ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಶೆರ್ಲಿನ್ ಚೋಪ್ರಾ

ಮುಂಬೈ, ಜು. 29: ನೀಲಿ ಚಿತ್ರ ಜಾಲದಲ್ಲಿ ಸಿಲುಕುವ ಭಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ನಟಿ ಶೆರ್ಲಿನ್ ಚೋಪ್ರಾ ಇದೀಗ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ.

ಮುಂಬೈ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಗೆ ತಮ್ಮ ಹೇಳಿಕೆ ಕೊಟ್ಟಿರುವ ಅವರು, 2019ರ ಆರಂಭದಲ್ಲಿಯೇ ಒಂದು ಆ್ಯಪ್​ ಬ್ಯುಸಿನೆಸ್​ಗಾಗಿ ರಾಜ್​ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್​ ಮುಗಿದ ಬಳಿಕ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್​ ಕುಂದ್ರಾ ಬಲವಂತವಾಗಿ ಕಿಸ್​ ಮಾಡಲು ಬಂದರು. ನನಗೆ ಭಯವಾಯಿತು. ಇದನ್ನೆಲ್ಲ ನಿಲ್ಲಿಸುವಂತೆ ಕೇಳಿಕೊಂಡೆ. ನಂತರ ಅವರನ್ನು ತಳ್ಳಿ ಎಸ್ಕೇಪ್​ ಆದೆ. ಶೌಚಾಲಯಕ್ಕೆ ತೆರಳಿ ಅಡಗಿಕೊಂಡೆ’ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ’ ಎಂದು ಶರ್ಲಿನ್​​ ಬಳಿ ರಾಜ್​ ಕುಂದ್ರಾ ಹೇಳಿಕೊಂಡಿದ್ದರು ಅಂತಾನೂ ಶೆರ್ಲಿನ್ ಚೋಪ್ರಾ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳ ಮುಂದೆ ಹೇಳಿದ್ದಾರೆ.

Latest News

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!