Visit Channel

ಮಳೆ ಅವಾಂತರ, ಬೀದರ್‌ನ ಔರಾದನಲ್ಲಿ ಸುರಿದ ಮಳೆಗೆ ಜನಜೀವನ ತತ್ತರ. ಮನೆಗಳಿಗೆ ನೀರು ನುಗ್ಗಿ ಭಾರೀ ನಷ್ಟ

ಮನೆಗಳಿಗೆ-ನೀರು-ನುಗ್ಗಿ-ಭಾರೀ-ನಷ್ಟ.-Rain-in-Aurad-of-Bidar-district-has-made-peoples-life-pathetic.

ಇದು ಬೀದರ್‌ನ ಔರಾದ್‌ನ ಪ್ರವಾಹ ಪರಿಸ್ಥಿತಿ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಕಟ್ಟೆ, ಹಳ್ಳ, ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ.

ಪ್ರವಾಹದಿಂದಾಗಿ ಹೊಲ ಗದ್ದೆಗಳೆಲ್ಲಾ ನೀರಿನಿಂದ ಆವೃತವಾಗಿವೆ. ಬೆಳೆದ ಬೆಳೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಬೆಳೆ ನಷ್ಟವಾಗಿವೆ ಇದರಿಂದ ರೈತರು ಆತಂಕಿತರಾಗಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಿಂದ ರೈತರು ಜರ್ಜರಿತರಾಗಿದ್ದಾರೆ. ಈಗ ಪ್ರವಾಹಕ್ಕೆ ಬೆಳೆಯೂ ಹಾಳಾಗಿದೆ.

ಸತತವಾಗಿ ಸುರಿಯಿತ್ತಿರುವ ಭಾರಿ ಮಳೆಗೆ ಔರಾದ – ಬೀದರ್ ಮುಖ್ಯರಸ್ತೆಯ ಖಾಶಂಪೂರ್ ಸೇತುವೆ ಮುಳಗಡೆ, ಜೋತೆಗೆ ವಡಗಾಂವ ಬಳಿಯ ಸೇತುವ ಸಂಪರ್ಕ ಕಡಿತಗೊಂಡಿದೆ. ಔರಾದನ ಬೋರ್ಗಿ ಗ್ರಾಮದ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ಮಳೆ ನುಗ್ಗಿದ ಕಾರಣ, ಮನೆಯಲ್ಲಿಟ್ಟಿರುವ ರೇಷನ್‌, ಬಟ್ಟೆ ಬರೆಯೆಲ್ಲಾ ನೀರಲ್ಲಿ ಕೊಚ್ಚಿ ಹೋಗಿದೆ.

ನೆರೆಯಿಂದ ಜನ ತತ್ತರಿಸಿ ಹೋಗಿದ್ರೂ ಸಹ ಜಿಲ್ಲಾಡಳಿತ ಮಾತ್ರ ಇವರ ನೆರವಿಗೆ ಧಾವಿಸಿಲ್ಲ. ಯಾವುದೇ ಪರಿಹಾರವನ್ನೂ ಘೋಷಿಸಿಲ್ಲ. ನೆರೆಯಿಂದ ನೂರಾರು ಎಕರೆ ಕೃಷಿ ಭೂಮಿ ಹಾಳಾಗಿದ್ದು, ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿನ ಗ್ರಾಮಸ್ಥರ ನೆರವಿಗೆ ಧಾವಿಸಬೇಕಾಗಿ ಮನವಿ ಮಾಡುತ್ತಿದ್ದಾರೆ.

ಔರಾದ್‌ನಿಂದ ಪವನ್‌, ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.