ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ(Kannada Film Industry) ನಟ, ಹಾಸ್ಯ ಕಲಾವಿದ(Comiedian) ಮೋಹನ್ ಜುನೇಜಾ(Mohan Juneja) ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ, ಚಿಕಿತ್ಸೆ ಫಲಿಸದೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಮೋಹನ್ ಜುನೇಜಾ ಅವರು ಕನ್ನಡದ ಸ್ಟಾರ್ ನಟರ ಸಿನಿಮಾಗಳಲ್ಲಿ ಸ್ಟಾರ್ ಹಾಸ್ಯ ಕಲಾವಿದರಾಗಿ ಮತ್ತು ಪೋಷಕ ನಟರಾಗಿ ಚಿರಪರಿಚಿತರಾಗಿದ್ದರು. ಮೋಹನ್ ಜುನೇಜಾ ಅವರ ಕೊನೆಯ ಚಿತ್ರ ಯಶ್ ನಟನೆ ಕೆಜಿಎಫ್ 2 ಸಿನಿಮಾ. ಮೋಹನ್ ಜುನೇಜಾ ಅವರು ದಕ್ಷಿಣ ಭಾರತದ ಪ್ರಸಿದ್ಧ ನಟರಾಗಿದ್ದು, ಅವರು ಪ್ರಥಮವಾಗಿ ಕನ್ನಡ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ನವಗ್ರಹ,ಕೆಜಿಎಫ್ (2018), ಲಕ್ಷ್ಮಿ (2013), ಬೃಂದಾವನ (2013), ಪಡೆ ಪಡೆ (2013), ಕೊಕೊ (2012), ಮತ್ತು ಸ್ನೇಹಿತರು (2012) ಮೋಹನ್ ಅವರ ಕೆಲವು ಜನಪ್ರಿಯ ಚಲನಚಿತ್ರಗಳು (2012). ತಮ್ಮ ಅಮೋಘ ಅಭಿನಯಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದ ಮೋಹನ್ ಜುನೇಜಾ ಅವರು ವಿಭಿನ್ನ ಶೈಲಿಯಲ್ಲಿ ಜನರನ್ನು ನಕ್ಕು ನಗಿಸಿದ್ದಾರೆ. ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾಗಳಾದ ಕೆಜಿಎಫ್ ಚಾಪ್ಟರ್ 1 ಮತ್ತು ಕೆಜಿಎಫ್ ಚಾಪ್ಟರ್ 2 ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಮೋಹನ್ ಜುನೇಜಾ ಅವರು ಮೂಲತಃ ತುಮಕೂರಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಮೋಹನ್ ಜುನೇಜಾ ಅವರು ಮೋಹನ್ ಅವರು 2010 ರಲ್ಲಿ ಕನ್ನಡ ಭಾಷೆಯ ನಾಟಕ ನಾರದ ವಿಜಯದಲ್ಲಿ ಮತ್ತು ಅರೆಥಾ ನಾಟಕದಲ್ಲಿ ಕಾಣಿಸಿಕೊಂಡರು. ಇಂದು ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಸಾವನ್ನಪ್ಪಿದ್ದು, ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸೋಣ.