ಬೆಂಗಳೂರು, ಮೇ. 31: ಕೊರೊನಾ ಲಾಕ್ ಡೌನ್ ನಡುವೆಯೇ ನಟಿ ಪ್ರಣೀತಾ ಸುಭಾಷ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ ಸೇರಿದಂತೆ ಹಲವು ಭಾಷೆ ಚಿತ್ರಗಳಲ್ಲಿ ಛಾಪು ಮೂಡಿಸಿದ್ದ ಪ್ರಣೀತಾ ಸುಭಾಷ್, ಇಷ್ಟು ದಿನ ತಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಬಗ್ಗೆ ಏನೂ ಮಾತನಾಡಿರಲಿಲ್ಲ. ಆದರೆ ಇದೀಗ ಸದ್ದಿಲ್ಲದಂತೆ ಹಸೆಮಣೆ ಏರಿರುವ ಅವರು, ಉದ್ಯಮಿ ನಿತಿನ್ ರಾಜು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಟಿ ಪ್ರಣೀತಾ ಅವರ ವಿವಾಹ ಸಮಾರಂಭ ನಡೆದಿದ್ದು, ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಲ್ಲಿ ಒಬ್ಬರು ಇವರ ಮದುವೆ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ನಟಿ ಪ್ರಣೀತಾ ಅವರು ತಾವು ಮದುವೆಯಾಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ನಟಿ ಪ್ರಣೀತಾ ಸುಭಾಷ್ ಅವರು ಕನ್ನಡದಲ್ಲಿ ಪೊರ್ಕಿ, ಜರಾಸಂದ, ಬ್ರಹ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ಸಹ ಪ್ರಣೀತಾ ನಟಿಸಿದ್ದಾರೆ.