Visit Channel

ಅಧಿಕೃತವಾಗಿ ಚಂದನವನಕ್ಕೆ ಲಗ್ಗೆ ಇಟ್ಟ ‘ಬೈ ಟೂ ಲವ್’

WhatsApp Image 2020-12-28 at 3.32.00 PM

ಗಾಂಧಿ ನಗರ ಅಂದ್ರೆ ಸಿನಿಮಾ.. ಇಲ್ಲಿ ದಿನಕ್ಕೊಂದರಂತೆ ಸಿನಿಮಾಗಳು ಸೆಟ್ಟೇರ್ತಾನೆ ಇರುತ್ತದೆ . ಹೊಸ ಹೊಸ ಪ್ರತಿಭೆಗಳ ಅನಾವರಣಾನು ಆಗುತ್ತೆ .. ಅದರಲ್ಲೂ ಲವ್ ಸ್ಟೊರಿಗಳು ಸಿನಿಮಾಗಳು ಸಿನಿರಸಿಕರನ್ನು ಹೆಚ್ಚಾಗಿ ಅಟ್ರಾಕ್ಟ್ ಮಾಡುತ್ತದೆ .ಈ ಸಾಲಿಗೆ ಹೊಸ ಚಿತ್ರವೊಂದು ಸೇರ್ಪಡೆಯಾಗಿದೆ . ಬೈ ಟು ಲವ್ ಅನ್ನೋ ಸಿನಿಮಾ ಸ್ಯಾಂಡಲ್ವುಡ್ ಗೆ ಎಂಟ್ರಿಯಾಗಿದ್ದು ಬಜಾರ್ ಹೊಡೆದು ಸಿನಿಮಾದ ಮೂಹುರ್ತ ಮಗಿಸಲಾಯಿತು..

ಹೌದು ಈಗಾಗಲೇ ಬಜಾರ್ ಅನ್ನೋ ಚಿತ್ರದ ಮೂಲಕ ಸಕ್ಸಸ್ ಪಡೆದಿರೋ ಧನ್ವೀರ್ ಮತ್ತೊಮ್ಮಯಶಸ್ಸಿನ ಬಾಗಿಲು ತೆರೆಯಲು ರೆಡಿಯಾಗಿದ್ದಾರೆ . ಬೈ ಟೂ ಲವ್ ಮೂಲಕ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದು ಹುಡುಗಿಯರ ಪಾಲಿನ ಚೋರನಾಗಲಿದ್ದಾರೆ .ಹರಿಸಂತೋಷ್ ನಿರ್ದೇಶನದ ಬಂಪರ್ ಅನ್ನೋ ಚಿತ್ರ ಚಂದನವನಕ್ಕೆ ಎಂಟ್ರಿಯಾಗುತ್ತೆ ಅಂತ ನಿರ್ದೇಶಕರು ಘೋಷಿಸಿದ್ದು ನಾಯಕನಾಗಿ ಧನ್ವೀರ್ ಅನ್ನೂ ಸೆಲೆಕ್ಟ್ ಮಾಡಿದ್ರು. ಆದ್ರೆ ಈ ಚಿತ್ರದ ಶೂಟಿಂಗ್ ಮೊದಲೇ ಬೈಟು ಲವ್ ಸ್ಟೋರಿ ಚಿತ್ರದ ಮೂಹುರ್ತವನ್ನು ಧನ್ವೀರ್ ಮುಗಿಸಿದ್ದಾರೆ .

