Visit Channel

“ಕಬ್ಜ” ಸಿನಿಮಾ ಶೂಟಿಂಗ್ ವೇಳೆ‌ ನಟ ಉಪೇಂದ್ರ ತಲೆಗೆ ಪೆಟ್ಟು: ನಾನು ಆರಾಮವಾಗಿದ್ದೇನೆ ಎಂದು ರಿಯಲ್ ಸ್ಟಾರ್

WhatsApp Image 2021-04-03 at 12.22.09 PM

ಬೆಂಗಳೂರು, ಎ. 03: ರಿಯಲ್ ಸ್ಟಾರ್‌ ಉಪೇಂದ್ರ ಅಭಿಯನದ ‘ಕಬ್ಜ’ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಆಕಸ್ಮಿಕ ಘಟನೆಯಲ್ಲಿ ನಟ ಉಪೇಂದ್ರ ಅವರ ತಲೆಗೆ ಪೆಟ್ಟಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಬೆಂಗಳೂರಿನ ಮಿನರ್ವಾ ಮಿಲ್ ನಲ್ಲಿ ಕಳೆದ 30 ದಿನಗಳಿಂದಲೂ ‘ಕಬ್ಜ’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅದರಂತೆ ಶನಿವಾರ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ, ಫೈಟರ್ ಒಬ್ಬ ಹಿಂದಿನಿಂದ ಉಪೇಂದ್ರ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡುವ ದೃಶ್ಯದ ಚಿತ್ರೀಕರಣ ಮಾಡುವ ವೇಳೆ, ಫೈಟರ್ ಬೀಸಿದ ರಾಡ್ ನೇರವಾಗಿ ಉಪೇಂದ್ರ ಅವರ ತಲೆಗೆ ತಗುಲಿದೆ.

ರಾಡ್ ಹೊಡೆತ ಬಿದ್ದ ಕೂಡಲೇ ನಟ ಉಪೇಂದ್ರ ಅವರು ನೋವಿನಿಂದ ಕೆಳಗೆ ಬಿದಿದ್ದಾರೆ. ಈ ಘಟನೆಯಿಂದ ಶೂಟಿಂಗ್ ಸೆಟ್‌ನಲ್ಲಿ ಕೆಲಕಾಲ‌ ಆತಂಕ ಮನೆ ಮಾಡಿತ್ತು.‌ ಇದಾದ ಬಳಿಕ ಚೇತರಿಸಿಕೊಂಡ ಉಪೇಂದ್ರ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು.

ಈ ನಡುವೆ ಘಟನೆ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ‌ಮಾಹಿತಿ ನೀಡಿರುವ ರಿಯಲ್ ಸ್ಟಾರ್, ಕಬ್ಜ ಚಿತ್ರೀಕರಣದಲ್ಲಿ ನಡೆದ ಒಂದು ಸಣ್ಣ ಘಟನೆ, ತೊಂದರೆ ಇಲ್ಲ ನಾನು ಆರಾಮವಾಗಿದ್ದೇನೆ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. I am fine nothing to worry, thanks for the concern ಎಂದು ತಿಳಿಸಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.