Darshan Entry to Bellary Jail: Here are the photos of actor Darshan entering the jail..
Bengaluru: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದ ದರ್ಶನ್ (Darshan) ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ (Bellary Jail) ಶಿಫ್ಟ್ ಮಾಡಲಾಗಿದೆ.ಬಳ್ಳಾರಿ ಜೈಲು ಪ್ರವೇಶಿಸುತ್ತಿದ್ದಂತೆ ಮೊದಲಿಗೆ ಜೈಲು ಡೈರಿಯಲ್ಲಿ ದರ್ಶನ್ರ ಮಾಹಿತಿ ಬರೆದುಕೊಳ್ಳಲಾಗಿದೆ. ಯಾವ ಜೈಲಿನಿಂದ ಬಂದಿದ್ದಾರೆ, ಯಾವ ಸಮಯಕ್ಕೆ ಬಂದಿದ್ದಾರೆ ಇನ್ನಿತರೆ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ.
ದರ್ಶನ್ ಜೈಲಿಗೆ ಎಂಟ್ರಿ ಪಡೆಯುವಾಗ ಅವರು ಕೂಲಿಂಗ್ ಗ್ಲಾಸ್ ಧರಿಸಿದ್ದರು. ಜೊತೆಗೆ ಬ್ರ್ಯಾಂಡೆಡ್ ಶರ್ಟ್ (Branded Shirt) ಹಾಕಿದ್ದರು.
ಪೊಲೀಸರ ಸಮ್ಮುಖದಲ್ಲಿ ಅವರು ಜೈಲಿನ (Jail) ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್ಗೆ ಸೂಚನೆ ನೀಡಲಾಗಿದೆ.
ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ (September) 9ರವರೆಗೆ ಮುಂದಕ್ಕೆ ಹೋಗಿದೆ. ಹೀಗಾಗಿ, ಅಲ್ಲಿವರೆಗೂ ದರ್ಶನ್ ಬಳ್ಳಾರಿ ಜೈಲಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ.
ದರ್ಶನ್ ಅವರು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಲನ್ಸ್ ಗಾರ್ಡನ್ ನಾಗನ (Wilson Garden Naga) ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಅವನ ಜೊತೆ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿತ್ತು