ನಟ ಚೇತನ್ ಅವರಿಗೆ ಮತ್ತೊಂದು ತೊಂದರೆ ಎದುರಾಗಿದ್ದು, ಬೆಂಗಳೂರಿನ ಬಸವನಗುಡಿ ಪೊಲೀಸರು ನಟ ಚೇತನ್ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ನಟ ಚೇತನ್ ಅವರನ್ನು ಕಳೆದ ವಾರದ ಹಿಂದೆಯಷ್ಟೇ ಬಸವನಗುಡಿ ಪೊಲೀಸರು ಚೇತನ್ ಅವರ ಮನೆಗೆ ನುಗ್ಗಿ ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಚೇತನ್ ಅವರ ಪತ್ನಿ ಮೇಘನಾ ಯಾವುದೇ ನೋಟಿಸ್ ನೀಡದೇ ಚೇತನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದರು.

ಪೊಲೀಸರು ಮನೆಯಲ್ಲಿ ಯಾರು ಇಲ್ಲದ ವೇಳೆ ಹೇಳದೆ, ಕೇಳದೆ ನೋಟಿಸ್ ಕೂಡ ನೀಡದೆ ಚೇತನ್ ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಚೇತನ್ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನ ಅನುಭವಿಸಬೇಕಾಯಿತು. ಈ ಮಧ್ಯೆ ಬೇಲ್ ಪಡೆದು ಹೊರಬಂದ ಚೇತನ್ ಅವರ ವಿರುದ್ಧ ಮತ್ತೊಮ್ಮೆ ಬಸವನಗುಡಿ ಪೊಲೀಸರು ಕ್ರಮ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಹೌದು, ಚೇತನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ಕೋರಿ ಬಸವನಗುಡಿ ಠಾಣೆ ಪೊಲೀಸರಿಂದ ರಾಜ್ಯ ಸರ್ಕಾರಕ್ಕೆ ಪತ್ರ ರವಾನಿಸಲಾಗಿದೆ.
ಐಪಿಸಿ ಸೆಕ್ಷನ್ 153(A) ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ಸೂಚಿಸಿ ಎಂದು ಮನವಿ ಮಾಡಿದ್ದಾರೆ. ಈ ಐಪಿಸಿ ಸೆಕ್ಷನ್ ಅಡಿ ಯಾಕೆ ಚಾರ್ಜ್ ಶೀಟ್ ಸಲ್ಲಿಸಲು ಯೋಚಿಸಿದ್ದಾರೆ ಎಂಬ ಪ್ರಶ್ನೆ ಮೂಡಿದರೆ ಇದಕ್ಕೆ ಉತ್ತರ ಹೀಗಿದೆ. ನಟ ಚೇತನ್ ಅವರು ಧರ್ಮ ಕುರಿತು ನೀಡಿದ್ದ ಪ್ರಚೋದನಕಾರಿ ಹೇಳಿಕೆ, ಧರ್ಮ ಒಡೆಯುವಂತಹ ಹೇಳಿಕೆ, ಧರ್ಮಗಳ ನಡುವೆ ಗಲಭೆ ಎಬ್ಬಿಸುವುದು, ಪ್ರಚೋದನಕಾರಿ ಹೇಳಿಕೆಗಳ ಮೂಲಕ ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಸರಿಯಲ್ಲ. ಈ ರೀತಿ ಮಾಡಿದವರ ವಿರುದ್ಧ ಎಫ್.ಐ.ಆರ್ ದಾಖಲಿಸಿಲಾಗುವುದು.

ಈ ಹಿಂದೆ ಚೇತನ್ ಅವರು ನೀಡಿದ್ದ ಹೇಳಿಕೆಯಿಂದ ಅವರ ವಿರುದ್ಧ 2 ಎಫ್.ಐ.ಆರ್ ದಾಖಲಿಸಲಾಗಿತ್ತು. ಸದ್ಯ ಈ ಪ್ರಕರಣ ಕುರಿತು ಬಸವನಗುಡಿ ಪೊಲೀಸರು ನಟ ಚೇತನ್ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆದಿದ್ದಾರೆ.