Visit Channel

ಸಾಮಾಜಿಕ ಜಾಲತಾಣದಲ್ಲಿ ಈ `ಹುಡುಗಿ’ಯದ್ದೇ ಸದ್ದು ; ಹುಡುಗಿ ವೇಷಧಾರಿಯಲ್ಲಿ ಕನ್ನಡದ `ಡಿಫ್ರೆಂಟ್’ ನಟ!

actor

ಸಾಮಾಜಿಕ ಜಾಲತಾಣದಲ್ಲಿ(Social Media) ಹುಡುಗಿ(Girl) ಗೆಟಪ್ ನಲ್ಲಿ ಮಿಂಚುತ್ತಿರುವ ಕನ್ನಡ ಚಿತ್ರರಂಗದ(Kannada Industry) ನಟರೊಬ್ಬರ ಹೆಸರು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಟ್ವೀಟರ್(Twitter), ಫೇಸ್‍ಬುಕ್(Facebook) ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಡಿಫ್ರೇಂಟ್ ನಟ, ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ಉಪೇಂದ್ರ(Upendra) ಅವರು ತಮ್ಮ ಟ್ವಿಟರ್ ಮತ್ತು ಫೇಸ್‍ಬುಕ್ ಖಾತೆಯ ಡಿಪಿಗೆ ತಾವು ಅಭಿನಯಿಸಿರುವ ಹೋಂ ಮಿನಿಸ್ಟರ್(Home Minister) ಸಿನಿಮಾ ಪಾತ್ರದ ಗೆಟಪ್‍ವೊಂದನ್ನು ಹಾಕಿಕೊಂಡಿದ್ದಾರೆ.

ಈ ಮುಖಪುಟದಲ್ಲಿ ನಟ ಉಪೇಂದ್ರ ಹುಡುಗಿಯ ಪಾತ್ರದಲ್ಲಿದ್ದು, ಒಂದು ಕ್ಷಣ ಅಭಿಮಾನಿಗಳು ಅಶ್ಚರ್ಯ ಚಕಿತರಾಗಿದ್ದಾರೆ. ಉಪೇಂದ್ರ ಅವರ ಫೋಟೋ ಬದಲು, ಯಾರೋ ಸ್ತ್ರೀ ಫೋಟೋ ಇದೆಯೆಲ್ಲಾ? ಏನು ಕಥೆ ಎಂದು ತಮ್ಮಲ್ಲೇ ತಾವು ಪ್ರಶ್ನಿಸಿಕೊಂಡಿದ್ದಾರೆ. ಇನ್ನು ಕೆಲವರು ಇದೆಲ್ಲಾ ಉಪ್ಪಿ ಅವರದ್ದೇ ಚಮಕ್ ಇರಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಹೋಂ ಮಿನಿಸ್ಟರ್ ಚಿತ್ರದಲ್ಲಿ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿದ್ದು, ಈ ಸಿನಿಮಾ ಮುಂದಿನ ವಾರದಲ್ಲಿ ತೆರೆಕಾಣಲು ಸಜ್ಜಾಗಿದೆ. ಈ ಮಧ್ಯೆ ಸಿನಿಮಾ ಪ್ರಮೋಷನ್ ಜೊತೆಗೆ ಅಭಿಮಾನಿಗಳಿಗೆ ಕೊಂಚ ತಲೆಗೆ ಹುಳ ಬಿಡುವ ಕೆಲಸ ಉಪೇಂದ್ರ ಅವರು ಮಾಡಿದ್ದಾರೆ ಎಂದೇ ಹೇಳಬಹುದು.

home minister

ಹೋಂ ಮಿನಿಸ್ಟರ್ ಸಿನಿಮಾದಲ್ಲಿ ಬುರ್ಖಾ ಧರಿಸಿರುವ ಮಹಿಳೆ ಪಾತ್ರದಲ್ಲಿ ನಟಿಸಿರುವ ಉಪೇಂದ್ರ ಅವರು, ಅದೇ ಗೆಟಪ್‍ನಲ್ಲಿದ್ದ ಒಂದು ಛಾಯಚಿತ್ರವನ್ನು ಪಡೆದು ತಮ್ಮ ಟ್ವಿಟರ್ ಖಾತೆಯ ಡಿಪಿಗೆ ಹಾಕಿದ್ದಾರೆ. ಇದನ್ನು ಹಾಕಿ, ಹೊಚ್ಚ ಹೊಸ ಗೆಟಪ್ ಎಂದು ಶೀರ್ಷಿಕೆ ನೀಡುವ ಮೂಲಕ ಅಭಿಮಾನಿಗಳಿಗೆ ಸಿನಿಮಾ ಕುರಿತು ಸುದ್ದಿ ಮುಟ್ಟಿಸಿದ್ದಾರೆ ಎನ್ನಬಹುದು. ಒಟ್ಟಾರೆ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯದ ಹೋಂ ಮಿನಿಸ್ಟರ್ ಸಿನಿಮಾ ಮುಂದಿನ ವಾರ ತೆರೆಗೆ ಅಪ್ಪಳಿಸಲಿದ್ದು, ಸಿನಿ ಪ್ರೇಕ್ಷಕರು ಹೇಗೆ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ಸದ್ಯ ನಿರೀಕ್ಷಿಸಬೇಕಿದೆ.

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.