Bengaluru : ಕರ್ನಾಟಕ (Karnataka) ರಾಜ್ಯ ಸರ್ಕಾರ ಅನಧಿಕೃತ ಬಿಪಿಎಲ್ ಕಾರ್ಡ್(BPL card) ರದ್ದು ಪಡಿಸಲು ಮುಂದಾದ ಬೆನ್ನಲ್ಲೇ ಬಿಪಿಎಲ್ ಕಾರ್ಡ್ (BPL Card) ಯಾರಿಗೆ ಸಿಗಬೇಕೊ ಅವರಿಗೆ ಸಿಕ್ಕಿಲ್ಲ, ಅರ್ಹತೆ ಇಲ್ಲದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿದೆ. ಹೀಗಾಗಿ ಮೊದಲು ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ಪರಿಷ್ಕರಣೆ ಮಾಡಬೇಕು . ನಂತರದಲ್ಲಿ ರದ್ದು ಪಡಿಸಬೇಕು.ಇಲ್ಲವಾದಲ್ಲಿ ನಿಜವಾಗಿ ಸಿಗಬೇಕಾದವರಿಗೆ ಸಿಗದೆ ಹೋಗಬಹುದು ಎಂದು ನಟ ಚೇತನ್ (Actor Chetan) ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಅವರು ಒಂದು ತಿಂಗಳ ಹಿಂದೆ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು(BPL card) ಪರಿಷ್ಕರಣೆ ಮಾಡುತ್ತೇವೆ ಎಂದಿತ್ತು. ಆದರೆ ಇನ್ನೂ ಮಾಡಿಲ್ಲ. ಪರಿಷ್ಕರಣೆ ಮಾಡಿದರೆ ರೇಷನ್ ಕಾರ್ಡ್ ವಿಚಾರದಲ್ಲಿ ಏನಾಗಿದೆ ಎಂದು ಗೊತ್ತಾಗುತ್ತದೆ. ಆದರೆ ನಮಗೆ ಸಮಸ್ಯೆಯಾಗುತ್ತಿರುವುದು ಸರ್ಕಾರದ (Govt)ನಿರಾಸಕ್ತಿ, ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಮನಸ್ಥಿತಿ ಸರ್ಕಾರದಲ್ಲಿ ಇಲ್ಲ. ಹಾಗಾಗಿ ಅರ್ಹತೆ ಇಲ್ಲದಿದ್ದವರಿಗೂ ಬಿಪಿಎಲ್ ಕಾರ್ಡ್ ಸಿಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಡಜನರ ಕುರಿತು ಸರ್ಕಾರ ಚಿಂತಿಸುತ್ತಿಲ್ಲ. ಪ್ರತಿಪಕ್ಷಗಳು (Opposition parties)ದನಿ ಎತ್ತುತ್ತಿಲ್ಲ. ಬದಲಾಗಿ ವೈಯಕ್ತಿಕ ಟೀಕೆ ಮಾಡುವುದೆ ಆಗಿದೆ. ವೈಯಕ್ತಿಕ ಪ್ರತಿಷ್ಠೆಗಾಗಿ ರಾಜಕೀಯ(politics)
ಮಾಡಿದರೆ ಉತ್ತಮ ಕೆಲಸಗಳು ಆಗಲ್ಲ. ಉಳ್ಳವರ ಬಳಿ ಬಿಪಿಎಲ್ ಕಾರ್ಡ್ಗಳು ಇದ್ದರೆ, ಅದನ್ನು ಕಿತ್ತುಕೊಂಡು ಬಂದು ಇಲ್ಲದವರಿಗೆ ಸರ್ಕಾರ ನೀಡಬೇಕು. ಪರಿಷ್ಕರಣೆ ಜೊತೆಗೆ ರೇಷನ್ ಕಾರ್ಡ್ಗಳ ಬಗ್ಗೆ ತನಿಖೆ(investigation) ಮಾಡಬೇಕು ಎಂದು ಒತ್ತಾಯಿಸಿದ್ದಾರೆ.