ಕಾಬೂಲ್, ಆ. 24: ಅಫ್ಘಾನ್ನ ಕಾಬೂಲ್ ವಿಮಾನ ನಿಲ್ದಾಣದಿಂದ ಭಾರತೀಯರು ಮತ್ತು ಅಫ್ಘಾನ್ನ ಅಲ್ಪಸಂಖ್ಯಾತರನ್ನು ಭಾರತಕ್ಕೆ ತರುವ ಕಾರ್ಯಾಚರಣೆಗೆ ‘ಆಪರೇಶನ್ ದೇವಿ ಶಕ್ತಿ (Operation Devi Shakti) ’ಎಂದು ಹೆಸರು ನೀಡಲಾಗಿದೆ.
ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಅಫ್ಘಾನ್ನಿಂದ ಭಾರತಕ್ಕೆ ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆಗೆ ಆಪರೇಶನ್ ದೇವಿ ಶಕ್ತಿ ಎಂದು ಇನ್ನು ಮುಂದೆ ಕರೆಯಲಾಗುತ್ತದೆ ಎಂದಿದ್ದಾರೆ. ಹಾಗೇ, ಇಂದು 78ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದ್ದಾಗಿ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಭಾರತ ಇಲ್ಲಿಯವರೆಗೆ 800ಕ್ಕೂ ಹೆಚ್ಚು ಜನರನ್ನು ಅಫ್ಘಾನ್ನಿಂದ ಕರೆದುಕೊಂಡು ಬಂದಿದೆ.