Actor Darshan transferred from Bengaluru to Bellary Central Jail.
Bengaluru: ಪರಪ್ಪನ ಅಗ್ರಹಾರದಿಂದ ನಟ ದರ್ಶನ್ನನ್ನು (Actor Darshan) ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬೆಳ್ಳಂಬೆಳ್ಳಿಗೆ ನಟನನ್ನು ಪೊಲೀಸರು ಕರೆದೊಯ್ಯುತ್ತಿದ್ದು, 11 ಗಂಟೆ ವೇಳೆಗೆ ಬಳ್ಳಾರಿ (Bellary) ತಲುಪುವ ಸಾಧ್ಯತೆ ಇದೆ.
ಆಂಧ್ರದ ಅನಂತಪುರ ಮಾರ್ಗವಾಗಿ ಕರೆದೊಯ್ಯುತ್ತಿರುವ ಮಾಹಿತಿ ದೊರಕಿದ್ದು, ತುಮಕೂರು, ಚಿತ್ರದುರ್ಗದ (Tumakuru, Chitradurga) ಬದಲು ಅನಂತರಪುರ ರೂಟ್ ಮೂಲಕ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಅನಂತರಪುರ ಮಾರ್ಗವಾಗಿ ಬಳ್ಳಾರಿ ಜೈಲಿಗೆ ದರ್ಶನ್ ಹೋಗಲಿದ್ದಾರೆ. ಬೆಳಗಿನ ಜಾವ 4:30ಕ್ಕೆ ಪರಪ್ಪನ ಅಗ್ರಹಾರ ಜೈಲಿನಿಂದ (Parappana Agrahara) ಹೊರಡಲಾಗಿದೆ. ಬೆಳಗ್ಗೆ 6:40ಕ್ಕೆ ಬಾಗೇಪಲ್ಲಿ ಟೋಲ್ ಬಳಿ ದರ್ಶನ್ ಇದ್ದ ವಾಹನ ರೀಚ್ ಆಗಿದೆ. ಒಟ್ಟು ಐದು ಪೊಲೀಸ್ ವಾಹನಗಳು ಭದ್ರತೆ ಒದಗಿಸಿವೆ. ಬಾಗೇಪಲ್ಲಿ ತಾಲ್ಲೂಕಿನ ಅನಂತಪುರ ಗುಂತಕಲ್ ಮಂತ್ರಾಲಯ ಮೂಲಕ ಬಳ್ಳಾರಿ ಪ್ರವೇಶ ಮಾಡಲಿದ್ದಾರೆ.
ಉಗ್ರಗಾಮಿಗಳು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್
ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ ಗಳು ಇವಾಗಿದ್ದು, ಇದರಲ್ಲಿ ಮಂಗಳೂರು, ಶಿವಮೊಗ್ಗ, ಬೆಂಗಳೂರಿನಲ್ಲಿ (Bengaluru) ವಿವಿಧ ಆರೋಪ ಮತ್ತು ಅಪರಾಧ ಅಡಿಯಲ್ಲಿ ಬಂಧಿತರಾಗಿದ್ದ 11 ಜನರು ಈ ಸೆಲ್ ಗಳಲ್ಲಿ (Cell) ಇಡಲಾಗಿದೆ. ದರ್ಶನ್ ಅವರನ್ನು ಬಂಧಿಸಿಡಲಾಗಿರುವ ಸೆಲ್ ಗೆ ಇಬ್ಬರು ವಾಚ್ ಗಾರ್ಡ್ ಮತ್ತು ಒಬ್ಬ ಎಎಸ್ಐ (ASI) ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಬಿಗಿ ಪೊಲೀಸ್ ಭದ್ರತೆ
ಕಾರಗೃಹಕ್ಕೆ ದರ್ಶನ್ ಆಗಮನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕಾರಗೃಹಕ್ಕೆ ತೆರಳುವ ಮಾರ್ಗದ ಎರಡು ಬದಿಯಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದರ್ಶನ್ ಪ್ರವೇಶಿಸುವ ಕನಕ ದುರ್ಗಮ್ಮ ಮಾರ್ಗದ ರಸ್ತೆಯಲ್ಲಿ ಡಿವೈಎಸ್ಪಿ (DYSP) ನೇತೃತ್ವದಲ್ಲಿ ನಾಲ್ವರು ಸಿಪಿಐ ಅಧಿಕಾರಿಗಳನ್ನು, ಸಿಆರ್ಪಿಎಫ್ (CRPF) ತುಕಡಿಗಳನ್ನು ಭದ್ರತೆಗೆ ನಿಯೋಜಿಸಿದ್ದು, ಜೈಲು (Jail) ಮಾರ್ಗದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Actor Darshan Transferred to Bellary Jail kannada news
Bengaluru: Actor Darshan is being shifted to Bellary Central Jail on the insistence of Parappana Agrahara. The actor is being taken by the police from Bangalore to early morning and is likely to reach Bellary by 11 am.
There is information that it is being taken via Anantapur route in Andhra, instead of Tumakuru, Chitradurga (Tumakuru, Chitradurga) it is being shifted to Bellary via Anantapur route. Darshan will go to Bellary Jail via Chikkaballapur and Anantarapur. Left Parappana Agrahara Jail at 4:30 am. Darshan’s vehicle reached near Bagepally toll at 6:40 am. A total of five police vehicles provided security. He will enter Bellary through Ananthapura, Guntakal, Mantralaya in Bagepally Taluk.
The cell prepared to arrest the militants
These are the cells prepared for arrest by the militants who killed the Punjab CM, in which 11 people who were arrested under various charges and crimes in Mangalore, Shimoga, Bangalore (Bengaluru) are kept in these cells. Two watch guards and one ASI will be assigned to the cell where Darshan is detained.
Tight police security
Due to the possibility of a large number of fans coming after Darshan’s arrival at the jail, as a precautionary measure, barricades have been constructed on both sides of the road leading to the jail and more police personnel have been deployed. Four CPI officers led by DYSP and CRPF squads have been deployed for security on the Kanaka Durgamma Marg road where Darshan is entered and public traffic has been completely prohibited on the Jail route.