Visit Channel

`ಅಗ್ರಸೇನಾ’ ಗೀತೆಗೆ ಆರ್.ಪಿ ಪಟ್ನಾಯಕ್ ಕಂಠ

WhatsApp Image 2020-12-25 at 6.05.33 AM

ಆರ್.ಪಿ ಪಟ್ನಾಯಕ್ ಮತ್ತೆ ಬಂದಿದ್ದಾರೆ. ಎಕ್ಸ್‌ಕ್ಯೂಸ್ ಮಿ’ ಸಿನಿಮಾದ ಹಾಡುಗಳ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದ ಆರ್.ಪಿ ಪಟ್ನಾಯಕ್ ಈ ಬಾರಿ ಸುದ್ದಿಯಾಗುತ್ತಿರುವುದು ತಮ್ಮ ಸಂಗೀತದಿಂದ ಅಲ್ಲ; ಬದಲಿಗೆ ಗಾಯನದ ಮೂಲಕ. ವೈಷ್ಣವಿ ಸಿನಿಮಾಸ್ ಲಾಂಛನದಲ್ಲಿ ಮಮತಾ ಜಯರಾಮ ರೆಡ್ಡಿ ನಿರ್ಮಾಣದಅಗ್ರಸೇನಾ’ ಚಿತ್ರಕ್ಕಾಗಿ ಅವರು ಹಾಡಿದ್ದಾರೆ.

ಚಿತ್ರಕ್ಕೆ ಎಂ ಎಸ್ ತ್ಯಾಗರಾಜ್ ಸಂಗೀತ ನೀಡಿದ್ದಾರೆ. `ಸೂರ್ಯನಂತೆ ಊರಿಗೆ, ಚಂದ್ರನಂತೆ ಸೂರಿಗೆ ಬೆಳಗುತ್ತಿದ್ದ ನಿನ್ನ ಅಪ್ಪಯ್ಯ..’ ಎನ್ನುವ ಮನಮೋಹಕ ಗೀತೆಯನ್ನು ಆರ್.ಪಿ ಪಟ್ನಾಯಕ್ ಹಾಡಿದ್ದಾರೆ. ಅಗ್ರಸೇನಾ ಚಿತ್ರದ ಈ ಹೃದಯಸ್ಪರ್ಶಿ ಸಾಲುಗಳು ತಮಗೆ ತನ್ನ ತಂದೆಯ ನೆನಪು ಮೂಡುವಂತೆ ಮಾಡಿರುವುದಾಗಿ ಪಟ್ನಾಯಕ್ ಹೇಳಿದ್ಧಾರೆ. ಬಹಳ ಸಮಯದ ನಂತರ ಕನ್ನಡದಲ್ಲಿ ಹಾಡುತ್ತಿದ್ದರೂ ಸಹ, ಒಂದೊಳ್ಳೆಯ ಹಾಡಿನ ಮೂಲಕವೇ ರೀ ಎಂಟ್ರಿ ದೊರಕಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಎನ್. ಕೆ ಮುರುಗೇಶ್ ನಿರ್ದೇಶಿಸಿರುವ `ಅಗ್ರಸೇನಾ’ ಚಿತ್ರದಲ್ಲಿರುವ ಈ ಗೀತೆಗೆ ವಿಜಯ್ ಚಿತ್ರದುರ್ಗ ಸಾಹಿತ್ಯ ನೀಡಿದ್ದಾರೆ. ಆರ್.ಪಿ ರೆಡ್ಡಿಯವರ ಛಾಯಾಗ್ರಹಣ, ವಿಜಯ್ ಎಂ ಕುಮಾರ್ ಅವರ ಸಂಕಲನ ಚಿತ್ರಕ್ಕಿದೆ. ರಾಮಕೃಷ್ಣ, ರಚನಾ ದಶರಥ್, ಅಮರ್, ಹತ್ವಿಕ್ ಕೃಷ್ಣರಾಜ್, ಉಗ್ರಂ ಮಂಜು, ಮೋಹನ್ ಜುನೇಜಾ ಹಾಗೂ ಬೇಬಿ ತನುಷ್ಕಾ ಈ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.