ನಟಿಯರು ಅಂದಮೇಲೆ ಅವರಿಗೆ ಆರೋಗ್ಯ ಕಾಳಜಿ, ಸೌಂದರ್ಯ ಕಾಳಜಿ ಅತೀ ಮುಖ್ಯ ಎಂದು ಹೇಳಬಹುದು. ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಬಹಳ ಬಿಝಿಯಾಗುವ ಮೂಲಕ ತಮ್ಮ ಆರೋಗ್ಯ ಕಾಳಜಿ, ಲೈಫ್ ಸ್ಟೈಲ್ ಬಗ್ಗೆ ಮುತ್ತುವರ್ಜಿ ವಹಿಸಲು ಕಷ್ಟವಾಗುತ್ತದೆ. ನಟಿಯಾಗಿ ಮುಂದುವರಿಯಲು ಅವರ ಅರೋಗ್ಯ, ಸೌಂದರ್ಯದ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಸಿನಿಮಾ ರಂಗದಲ್ಲಿ ಹೆಚ್ಚು ದಿನಗಳ ಕಾಲ ಮುಂದುವರೆಯಬೇಕಾದರೆ ಅವರ ಸೌಂದರ್ಯವನ್ನು ಹಾಗೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.
ಈ ಸಾಲಿನಲ್ಲಿ ನಟಿ ಅದಿತಿ ಪ್ರಭುದೇವ ಕೂಡ ತಮ್ಮ ಲೈಫ್ ಸ್ಟೈಲ್ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಇನ್ನು 21 ದಿನಗಳಲ್ಲಿ ನನ್ನ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳುತ್ತೇನೆ. ಅದೇ ನನ್ನ ಮುಖ್ಯ ಗುರಿ ಎಂದಿದ್ದಾರೆ. ಅಷ್ಟಕ್ಕೂ ನಟಿ ಅದಿತಿ ಅವರ 21 ದಿನಗಳ ಲೈಫ್ ಸ್ಟೈಲ್ ಗುಟ್ಟೇನು.? ಮುಂದೆ ಓದಿ.
ಅದಿತಿ ಪ್ರಭುದೇವ ಹೇಳುವ ಪ್ರಕಾರ ಕಳೆದ ಎರಡು ತಿಂಗಳಿಂದ ಅವರ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಯಾಗಿದೆಯಂತೆ. ಹೌದು, ಈ ಕುರಿತು ಮಾತನಾಡಿರುವ ಅದಿತಿ, ನನ್ನ ಲೈಫ್ ಸ್ಟೈಲಿನಲ್ಲಿ ಕೆಲ ಬದಲಾವಣೆಗಳು ನನ್ನ ಅರಿವಿಗೆ ಬಾರದಂತೆ ಆಗಿದೆ. ನನಗೆ ಶೂಟಿಂಗ್ ಅದು ಇದು ಅಂತ ಹೇಳಿ ಕಾರಣ ಕೊಡಲು ಇಷ್ಟವಿಲ್ಲ. ನನ್ನ ಬೇಜವಾಬ್ದಾರಿ ಇದಕ್ಕೆ ಕಾರಣ ಎಂದು ಹೇಳಬಹುದು. ಸದ್ಯ ಇನ್ನು 21 ದಿನಗಳಲ್ಲಿಯೇ ತನ್ನ ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳುವುದು ಖಚಿತ ಎಂದು ಹೇಳಿದ್ದಾರೆ.
21 ದಿನಗಳು ನಾವು ಯಾವುದೇ ಬದಲಾವಣೆಗಳನ್ನು ಮಾಡಿಕೊಂಡರೆ ಅದು ನಮಗೆ ಅಭ್ಯಾಸವಾಗಿ ಮಾರ್ಪಾಡಾಗುತ್ತದೆ. 90 ದಿನ ಅಭ್ಯಾಸವಾಗಿಬಿಟ್ಟರೆ ಅದು ನಮ್ಮ ಲೈಫ್ ಸ್ಟೈಲ್ ಆಗುತ್ತದೆ. ನಾನು ಸದ್ಯ 90 ದಿನಗಳ ಗುರಿ ಇಟ್ಟುಕೊಳ್ಳುವುದಿಲ್ಲ.! ಬದಲು 21 ದಿನಗಳ ಗುರಿ ಪಾಲಿಸುತ್ತೇನೆ. ಇವತ್ತಿಂದ ಇನ್ನು 21 ದಿನಗಳು ನಾನು ನನ್ನ ಲೈಫ್ ಸ್ಟೈಲ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇನೆ.” ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.