Bangalore: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಪ್ರಮುಖ ಆರೋಪಿ ನಟ ದರ್ಶನ್ (Accused actor Darshan) ಜಾಮೀನು ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಡೆಸಲಿದೆ. ರಾಜ್ಯ ಹೈಕೋರ್ಟ್ (State High Court) ನೀಡಿರುವ ಜಾಮೀನು ತೀರ್ಪುನ್ನು (Judgment of bail) ಪ್ರಶ್ನಿಸಿ ರಾಜ್ಯ ಸರ್ಕಾರ (State Govt) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಆರೋಪಿಗಳಿಗೆ ಡಿಸೆಂಬರ್ನಲ್ಲಿ ರಾಜ್ಯ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಇದೀಗ ಸುಪ್ರೀಂಕೋರ್ಟ್ನಲ್ಲಿ ನಟ ದರ್ಶನ್ಗೆ ನೀಡಿರುವ ಜಾಮೀನು ರದ್ದಾದರೆ ಕೂಡಲೇ ಬಂಧನವಾಗಿ ಜೈಲು ಸೇರಬೇಕಾಗುತ್ತದೆ. ಹೀಗಾಗಿ, ನಟ ದರ್ಶನ್ಗೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುವ ವಿಚಾರಣೆ ಮಹತ್ವದ್ದಾಗಿದೆ.

ಯಾರ ಜಾಮೀನು ರದ್ದತಿಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ :
ಪವಿತ್ರಾ ಗೌಡ (A 1)
ದರ್ಶನ್ (A 2)
ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (A 6)
ಅನುಕುಮಾರ್ ಅಲಿಯಾಸ್ ಅನು (A 7)
ಆರ್ ನಾಗರಾಜು (A 11)
ಎಂ ಲಕ್ಷ್ಮಣ್ (A 12)
ಪ್ರದೋಶ್ ಎಸ್. ರಾವ್ (A 14)
ಕರ್ನಾಟಕ ಹೈಕೋರ್ಟ್ನಲ್ಲಿ (Karnataka High Court) ಖ್ಯಾತ ವಕೀಲ ಪ್ರಸನ್ನಕುಮಾರ್ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು. ಇದೀಗ ಸುಪ್ರೀಂಕೋರ್ಟ್ನಲ್ಲಿ (Supreme Court) ಅನಿಲ್ ಸಿ.ನಿಶಾನಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಲಿದ್ದಾರೆ.
ತೀರ್ಪಿನ ನಂತರ ತೀರ್ಮಾನ : ಸುಪ್ರೀಂಕೋರ್ಟ್ ಆರೋಪಿಗಳ ಜಾಮೀನಿನ ಕುರಿತು ನೀಡುವ ತೀರ್ಪನ್ನು ನೋಡಿಕೊಂಡು ನಾವು ಮುಂದಿನ ತೀರ್ಮಾನ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳು (Police officers) ಪ್ರಕರಣ ದಾಖಲಾತಿ ಮತ್ತು ಮಾಹಿತಿಗಳನ್ನು ವಕೀಲರ ಮೂಲಕ ಸುಪ್ರೀಂ ಕೋರ್ಟ್ಗೆ (Supreme Court) ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುಪ್ರೀಕೋರ್ಟ್ ವಿಚಾರಣೆ ನಡೆಸಲಿದೆ. ಹೀಗಾಗೀ ಈಗಲೇ ನಾವು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೊಲೀಸರು ಅವರ ಕೆಲಸವನ್ನು ಮಾಡುತ್ತಾರೆ. ಅದಕ್ಕೆ ಬೇಕಾದ ಸಹಕಾರವನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (Home Minister G. Parameshwar) ಅವರು ತಿಳಿಸಿದ್ದಾರೆ.