ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ ಎಂದು ಕನ್ನಡದ ಖ್ಯಾತ ನಟ ಕಿಶೋರ್(Actor Kishore’s post goes viral) ಅವರು ಮಾಡಿರುವ ಪೋಸ್ಟ್ ಇದೀಗ ಎಲ್ಲೆಡೆ ವೈರಲ್‌ಆಗಿದೆ.
ಈ ಕುರಿತು ತಮ್ಮ ಫೇಸ್‌ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಾಂತಾರದ(Kanthara) ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ(Whatsap) ಹರಿದು ಬಂತು.
https://vijayatimes.com/nalinkumar-love-jihad-statement/
ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ?

ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ.
ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ.
ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಎಂದಿದ್ದಾರೆ.
ಇನ್ನು ನಟ ಕಿಶೋರ್‌ಅವರು ಬರೆದುಕೊಂಡಿರುವ ಪೋಸ್ಟ್‌ಸಾಮಾಜಿಕ ಜಾಲತಾಣದಲ್ಲಿ(Actor Kishore’s post goes viral) ಎಲ್ಲೆಡೆ ವೈರಲ್(Viral) ಆಗುತ್ತಿದ್ದು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಂತಹ ತಿಳಿವು ನೀಡುವ ನಿಮ್ಮಂತ ಸಹೃದಯಿ ಕಲಾವಿದರ ಅವಶ್ಯಕತೆ ಇದೆ ಎಂದು ಕೆಲವರು ಹೇಳಿದ್ದರೆ,
ಮನ ಪರಿವರ್ತನೆ ಮಾಡಲು ದೈವ ಅಥವಾ ದೇವರು ಯಾವ ರೂಪದಲ್ಲಿಯಾದರು ಪ್ರಯತ್ನಿಸಬಹುದು. ಅದು ತಂದೆ, ತಾಯಿ, ಗೆಳೆಯ ಯಾರಾದರೂ ಇರಬಹುದು… ಅದನ್ನು ಕೇಳುವ ತಾಳ್ಮೆ ಅಥವಾ ಸಹನೆ ನಮ್ಮಲ್ಲಿರಬೇಕು. ಇಲ್ಲದಿದ್ದರೆ ಅದು ಯಾವ ರೂಪದಲ್ಲಿಯಾದರು ಕೊಲ್ಲಬಹುದು ಅಥವಾ ಶಿಕ್ಷಿಸಬಹುದು ಎಂದು ಇನ್ನು ಕೆಲವರು ಹೇಳಿದ್ದಾರೆ.
- ಮಹೇಶ್.ಪಿ.ಎಚ್