
ನವದೆಹಲಿ : ಅಗ್ನಿಪಥ್ ಯೋಜನೆಗೆ(Agnipath Yojana) ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್, ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳಿಗೆ ಸಮಗ್ರ ಉತ್ತರವನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ದೆಹಲಿ ಹೈಕೋರ್ಟ್‌ನ (DELHI HIGH COURT) ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರ ನೇತೃತ್ವದ ದ್ವಿಸದಸ್ಯ ಪೀಠವು ಅಗ್ನಿಪಥ್ ಯೋಜನೆಗೆ ತಡೆ ನೀಡಲು ನಿರಾಕರಿಸಿತು.
ಆದರೆ ಯೋಜನೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಜಿದಾರರಿಗೂ ಸಮಗ್ರ ಉತ್ತರ ನೀಡಬೇಕಾಗಿರುವುದು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ.
ಹೀಗಾಗಿ ಎಲ್ಲ ಅರ್ಜಿದಾರರಿಗೆ ಸಮಗ್ರ ಉತ್ತರವನ್ನು ಕೇಂದ್ರ ಸರ್ಕಾರ ನಾಲ್ಕು ವಾರದೊಳಗೆ ನೀಡಬೇಕೆಂದು ಸೂಚನೆ ನೀಡಿತು. 17 ಮತ್ತು 21 ವರ್ಷದೊಳಗಿನ ಯುವಕರನ್ನು ಸಶಸ್ತ್ರ ಪಡೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜೂನ್ 14 ರಂದು ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆಯನ್ನು ಘೋಷಿಸಿತು.

ಈ ಯೋಜನೆಯಡಿ ನೇಮಕಾತಿ ಹೊಂದುವವರು ಸೇನೆಯಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ಸೇವೆಯನ್ನು ಮಾತ್ರ ಸಲ್ಲಿಸಬಹುದಾಗಿದೆ. ಹೀಗಾಗಿ ಈ ಯೋಜನೆಯ ವಿರುದ್ದ ದೇಶಾದ್ಯಂತ ಅನೇಕ ಕಡೆ ಪ್ರತಿಭಟನೆಗಳು ನಡೆದವು.
ಸೈನಿಕರ ಭವಿಷ್ಯಕ್ಕೆ ಸೂಕ್ತ ಭದ್ರತೆ ಇಲ್ಲದ ಈ ಯೋಜನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ವಿಪಕ್ಷಗಳು ಕೂಡಾ ಸರ್ಕಾರದ ವಿರುದ್ದ ತೀವ್ರ ಟೀಕಾ ಪ್ರಹಾರ ನಡೆಸಿದವು.
ಇದನ್ನೂ ಓದಿ : https://vijayatimes.com/how-humus-is-formed/
ನಂತರ ಕೇಂದ್ರ ಸರ್ಕಾರ ನೇಮಕಾತಿಯ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು. ಆದರೆ ಯೋಜನೆಯನ್ನು ಹಿಂಪಡೆಯಲಿಲ್ಲ. ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ತಜ್ಞರ ಸಲಹೆ ಮೇರೆಗೆ ಈ ಯೋಜನೆ ರೂಪಿಸಲಾಗಿದೆ.