New Delhi : ಅಮೆರಿಕದ ನ್ಯೂಯಾರ್ಕ್‌ನ ಸಂಶೋಧನಾ ಸಂಸ್ಥೆ `ಹಿಂಡನ್ ಬರ್ಗ್ ರಿಸರ್ಜ್ ವರದಿ’ಯೊಂದು ಭಾರತದ ಆರ್ಥಿಕ ವಲಯದಲ್ಲಿ ಭಾರೀ ತಲ್ಲಣ(adani company risked) ಮೂಡಿಸಿದೆ. ಈ ವರದಿಯಲ್ಲಿ ಅದಾನಿ (Adani Group)ಸಮೂಹಕ್ಕೆ ಸೇರಿದ ಕಂಪೆನಿಗಳ ವಂಚನೆಯನ್ನು ಬಹಿರಂಗಗೊಳಿಸಿದೆ.
ಈ ವರದಿ ಪ್ರಕಟವಾದ ನಂತರ ಭಾರತದ ಷೇರುಪೇಟೆಗಳಲ್ಲಿ ಬುಧವಾರ ಹಾಗೂ ಶುಕ್ರವಾರ ಭಾರೀ ಕುಸಿತ ಕಂಡಿತು. ಅದಾನಿ ಕಂಪೆನಿಯ ಷೇರುಗಳ ಮೌಲ್ಯ ಕುಸಿಯುವುದರ ಜೊತೆ ಜೊತೆಗೆ ಇತರ ಕಂಪೆನಿಗಳ ಷೇರು ಮೌಲ್ಯವೂ ಕುಸಿಯಿತು.
ಅಲ್ಲದೆ ಅದಾನಿ ಕಂಪೆನಿಗೆ ಸಾಲ ಕೊಟ್ಟ, ಅದಾನಿ ಕಂಪೆನಿಗಳ ಸಮೂಹದಲ್ಲಿ ಹೂಡಿಕೆ ಮಾಡಿರುವ ಎಸ್‌ಬಿಐ(SBI) ಹಾಗೂ ಎಲ್‌ಐಸಿ(LIC) ಕಂಪೆನಿಗಳ ಷೇರು ಮೌಲ್ಯವೂ ಪಾತಾಳ ಕಚ್ಚಿದೆ.
ಈ ಬೆಳವಣಿಗೆ ಭಾರತೀಯರಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ಗಮನಿಸಬೇಕಾದ ಅಂಶ ಅಂದ್ರೆ ಅದಾನಿ ಸಮೂಹ ಸಂಸ್ಥೆಗಳಲ್ಲಿ ಖಾಸಗಿ ಮ್ಯೂಚುವಲ್ ಫಂಡ್ ಕಂಪೆನಿಗಳು(Mutual fund ) ಹೂಡಿಕೆ ಮಾಡಿಲ್ಲ.
ಅದ್ರೆ ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿರುವ ಭಾರತೀಯ ಜೀವ ವಿಮಾ ನಿಗಮ (LIC) ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಅಂಗಸಂಸ್ಥೆಗಳು ಅದಾನಿ ಸಮೂಹ ಕಂಪೆನಿಗಳಲ್ಲಿ ದೊಡ್ಡ(adani company risked) ಮಟ್ಟದಲ್ಲಿ ಹೂಡಿಕೆ ಮಾಡಿವೆ.
ಅದಾನಿ ಕಂಪೆನಿಗಳ ಷೇರುಮೌಲ್ಯ ಕುಸಿಯುತ್ತಿದ್ದ ಹೊತ್ತಿನಲ್ಲಿಯೂ ಎಲ್‌ಐಸಿ ಹೂಡಿಕೆಯನ್ನು ಹೆಚ್ಚಿಸಿದೆ.
ಇದರಿಂದ ಕೋಟ್ಯಾಂತರ ಭಾರತೀಯರು ಉಳಿತಾಯ ಹಾಗೂ ಹೂಡಿಕೆಯ ಹೆಸರಲ್ಲಿ LIC ಹಾಗೂ SBI ಹಾಕಿರುವ ಹಣ ಅಪಾಯದಲ್ಲಿದೆ.
ಈ ವರದಿಯ ಸತ್ಯಾಸತ್ಯತೆಯ ಕುರಿತು ತನಿಖೆಯಾಗಬೇಕು ಹಾಗೂ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅದಾನಿ ಕಂಪನಿಯ ಕುರಿತು ಕೇಂದ್ರ ಸರ್ಕಾರ ಸೆಬಿ ಮತ್ತು ಆರ್‌ಬಿಐ(RBI) ಮೂಲಕ ತನಿಖೆ ನಡೆಸಬೇಕೆಂದು ವಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ದೇಶದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ(Gautham Adani) ಅವರ ನೇತೃತ್ವದ ಅದಾನಿ ಗ್ರೂಪ್ ಆಪ್ ಇಂಡಸ್ಟ್ರೀಜ್(Adani Group of Industries) ಕುರಿತು,
ಹಿಂಡನ್‌ಬರ್ಗ್ ರಿಸರ್ಚ್‌ನ ಫೊರೆನ್ಸಿಕ್ ವಿಶ್ಲೇಷಣೆ ನಂತರ ಅದಾನಿ ಷೇರುಗಳ ಬೆಲೆ ತೀವ್ರ ಕುಸಿತ ಕಂಡಿವೆ.
