ನವದೆಹಲಿ, ಡಿ. 19: ಕೊರೊನಾದಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವ ಸಾರ್ವಜನಿಕರು, ಸುಮಾರು 6 ರಿಂದ 7 ತಿಂಗಳುಗಳ ಲಾಕ್‍ಡೌನ್, ಹಲವು ವ್ಯಾಪಾರ ವಹಿವಾಟುಗಳಿಗೆ ಸಂಪೂರ್ಣ ಹಾನಿ ಉಂಟುಮಾಡಿದೆ. ಅದರ ಜೊತೆ ಪ್ರತಿ ದಿನ ಪೆಟ್ರೋಲ್, ಡೀಸಲ್ ಬೆಲೆಗಳು ಏರಿಕೆ ಸಾವರ್ಜನಿಕರಲ್ಲಿ ಆತಂಕ ಉಂಟುಮಾಡಿದೆ.
ಮೊದಲೆ ಉದ್ಯೋಗಗಳಿಲ್ಲದೇ ಪರದಾಡುತ್ತಿರುವ ಜನರು ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇವೆಲ್ಲದರ ನಡುವೆ ಅಡುಗೆ ಎಣ್ಣೆ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಅಡುಗೆ ಎಣ್ಣೆ ಬೆಲೆಯು ಶೇ.35 ರಿಂದ 45 ರಷ್ಟು ಏರಿಕೆ ಕಂಡಿದೆ.
100 ರೂಪಾಯಿ ಇದ್ದ ಅಡುಗೆ ಎಣ್ಣೆಯ ಬೆಲೆ ಇದೀಗ 130 ರಿಂದ 140 ರೂ. ಹೆಚ್ಚಾಗಿದ್ದು, ಪಾಮ್ ಎಣ್ಣೆ ಬೆಲೆ ಲೀಟರ್ ಗೆ ರೂ. 65 ರಿಂದ 75ರಷ್ಟಿದ್ದ ಬೆಲೆಯು, ಈಗ ರೂ. 100 ರಿಂದ 120 ರಷ್ಟಾಗಿದೆ. ಮೊದಲೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದ ಸಾಮಾನ್ಯ ಜನರು ಇನ್ನಷ್ಟು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.