Darshan’s judicial custody extended again: Accused’s plea rejected.
Bengaluru: ರೇಣುಕಾಸ್ವಾಮಿ ಕೊ* ಪ್ರಕರಣದ (Renukaswamy Murder Case) ಆರೋಪಿಯಾಗಿರುವ ದರ್ಶನ್ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಲಾಗಿದ್ದು, ನಟ ದರ್ಶನ್ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ (Darshan And Gang) ನ್ಯಾಯಾಂಗ ಬಂಧನ ಎದುರಿಸುತ್ತಿದ್ದು, ಅವರ ನ್ಯಾಯಾಂಗ ಅವಧಿ ಇವತ್ತಿಗೆ ಅಂತ್ಯಗೊಳ್ಳುವುದರಲ್ಲಿತ್ತು. ಹಾಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ (September 9) ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.
ನ್ಯಾಯಾಧೀಶರು ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದರು. ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೈಲಲ್ಲಿ ಸಿಗರೇಟ್ ಸೇದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಪೊಲೀಸರು ವಿಚಾರಣೆ ಎದುರಿಸಲಿದ್ದಾರೆ. ಆ ಬಳಿಕ ಅವರನ್ನು ಬಳ್ಳಾರಿಗೆ (Bellary Jail) ಶಿಫ್ಟ್ ಮಾಡಲಾಗುತ್ತದೆ.
ಪ್ರಕರಣದ ಆರೋಪಿ ಪ್ರದೂಶ್ ಅವರನ್ನು ಬೆಳಗಾವಿ ಜೈಲಿಗೆ (Belagavi Jail) ಶಿಫ್ಟ್ ಮಾಡಲಾಗುತ್ತಿದೆ. ಇದನ್ನು ಮಾಡದಂತೆ ಅವರು ಕೊರಿದ್ದಾರೆ. ‘ನನ್ನ ತಂದೆಗೆ ಕ್ಯಾನ್ಸರ್ ಇದೆ. ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಯರ್ ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ’ ಎಂದು ಪ್ರದೂಶ್ ಕೇಳಿಕೊಂಡಿದ್ದಾರೆ. ಆದರೆ, ಈ ಮನವಿಯನ್ನು ಜಡ್ಜ್ ತಿರಸ್ಕರಿಸಿದ್ದಾರೆ. ‘ಕಾನೂನಿನ ಪ್ರಕಾರ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಜಡ್ಜ್ (Judge) ಹೇಳಿದ್ದಾರೆ.
ಸದ್ಯ ನ್ಯಾಯಾಂಗ ಬಂಧನ ವಿಸ್ತರಣೆಗೆ ನ್ಯಾಯಾಲಯಕ್ಕೆ ಪೊಲೀಸರು ಎಂಟು ಅಂಶಗಳ ಕಾರಣ ನೀಡಿದ್ದಾರೆ. ದರ್ಶನ್ ಅವರು ಮೃತನ ಕುಟುಂಬಕ್ಕೆ ಬೆದರಿಕೆ ಹಾಕಬಹುದು ಎಂದು ಪೊಲೀಸರು ಆತಂಕ ಹೊರಹಾಕಿದ್ದಾರೆ. ಈ ಕಾರಣಕ್ಕೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.
Actor Darshan Shift to Bellary Jail kannada latest news
Bengaluru: The period of judicial custody of Darshan, who is accused in the Renukaswamy Murder Case, has been extended again and it has been decided to shift actor Darshan to Bellary Central Jail.
Actor Darshan and Gang (Darshan And Gang) are facing judicial custody in the case of murder, and their judicial term was about to end today. So the accused have been produced before the 24th ACMM court through video conference. The court ordered the judicial custody of the accused to be extended till September 9.
The judge initially took everyone in attendance. After that, the period of judicial custody was extended to all the accused. Darshan will be questioned by the police regarding his smoking in jail. After that he will be shifted to Bellary Jail.
Pradush, the accused in the case, is being shifted to Belagavi Jail. He asked them not to do this. My father has cancer. Father is hospitalized. Even the lawyer is not allowed to visit. Therefore, Pradush asked them not to shift themselves to another side. However, the judge rejected this plea. The judge said that the authorities will take action according to the law.
At present, the police have given eight reasons to the court for extending the judicial custody. The police are concerned that Darshan may threaten the family of the deceased. For this reason, the period of judicial custody has been extended.