ಅದಾನಿ ಗ್ರೂಪ್‌ನ ಎಲ್ಲ ಕಂಪನಿಗಳು ನಷ್ಟ ಅನುಭವಿಸಿವೆ. ಅದಾನಿ ಕಂಪನಿಯಲ್ಲಿ ಭಾರತೀಯ ಜೀವ ವಿಮಾ ನಿಗಮ ಮತ್ತು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಕೂಡಾ ಹೂಡಿಕೆ ಮಾಡಿದ್ದು,
ಹೀಗಾಗಿ ಅದಾನಿ ಕಂಪನಿಯ ಆರ್ಥಿಕ ವ್ಯವಹಾರಗಳ ಕುರಿತು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)
ನಂತಹ ಸಂಸ್ಥೆಗಳು ಗಂಭೀರ ತನಿಖೆ ನಡೆಸುವ ಅಗತ್ಯವಿದೆ ಎಂದು ಕಾಂಗ್ರೆಸ್‌ನ(Congress) ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಅದಾನಿ ಒಡೆತನದ ಅನೇಕ ಕಂಪನಿಗಳಲ್ಲಿ ಸಾರ್ವಜನಿಕ ವಲಯದ ಅನೇಕ ಬ್ಯಾಂಕ್‌ಗಳು, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿವೆ.
ಈ ಉದಾರ ಹೂಡಿಕೆಯಿಂದಾಗಿ ಈಗ ಇಡೀ ದೇಶದ ಆರ್ಥಿಕ ಸ್ಥಿತಿಯೇ ಅಪಾಯಕ್ಕೆ ಸಿಲುಕಿದೆ. ಎಲ್‌ಐಸಿ, ಎಸ್‌ಬಿಐ ಬ್ಯಾಂಕುಗಳು ಅದಾನಿ ಗ್ರೂಪ್‌ಗೆ ಉದಾರವಾಗಿ ಹಣಕಾಸು ಹೂಡಿಕೆ ಒದಗಿಸಿವೆ.
ಎಲ್‌ಐಸಿ ನಿರ್ವಹಿಸುತ್ತಿರುವ ಆಸ್ತಿಯಲ್ಲಿ ಶೇ.8ರಷ್ಟು ಅಂದರೆ 74,000 ಕೋಟಿ ರೂ. ಅದಾನಿ ಕಂಪನಿಗಳಲ್ಲಿದೆ.
ಇನ್ನು ಖಾಸಗಿ ಬ್ಯಾಂಕ್‌ಗಳಿಗಿಂತ ಎರಡು ಪಟ್ಟು ಹೆಚ್ಚಿನ ಸಾಲವನ್ನು ಅದಾನಿ ಗ್ರೂಪ್‌ಗೆ ಎಸ್‌ಬಿಐ ಬ್ಯಾಂಕ್ ನೀಡಿದೆ.
ಈ ‘ಬೇಜವಾಬ್ದಾರಿ’ಯಿಂದ ತಮ್ಮ ಉಳಿತಾಯವನ್ನು ಎಲ್‌ಐಸಿ ಮತ್ತು ಎಸ್‌ಬಿಐಗೆ ಸುರಿದ ಕೋಟ್ಯಂತರ ಭಾರತೀಯರ ಹಣ ಅಪಾಯದಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಿಸಲಿ, ನನ್ನ ಮಕ್ಕಳಿಂದ ರಾಜೀನಾಮೆ ಕೊಡಿಸ್ತೀನಿ: ಹೆಚ್.ಡಿ ರೇವಣ್ಣ
ಇನ್ನು ಅದಾನಿ ಗ್ರೂಪ್ ಷೇರು ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಹಿಂಡನ್‌ಬರ್ಗ್ ವರದಿಯಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಅದಾನಿ ಕಂಪನಿ ಕೃತಕವಾಗಿ ಷೇರುಗಳನ್ನು ಹೆಚ್ಚಿಸಿದೆ ಎಂದು ಆರೋಪಿಸಿದೆ. ಆದರೆ ಆರೋಪವನ್ನು ತಳ್ಳಿ ಹಾಕಿರುವ ಅದಾನಿ ಗ್ರೂಪ್,
ನಮ್ಮ ಸಂಸ್ಥೆಯ ಷೇರು-ಮಾರಾಟವನ್ನು ಹಾಳುಮಾಡುವ ದುರುದ್ದೇಶದಿಂದ, ಆಧಾರರಹಿತ, ಏಕಪಕ್ಷೀಯ ವರದಿಯನ್ನು ಹಿಂಡನ್‌ಬರ್ಗ್ ಬಿಡುಗಡೆ ಮಾಡಿದೆ ಎಂದು ಹೇಳಿದೆ.