Diwali Bonus for Darshan: 6 weeks Conditional Interim Bail Granted.
Bengaluru: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್ ನೀಡಿದ್ದು, ಸತತ ನಾಲ್ಕು ತಿಂಗಳ ನಂತರ ದರ್ಶನ್ ಜೈಲಿನಿಂದ ಹೊರಗೆ ಬಂದಿದ್ದಾರೆ. ನ್ಯಾಯದೀಶ. ವಿಶ್ವಜಿತ್ ಶೆಟ್ಟಿಯವರ ಪೀಠ ದರ್ಶನ್ಗೆ ಜಾಮೀನು ನೀಡಿದ್ದು. ಮೆಡಿಕಲ್ ಗ್ರೌಡ್ಸ್ ಮೇಲೆ ದರ್ಶನ್ಗೆ (Actor Darshan) ಜಾಮೀನು ಮಂಜೂರು ಮಾಡಲಾಗಿದ್ದು, ತಾತ್ಕಾಲಿಕವಾಗಿ ಹೈಕೋರ್ಟ್ ಏಕಸದಸ್ಯ ಪೀಠ ದರ್ಶನ್ಗೆ ಜಾಮೀನು ನೀಡಿದೆ.
ಚಾರ್ಜ್ಶೀಟ್ (Chargesheet) ಸಲ್ಲಿಕೆ ಆದ ಬಳಿಕ ದರ್ಶನ್ ಅವರು ಜಾಮೀನು ಕೋರಿ ಕೆಳ ಹಂತದ ಕೋರ್ಟ್ನ ಮೊರೆ ಹೋಗಿದ್ದರು. ಆದರೆ, ಅಲ್ಲಿ ಜಾಮೀನು ಸಿಕ್ಕಿರಲಿಲ್ಲ. ಆ ಬಳಿಕ ದರ್ಶನ್ ಹೈಕೋರ್ಟ್ ಮೊರೆ ಹೋದರು. ತಮ್ಮ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಅವರು ಹೈಕೋರ್ಟ್ನಲ್ಲಿ ಜಾಮೀನಿಗೆ ಮನವಿ ಮಾಡಿದ್ದರು. ಆದರೆ ಆರು ವಾರಗಳ ಮಧ್ಯಂತರ ಜಾಮೀನು ಇದಾಗಿದ್ದು, ಚಿಕಿತ್ಸೆ ಕಾರಣಕ್ಕಾಗಿ ಜಾಮೀನು ನೀಡಲಾಗಿದೆ.
ದರ್ಶನ್ಗೆ ಹೆಚ್ಚಿನ ಷರತ್ತುಗಳನ್ನೇನೂ ನ್ಯಾಯಾಧೀಶರು ವಿಧಿಸಿಲ್ಲ. ಎಸ್ಪಿಪಿ ಮನವಿ ಮೇರೆಗೆ ಪಾಸ್ಪೋರ್ಟ್ (Passport) ವಶಕ್ಕೆ ನೀಡುವಂತೆ ಸೂಚಿಸಲಾಗಿದೆ. ಇದರ ಜೊತೆಗೆ ದರ್ಶನ್ ಇಚ್ಛಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಒಂದು ವಾರದ ಒಳಗಾಗಿ ನ್ಯಾಯಾಲಯಕ್ಕೆ ಚಿಕಿತ್ಸೆಯ ವಿವರಗಳನ್ನು ಸಲ್ಲಿಸಬೇಕಿದೆ. ಕಳೆದ ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್ಗೆ ದೀಪಾವಳಿ ಶುಭ ತಂದಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ (Karnataka Highcourt) ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ರ ಆರೋಗ್ಯ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದ್ದು, ಮಧ್ಯಂತರ ಜಾಮೀನಿಗೆ ಸಾಕಷ್ಟು ಷರತ್ತುಗಳನ್ನು ಮಾನ್ಯ ನ್ಯಾಯಾಲಯ ವಿಧಿಸಿದೆ.
Actor Darshan Bail Today News In Kannada Latest News
Bengaluru: The High Court has given relief to Das, who is suffering hell in the Renukaswamy Murder Case, Darshan has come out of jail after four consecutive months. justice Vishwajit Shetty’s bench granted bail to Darshan. Bail has been granted to Darshan (Actor Darshan) on medical grounds, while the high court single-member bench has granted bail to Darshan.
After the charge sheet was submitted, Darshan approached the lower court seeking bail. However, there was no bail. After that, Darshan approached the High Court. Darshan had appealed for bail in the High Court citing his back pain. But it is an interim bail of six weeks, which is granted for curative reasons.
The judge did not impose any further conditions on Darshan. It has been suggested to surrender the passport on the request of SPP. In addition to this, treatment at Darshan’s desired hospital can be obtained. The details of the treatment have to be submitted to the court within a week. Diwali has brought good fortune to actor Darshan, who has been spending days in jail for the past five months. The Karnataka High Court has granted interim bail to Darshan. Taking Darshan’s health issue into consideration, interim bail for a period of six weeks has been granted and the Hon’ble Court has imposed sufficient conditions for the interim bail.