Tech News: ಕೇಂದ್ರ ಸರ್ಕಾರವು(Central Government) ಉದ್ಯೋಗಿಗಳ ಜೀವನದ ಭದ್ರತೆಗೆಂದು ಇಪಿಎಫ್ (EPF)(Employees Provident Fund) ಯೋಜನೆಯನ್ನು ರೂಪಿಸಿದೆ. ಮೊದಲು ಇದು ಮುಖ್ಯವಾಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆಂದೇ ಶುರುವಾದ ಯೋಜನೆಯಾಗಿತ್ತು. ಎಲ್ಲಾ ಉದ್ಯೋಗಿಗಳಿಗೂ ಆ ಬಳಿಕ ಇಪಿಎಫ್ ಸ್ಕೀಮ್ ವಿಸ್ತರಿಸಲಾಗಿದೆ. ಕನಿಷ್ಠ 20 ಮಂದಿ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳು ಇಪಿಎಫ್ ಸೌಲಭ್ಯವನ್ನು ತಮ್ಮ ಉದ್ಯೋಗಿಗಳಿಗೆ ಕೊಡಬೇಕು ಎಂಬ ಕಡ್ಡಾಯ ನಿಯಮ ಇದೆ.

ಒಂದು ವೇಳೆ ಉದ್ಯೋಗಿ ಕೆಲಸ ಬದಲಿಸಿ ಬೇರೆ ಸಂಸ್ಥೆಗೆ ಸೇರಿದರು ಕೂಡ ಬೇರೆ ಇಪಿಎಫ್ ಖಾತೆ ಶುರುವಾಗುತ್ತದೆ ಇಲ್ಲವಾದಲ್ಲಿ ಅವೆರಡನ್ನು ವಿಲೀನಗೊಳಿಸಿ ಮುಂದುವರಿಯಬಹುದು.
ಇದನ್ನೂ ಓದಿ : ರಾಜ್ಯದಲ್ಲಿ ಆನ್ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ
ಇಪಿಎಫ್ ಸ್ಕೀಮ್ ಉದ್ಯೋಗಿ ನಿವೃತ್ತರಾಗುವವರೆಗೂ(Retired) ಅನ್ವಯ ಆಗುತ್ತದೆ. ಒಂದು ವೇಳೆ ನಿವೃತ್ತಿಗೆ ಮುನ್ನ ಉದ್ಯೋಗಿಯು ಸಾವನ್ನಪ್ಪಿದರೆ ಅವರ ನಾಮಿನಿಯು(Nominee) ಇಪಿಎಫ್ ಖಾತೆಯಲ್ಲಿರುವ ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಅದಕ್ಕೆ ತನ್ನ ಇಪಿಎಫ್ ಖಾತೆಗೆ ಉದ್ಯೋಗಿಯು ನಾಮಿನಿಯನ್ನು ಹೆಸರಿಸಬೇಕು. ಇಪಿಎಫ್ ಹಣಕ್ಕೆ ನಾಮಿನಿಯು ಹೇಗೆ ಕ್ಲೈಮ್(Claim) ಮಾಡಬಹುದು ಎಂಬ ವಿವರ ಇಲ್ಲಿದೆ…

ಇಪಿಎಫ್ ಹಣಕ್ಕೆ ನಾಮಿನಿ ಕ್ಲೇಮ್ ಮಾಡುವುದು ಹೇಗೆ?
ನಾಮಿನಿ ಆಗಿರುವವರು ನಿಧನ ಹೊಂದಿದ ಇಪಿಎಫ್ ಸದಸ್ಯರ ಖಾತೆಗೆ ಫಾರ್ಮ್ 20(Form 20) ಸಲ್ಲಿಸಬೇಕು.
ಇಪಿಎಫ್ ಸದಸ್ಯರ ವಿವರ ಇದರಲ್ಲಿ ತುಂಬಬೇಕು.
ಈ ಅರ್ಜಿಯಲ್ಲಿ ನಾಮಿನಿಯು ತಮ್ಮ ಆಧಾರ್ಗೆ(Adhar Card) ನೀಡಿದ್ದ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು
ನಾಮಿನಿ ಈ ಅರ್ಜಿಯನ್ನು ಇಪಿಎಫ್ ಸದಸ್ಯ ಸಾಯುವಾಗ ಕೆಲಸ ಮಾಡುತ್ತಿದ್ದ ಸಂಸ್ಥೆ ಮೂಲಕ ಸಲ್ಲಿಸಬೇಕಾಗುತ್ತದೆ.
ಅರ್ಜಿ ಸ್ವೀಕೃತವಾದರೆ ಇದಾದ ಬಳಿಕ ನಾಮಿನಿಯ ಮೊಬೈಲ್ ನಂಬರ್ಗೆ ಒಂದು ಎಸ್ಸೆಮ್ಮೆಸ್(SMS) ಮೆಸೇಜ್ ಬರುತ್ತದೆ.
ನಂತರ ನಾಮಿನಿಯ ಬ್ಯಾಂಕ್ ಖಾತೆಗೆ(Bank Account) ಹಣ ವರ್ಗವಾಗುತ್ತದೆ.

ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡಲು ಯಾವ್ಯಾವ ದಾಖಲೆಗಳು ಬೇಕು?
- ನಾಮಿನಿಯ ಕ್ಯಾನ್ಸಲ್ ಚೆಕ್
- ಇಪಿಎಫ್ ಸದಸ್ಯರ ಡೆತ್ ಸರ್ಟಿಫಿಕೇಟ್(Death Certificate)
- ಗಾರ್ಡಿಯನ್ಶಿಪ್ ಸರ್ಟಿಫಿಕೇಟ್
- ಫಾರ್ಮ್ 10ಡಿ (ಪೆನ್ಷನ್ ಸೌಲಭ್ಯಕ್ಕಾಗಿ)
- ಫಾರ್ಮ್ 5 (ಉದ್ಯೋಗಿಗಳ ಠೇವಣಿ ಆಧಾರಿತ ಇನ್ಷೂರೆನ್ಸ್ ಸ್ಕೀಮ್ ಅಡಿಯಲ್ಲಿ ಲಾಭ ಪಡೆಯುವುದಾದರೆ)
- ಫಾರ್ಮ್ 10ಸಿ (ವಿತ್ಡ್ರಾಯಲ್ ಲಾಭಕ್ಕಾಗಿ)
ರಶ್ಮಿತಾ ಅನೀಶ್