ಕಾಬೂಲ್ ಆ 24 : ತಾಲಿಬಾನ್‌ಗಳು 150 ಮಂದಿ ಭಾರತೀಯರನ್ನುಅಪಹರಣ ಮಾಡಿಲ್ಲ, ಭಾರತೀಯರೆಲ್ಲರೂ ಸುರಕ್ಷಿತರಾಗಿದ್ದಾರೆಂದು ಆಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಕಾಬುಲ್ ನಿಂದ ಸ್ಥಳಾಂತರಗೊಳ್ಳಲು ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಜನರನ್ನು ತಾಲಿಬಾನಿಗಳು ಅಪಹರಣ ಮಾಡಿದ್ದು, ಅಪಹರಣಕ್ಕೊಳಗಾದವರಲ್ಲಿ 150 ಭಾರತೀಯರೂ ಇದ್ದಾರೆಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದುಬಂದಿರಲಿಲ್ಲ. ಇದೀಗ ಅಫ್ಘಾನಿಸ್ತಾನ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಯಾವುದೇ ಭಾರತೀಯರ ಅಪರಹಣವಾಗಿಲ್ಲ, ಎಲ್ಲರೂ ಸುರಕ್ಷಿತರಾಗಿದ್ದಾರೆ. ಸ್ಥಳಾಂತರಗೊಳ್ಳುತ್ತಿರುವ ಜನರ ದಾಖಲೆಗಳ ಪರಿಶೀಲನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿವೆ. ಕಾಬೂಲ್ನಿಂದ ಈವರೆಗೆ ಸುಮಾರು 12 ಸಾವಿರ ವಿದೇಶಿಯರ ರಕ್ಷಣೆ ಮಾಡಲಾಗಿದ್ದು, ಅವರನ್ನೆಲ್ಲಾ ಏರ್ಲಿಫ್ಟ್ ಮೂಲಕ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಎಂದು ತಿಳಿದುಬಂದಿದೆ.

ರಾಜಕೀಯ
ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್ವೈ
ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.