ಹೌದು ಕ್ರಿಸ್ ಮಸ್ ವಿಶೇಷವಾಗಿ ಬೈಟು ಲವ್ ಚಿತ್ರದ ಮೂಹುರ್ತ ಅದ್ದೂರಿಯಾಗಿ ನಗರದ ಬಂಡಿಮಹಾಕಾಳಮ್ಮನ ದೇವಸ್ಥಾನದಲ್ಲಿ ನಡೆಯೋದರ ಮೂಲಕ ಅಧಿಕೃತವಾಗಿ ಚಿತ್ರದ ಪ್ರಾಜೆಕ್ಟ್ ಆರಂಭಗೊಂಡಿದೆ .ಅಂದಹಾಗೆ ಚಿತ್ರದ ಮೊದಲ ಸನ್ನಿವೇಶಕ್ಕೆ ಕಾಶ್ವಿ ವೆಂಕಟ್ ಕ್ಲಾಪ್ ಮಾಡಿದ್ದಾರೆ ಸಿದ್ದು ವೆಂಕಟೇಶ್ ಕಾಮರಾ ಚಾಲನೆ ಮಾಡೋದರ ಮೂಲಕ ಸಿನಿಮಾಕ್ಕೆ ಶುಭಕೋರಿದ್ದಾರೆ . ಇನ್ನು ಬೈಟು ಲವ್ ಸಿನಿಮಾಕ್ಕೆ ಹರಿ ಸಂತೋಷ್ ಆಕ್ಷನ್ ಕಟ್ ಹೇಳುತ್ತಿದ್ದು ಹರಿ ಸಂತೋಷ್ ಅವರ ೯ ನೇ ಸಿನಿಮಾ ಇದಾಗಿದೆ .ಇನ್ನುಳಿದಂತೆ ಈಗಾಗಲೇ ಎ.ಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೂಲಕ ಮೋಡಿ ಮಾಡಿದ ಶ್ರೀ ಲೀಲಾ ಮತ್ತೆ ಪಡ್ಡೆ ಹುಡುಗರ ನಿದ್ದೆಗೆಡಿಸಲು ತೆರೆ ಮೇಲೆ ಬರ್ತೀದ್ದಾರೆ . ಬೈಟು ಲವ್ ಸಿನಿಮಾದಲ್ಲಿ ಧನ್ವೀರ್ ಗೆ ನಾಯಕಿಯಾಗಿ ಶೀ ಲೀಲಾ ಕಾಣಿಸಿಕೊಳ್ಳಲಿದ್ದಾರೆ.

ಇನ್ನುಳಿದಂತೆ ಸಿನಿಮಾ ದಲ್ಲಿ ಕಾಮಿಡಿ ಕಿಕ್ ಕೊಡಲು ಸಾಧುಕೋಕಿಲ ಅಚ್ಯುತ ಕುಮಾರ್ ಶಿವರಾಜ್ ಕೆ ಆರ್ ಪೇಟೆ ಕಾಣಿಸಲಿದ್ದಾರೆ.. ಮತ್ತೊಂದು ವಿಶೇಷ ಅಂದ್ರೆ ಚಿತ್ರದ ನಿರ್ದೇಶಕರಾದ ಹರಿ ಸಂತೋಷ್ ನಿರ್ದೇಶನದ ಜೊತೆ ಕಥೆ ಚಿತ್ರ ಕಥೆ ಬರೆದಿದ್ದಾರೆ .ಟಗರು ಖ್ಯಾತಿಯ ಮಹೇಂದ್ರ ಸಿಂಹ ಛಾಯಗ್ರಹಣ ಚಿತ್ರದಲ್ಲಿ ಹೈಲೆಟ್ ಆಗಲಿದ್ದು ಅಜನೀಶ್ ಲೋಕನಾಥ್ ಸಂಗೀತ ಮೋಡಿ ಮಾಡಲಿದೆ . ಜೊತೆಗೆ ಕೆ.ಎಂ ಪ್ರಕಾಶ್ ಸಂಕಲನ ಚಿತ್ರದಲ್ಲಿ ಇರಲಿದೆ .

ಬೈ ಟು ಲವ್ ಸಿನಿಮಾ ಕೆ ವಿ ಎನ್ ಪ್ರೊಡಕ್ಷನ್ ನಲ್ಲಿ ತಯಾರಾಗಲಿದ್ದು ನಿಶಾ ವೆಂಕಟ್ ಹಾಗೂ ಸುಪ್ರೀತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ .ಸದ್ಯ ಇತ್ತ ಮೂಹುರ್ತ ಮುಗಿಸಿರೋ ಚಿತ್ರತಂಡ ಜನವರಿ ೪ ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸಲಿದ್ದು ಇದಕ್ಕಾಗಿ ಹೆಚ್ ಎಂ ಟಿ ಬಳಿ ಅದ್ದೂರಿ ಸೆಟ್ ನಿರ್ಮಾಣಗೊಂಡಿದೆ .

  • ದೀಪಿಕಾ

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.