾನದ ಜನರು ನಮ್ಮ ಸಹೋದರಿಯರು ಮತ್ತು ಸಹೋದರರು – ನಮ್ಮ ಶತ್ರುಗಳಲ್ಲ. ವಾಕ್ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕು ಎಂದಿದ್ದಾರೆ.
ಇದನ್ನೂ ಓದಿ : https://vijayatimes.com/50-days-of-kantara/
ಅದೇ ರೀತಿ ಅವರು ಇನ್ನೊಂದು ಬರಹದಲ್ಲಿ, ಹಿಂದೂ ಧರ್ಮದ ಬಗ್ಗೆ ಇರುವ ದೊಡ್ಡ ಕ್ಲೀಶೇ ಎಂದರೆ ಅದು, ಇತರ ಧರ್ಮಗಳಿಗಿಂತ ಭಿನ್ನವಾಗಿ– ಒಂದು ‘ಜೀವನದ ಮಾರ್ಗವಾಗಿದೆ’ ಎಲ್ಲಾ ಸಿದ್ಧಾಂತಗಳು ‘ಜೀವನದ ಮಾರ್ಗಗಳು’.
ಒಂದು ಸಿದ್ಧಾಂತವು ‘ಸೇನೆ’ ಹೊಂದಿದ್ದರೆ ಅದು ಧರ್ಮವಾಗಬಹುದು,
ಆದ್ದರಿಂದ, ಹಿಂದೂ ಧರ್ಮ– ವೇದಗಳು/ಚಾತುರ್ವರ್ಣವನ್ನು ಆಧರಿಸಿದ ತತ್ವ/ಸಿದ್ಧಾಂತ– ಒಂದು ‘ಜೀವನದ ಮಾರ್ಗ’, ಒಂದು ಸಿದ್ಧಾಂತ ಮತ್ತು ಒಂದು ಧರ್ಮ ಹಿಂದುತ್ವವು,
ಇಸ್ಲಾಮಿಸ್ಟ್ ಮತ್ತು ಕ್ರಿಶ್ಚಿನೈಟ್ ನಲ್ಲಿರೊ ಎಲ್ಲವನ್ನೂ ವಿದೇಶೀಕರಣದ ಮೇಲೆ ನಿರ್ಮಿಸಲ್ಪಟ್ಟಿದೆ.

ಇದು ಮೈಸೂರು ಬಸ್ ನಿಲ್ದಾಣದ ವಿಚಾರದಲ್ಲಿ ಸ್ಪಷ್ಟವಾಗಿ ಕಂಡುಬರುವ ವಾಸ್ತುಶಿಲ್ಪವನ್ನು ಒಳಗೊಂಡಿದೆ.
ಹಿಂದೂ ಪದದ ವ್ಯುತ್ಪತ್ತಿಯಿಂದ ವೈದಿಕ ಧರ್ಮದವರೆಗೆ ಎಲ್ಲವೂ ಮೂಲತಃ ವಿದೇಶಿ ಎಂದು ತೋರಿಸಿದಾಗ ಹಿಂದುತ್ವದ ಆಧಾರವು ಬಿದ್ದು ಹೋಗುತ್ತದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ‘ರಾಹುಲ್ ಗಾಂಧಿ ಒಬ್ಬ ಒಳ್ಳೆಯ ವ್ಯಕ್ತಿ’ ಎಂದು ಕೆಲವು ಕಾಂಗ್ರೆಸ್ ಸದಸ್ಯರು ಹೇಳಿಕೊಳ್ಳುತ್ತಾರೆ.
137 ವರ್ಷಗಳಿಂದ, ಕಾಂಗ್ರೆಸ್ ಪಕ್ಷವು ದಲಿತರು ಮತ್ತು ಆದಿವಾಸಿಗಳನ್ನು ನಿರ್ಲಕ್ಷಿಸಿದೆ, ಹಿಂದೂ ಧರ್ಮ ಮತ್ತು ಇತರ ಅನೇಕ ಮೌಢ್ಯ ಮತ್ತು ಅಸಮಾನತೆಯ ಧರ್ಮಗಳನ್ನು ಹೇರಿದೆ.

ಭ್ರಷ್ಟಾಚಾರ(Corruption) ಮತ್ತು ಖಾಸಗೀಕರಣವನ್ನು ಸಾಂಸ್ಥಿಕಗೊಳಿಸಿದೆ ಮತ್ತು ಸರ್ಕಾರದ ನೀತಿಗಳ ಮೂಲಕ ನಮ್ಮ ಸಂವಿಧಾನದ ಪೀಠಿಕೆಯನ್ನು ತಿರುಚಿದೆ ವ್ಯಕ್ತಿ ಒಳ್ಳೆಯವನೋ ಇಲ್ಲವೋ ಎಂಬುದು ಮುಖ್ಯವಲ್ಲ ಪಕ್ಷ ಕೆಟ್ಟದು ಎಂದು ಟೀಕಿಸಿದ್ದಾರೆ.
- ಮಹೇಶ್.ಪಿ.ಎಚ್