Mumbai: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ (Maharashtra assembly elections) ಬಿಜೆಪಿ (BJP) ನೇತೃತ್ವದ ಎನ್ಡಿಎ (NDA) ಭಾರಿ ಗೆಲುವು ಸಾಧಿಸಿದ ನಂತರದಲ್ಲಿ ಇಂದು ಭಾರತೀಯ ಷೇರು ಮಾರುಕಟ್ಟೆಗಳು (Stock Market) ಭಾರೀ ಏರಿಕೆ ಕಂಡಿವೆ .ಬಿಎಸ್ಇ ಸೆನ್ಸೆಕ್ಸ್ (Sensex) ಸೂಚ್ಯಂಕ 1,200 ಪಾಯಿಂಟ್ಗಳು ಅಥವಾ ಶೇಕಡಾ 1.36 ರಷ್ಟು ಏರಿಕೆಯಾಗಿ 80,193.47 ಪಾಯಿಂಟ್ಗಳಲ್ಲಿ ವಹಿವಾಟು ಪ್ರಾರಂಭಿಸಿದೆ. ಇನ್ನು ನಿಫ್ಟಿ 50 (Nifty 50) ಸೂಚ್ಯಂಕವು 1.45 ಶೇಕಡಾ ಅಥವಾ 346.30 ಪಾಯಿಂಟ್ಗಳಿಗಿಂತ ಹೆಚ್ಚು ಗಳಿಸಿ 24,253.55ಕ್ಕೆ ತಲುಪಿದೆ.
ಎರಡೂ ಮಾನದಂಡಗಳು ಶುಕ್ರವಾರದಂದು ಸುಮಾರು 1.5% ರಷ್ಟು ಏರಿದ್ದವು . ಅಲ್ಲದೆ ಇವು ಜೂನ್ (June) ಆರಂಭದಿಂದಲೂ ಅವರ ಅತ್ಯುತ್ತಮ ಏರಿಕೆ ಅಲ್ಲಿತ್ತು. ಆ ಮೂಲಕ ಎಲ್ಲಾ 13 ಪ್ರಮುಖ ವಲಯಗಳು ಲಾಭ (Profit) ಗಳಿಸಿದವು. ವಿಶಾಲವಾದ, ಹೆಚ್ಚು ದೇಶೀಯವಾಗಿ (Domestically) ಕೇಂದ್ರೀಕೃತವಾಗಿರುವ ಸ್ಮಾಲ್- ಮತ್ತು ಮಿಡ್-ಕ್ಯಾಪ್ಗಳು (Small- and mid-caps) ತಲಾ 2% ದಷ್ಟು ಏರಿದವು.ತಜ್ಞರ ಅವರ ಪ್ರಕಾರ ಇಂದು ಎಚ್ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ (HCL Technologies Limited,) , ಆಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಅರಬಿಂದೋ ಫಾರ್ಮಾ ಲಿಮಿಟೆಡ್, ಜೈೂಸ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಷೇರು ಮೇಲೆ ಹೂಡಿಕೆ ಮಾಡಬಹುದಾಗಿದೆ.
ಇವೆಲ್ಲವುಗಳ ನಡುವೆ ಲಂಚ ನೀಡಿಕೆಯ ಆರೋಪದಡಿ ಭಾರತದ ಉಧ್ಯಮಿ ಗೌತಮ್ ಅದಾನಿ (Gautham Adani) ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆಯಾದ ಬೆನ್ನಲ್ಲೇ ಇತ್ತ ಭಾರತೀಯ ಷೇರುಮಾರುಕಟ್ಟೆಯಲ್ಲಿ (Indian stock market) ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದವು. ಆದರೆ ಇಂದು ಷೇರುಗಳಲ್ಲಿ ಶೇ.4ರಷ್ಟು ಏರಿಕೆ ಕಂಡಿದೆ.ಇನ್ನು ಸೆನ್ಸೆಕ್ಸ್ ಮತ್ತು ನಿಫ್ಟಿ (Sensex and Nifty) 50 ಶುಕ್ರವಾರದಂದು ಶೇಕಡಾ 2.5ರಷ್ಟು ಲಾಭ ಗಳಿಸಿತ್ತು. ಈ ಮೂಲಕ ವಾರಾಂತ್ಯ ಪಾಸಿಟೀವ್ ಆಗಿ ಕೊನೆಗೊಂಡಿತ್ತು. ಶುಕ್ರವಾರ ಸೆನ್ಸೆಕ್ಸ್ 1,961 ಅಂಕಗಳು ಅಥವಾ ಶೇಕಡಾ 2.54 ರಷ್ಟು ಜಿಗಿದು 79,117.11ಕ್ಕೆ ವಹಿವಾಟು ಮುಗಿಸಿತ್ತು. ನಿಫ್ಟಿ 50 557 ಪಾಯಿಂಟ್ ಅಥವಾ 2.39 ರಷ್ಟು ಏರಿಕೆಯಾಗಿ 23,907.25ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಬ್ಯಾಂಕ್ 763 ಪಾಯಿಂಟ್ಗಳು ಅಥವಾ ಶೇಕಡಾ 1.51 ರಷ್ಟು ಜಿಗಿದು 51,135.40ಕ್ಕೆ ತಲುಪಿದೆ. ಐಟಿ, ರಿಯಾಲ್ಟಿ ಮತ್ತು ಪಿಎಸ್ಯು ಬ್ಯಾಂಕ್ (IT, Realty and PSU Bank) ಸೂಚ್ಯಂಕಗಳು ತಲಾ ಶೇಕಡ 3ರಷ್ಟು ಏರಿಕೆ ಕಂಡಿವೆ.