ನಟಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರಲ್ಲಿ ಸಾಕಷ್ಟು ಫೇಸ್ಬುಕ್ ಅಕೌಂಟ್ಗಳು ತೆರೆದುಕೊಂಡಿದ್ದು, ಇದೆಲ್ಲಾ ಅವರನ್ನು ಪ್ರೀತಿಸುವ ಅಭಿಮಾನಿಗಳು ಮಾಡಿಕೊಂಡಿರುವ ಫೇಸ್ಬುಕ್ ಖಾತೆಗಳಾಗಿವೆ. ರಾಧಿಕಾ ಅವರು ಯಾವುದೇ ಅಧಿಕೃತ ಖಾತೆಯನ್ನು ಸದ್ಯ ಹೊಂದಿಲ್ಲ. ಈ ಬಗ್ಗೆ ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ಸ್ಪಷ್ಟನೇ ನೀಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಧಮಯಂತಿ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ ಎಲ್ಲರ ಮನ ಗೆದ್ದರು. ನಟಿ ರಾಧಿಕಾ ಕುಮಾರಸ್ವಾಮಿ ನಟನೆ ಇಂದ ಕೆಲಕಾಲ ದೂರ ಉಳಿದಿದ್ದರೂ ಕೂಡ ರಾಯಲ್ ಆಗಿ ಕಂಬ್ಯಾಕ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಅಂದಿನ ಸಮಯಕ್ಕೆ ಇವರ ಮುಗ್ಧ ನಟನೆಗೆ ಮನಸೋಲದವರು ಯಾರು ಇರಲಿಲ್ಲ. ಟಾಪ್ ಹೀರೋಗಳ ಜೊತೆ ನಟಿಸಿ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ. ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಪ್ರತಿಭಾನ್ವಿತ ನಟಿ. ಧಮಯಂತಿ ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ಮಾಡಿ ಮತ್ತಷ್ಟು ಅಭಿಮಾನಿಗಳನ್ನು ಗೆದ್ದ ಈ ನಟಿ, ಚಿರಂಜೀವಿ ಸರ್ಜಾ ಅವರ ಜೊತೆಗೆ ರುದ್ರತಾಂಡವ, ಅರ್ಜುನ್ ಸರ್ಜಾ ಅವರ ಜೊತೆಗೆ ಕಾಂಟ್ರಾಕ್ಟ್ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ, ಪರ ಭಾಷೆಗಳಲ್ಲೂ ನಟಿಸಿ ಮೆಚ್ಚುಗೆ ಪಡೆದಿರುವ ಈ ನಟಿ, ಸದ್ಯ ಯಾವುದೇ ಫೇಸ್ಬುಕ್ ಅಕೌಂಟ್ ಹೊಂದಿಲ್ಲ ಎಂಬುದು ಅಚ್ಚರಿಯೆ ಸರಿ.

ಸಾಲು ಸಾಲು ಸಿನಿಮಾಗಳ ತಯಾರಿಯಲ್ಲಿರುವ ರಾಧಿಕಾ ಕುಮಾರಸ್ವಾಮಿ, ನಟನೆ ಮಾತ್ರವಲ್ಲದೆ ಸ್ವತಃ ಚಿತ್ರ ನಿರ್ಮಾಣಕ್ಕೂ ಇಳಿದವರು. ಈಗ ಮತ್ತಷ್ಟು ಸಿನಿಮಾಗಳನ್ನು ಕೈಗೆತ್ತಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿ, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ಹಾಗೂ ಸಿನಿ ತಯಾರಿ ಬಗ್ಗೆ ಅಭಿಮಾನಿಗಳಲ್ಲಿ ವಿಷಯಗಳನ್ನು ಹಂಚಿಕೊಳ್ಳಲು ಫೇಸ್ಬುಕ್ ನಲ್ಲಿ ತಮ್ಮ ಅಧಿಕೃತ ಅಕೌಂಟ್ ತೆರೆಯುವುದಾಗಿ ಘೋಷಿಸಿದ್ದಾರೆ. ತಮ್ಮದೇ ಹೆಸರಿನಲ್ಲಿ ಅಧಿಕೃತ ಫೇಸ್ಬುಕ್ ಖಾತೆಯನ್ನು ತೆರೆಯುವುದಾಗಿ ತಿಳಿಸಿದ್ದಾರೆ. ಈ ಹೇಳಿಕೆಯ ಮುಖೇನ ಅಭಿಮಾನಿಗಳಿಗೆ ಸಂತಸ ನೀಡಿರುವ ರಾಧಿಕಾ ಅವರ ಮುಂಬರುವ ಸಿನಿಮಾಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎಂದೇ ಹೇಳಬಹುದು.
- ಸಿಂಚನ