• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಕರ್ನಾಟಕದಲ್ಲಿ ಶೀಘ್ರವೇ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ

Teju Srinivas by Teju Srinivas
in ಡಿಜಿಟಲ್ ಜ್ಞಾನ, ಪ್ರಮುಖ ಸುದ್ದಿ, ರಾಜ್ಯ
ಕರ್ನಾಟಕದಲ್ಲಿ ಶೀಘ್ರವೇ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ
0
SHARES
48
VIEWS
Share on FacebookShare on Twitter
  • ಕರ್ನಾಟಕದಲ್ಲಿ ಹೊಸ ಡಿಜಿಟಲ್ ವ್ಯವಸ್ಥೆ ಆರಂಭ
  • ಇನ್ಮುಂದೆ ಬರಲಿದೆ AI ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆ
  • ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕರ್ನಾಟಕ ಸರ್ಕಾರಿ AI ದೂರು ವ್ಯವಸ್ಥೆ ಪ್ರಾರಂಭ

Bengaluru: ಮನೆ ಮುಂದಿರುವ ರಸ್ತೆಯ ಗುಂಡಿಗಳು, ನೀರು/ವಿದ್ಯುತ್ ಕಡಿತ, ಮಳೆಗೆ ಮರ ಬೀಳುವುದು ಅಥವಾ ಸರ್ಕಾರಿ ಯೋಜನೆಯ ಸೌಲಭ್ಯ ಸಿಗದೇ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಬಹಳ ಸಾಮಾನ್ಯ. (AI based complaint filing)

ಆದರೆ, ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಪಡೆಯಲು ಪತ್ರ ಬರೆಯುವುದು, ಸಂಬಂಧಪಟ್ಟ ಇಲಾಖೆಯನ್ನು ಹುಡುಕುವುದು, ಮಾಹಿತಿ ತುಂಬುವುದು ಸಾಮಾನ್ಯ ನಾಗರಿಕರಿಗೆ ದೊಡ್ಡ ಕಷ್ಟವಾಗುತ್ತಿತ್ತು.

ಕರ್ನಾಟಕ ಇ-ಆಡಳಿತ ಕೇಂದ್ರ AI  ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದು ನಾಗರಿಕರು ದೂರು ಸಲ್ಲಿಸಬಹುದು

ಈಗ ಈ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನ ಪರಿಹಾರ ತರುತ್ತಿದೆ. (AI based complaint filing)

ಕರ್ನಾಟಕ ಇ-ಆಡಳಿತ ಕೇಂದ್ರ ಈಗ AI (ಕೃತಕ ಬುದ್ಧಿಮತ್ತೆ) ಆಧಾರಿತ ದೂರು ಸಲ್ಲಿಕೆ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದು, ಡಿಸೆಂಬರ್ ಒಳಗೆ ಸಾರ್ವಜನಿಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.

ಈ ಹೊಸ ವ್ಯವಸ್ಥೆಯಿಂದ, ಯಾರು ಬೇಕಾದರೂ ಸರಳ ಮಾಹಿತಿಯನ್ನು ನೀಡಿದರೆ, ಸ್ವಯಂಚಾಲಿತವಾಗಿ ದೂರುಪತ್ರ ರಚನೆಯಾಗುತ್ತದೆ.

ಅಷ್ಟಕ್ಕೂ ಈ AI ವ್ಯವಸ್ಥೆ ಮನುಷ್ಯರ ಮಾತಿನ್ನು ಗ್ರಹಿಸಿ ಬರಹ ರೂಪಕ್ಕೆ ಪರಿವರ್ತಿಸಲು ಸಹ ಸಾಮರ್ಥ್ಯ ಹೊಂದಿರುತ್ತದೆ.

ಉದಾಹರಣೆಗೆ, ಮೂರು ದಿನಗಳಿಂದ ನೀರು ಬಂದಿರುವುದಿಲ್ಲ ,ಇಲಾಖೆಯಿಂದ ಹಣ ಬಂದಿಲ್ಲ,ರಸ್ತೆ ತುಂಬಾ ಹಾಳಾಗಿದೆ ಎಂಬಂತೆ ಪ್ರಮುಖ ಮಾಹಿತಿಯನ್ನು ಹೇಳುವಷ್ಟೇ ಸಾಕು; AI ಅದನ್ನು ಪೂರ್ಣ ದೂರು ಪತ್ರವಾಗಿ ತಯಾರಿಸುತ್ತದೆ.

ಜೊತೆಗೆ, ಯಾರಿಗೆ ಬರೆಯಬೇಕು, ಯಾವ ಇಲಾಖೆಗೆ ಕಳುಹಿಸಬೇಕು ಎಂಬ ಗೊಂದಲ ಕೂಡ ಇಲ್ಲ.

ಡೇಟಾ ವಿಶ್ಲೇಷಣೆ ಮೂಲಕ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗೆ ದೂರು ಕಳುಹಿಸುವ ಜವಾಬ್ದಾರಿಯನ್ನೇ AI ತೆಗೆದುಕೊಳ್ಳುತ್ತದೆ.

ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುತ್ತದೆ.ಪ್ರಸ್ತುತ iPGRS ಎನ್ನುವ ಸಾರ್ವಜನಿಕ ದೂರು ವ್ಯವಸ್ಥೆ ಇದ್ದರೂ, ಅಲ್ಲಿ ಜನರು ಇಲಾಖೆಯನ್ನು ಸ್ವತಃ ಆಯ್ಕೆಮಾಡಬೇಕು, ವಿವರಗಳನ್ನು ಟೈಪ್ ಮಾಡಬೇಕು.

ಆದರೆ ಹೊಸ AI ವ್ಯವಸ್ಥೆಯಲ್ಲಿ ಧ್ವನಿ ದಾಖಲಿಸಿ, ಚಿತ್ರಗಳು ಅಥವಾ ದಾಖಲೆಗಳನ್ನು ಕಳುಹಿಸುವುದರಿಂದಲೇ ಪ್ರಕ್ರಿಯೆ ಪೂರ್ಣ.

ChatGPT ತಂತ್ರಜ್ಞಾನ ಬಳಸಿ ಪತ್ರವನ್ನು ತಯಾರಿಸುವುದು ವಿಶೇಷ. ದೂರು ಸಲ್ಲಿಸಿದ ತಕ್ಷಣ, ದೂರು ID ಉತ್ಪಾದನೆ ಆಗಿ ನಾಗರಿಕರ ಫೋನ್ ಸಂಖ್ಯೆಗೆ ಸಂದೇಶ ಬರುತ್ತದೆ.

ನಂತರ ಕೆಲಸ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಾಗರಿಕರು ಟ್ರ್ಯಾಕ್ (Track) ಮಾಡಬಹುದಾಗಿದೆ.

ಈ ಅತ್ಯಾಧುನಿಕ ವೈಶಿಷ್ಟ್ಯದ ಮತ್ತೊಂದು ದೊಡ್ಡ ಲಾಭವೆಂದರೆ ಸಮಯ ಪಾಲನೆ.

ಒಂದು ದೂರು ಏಳು ದಿನಗಳಲ್ಲಿ ಪರಿಹಾರವಾಗದಿದ್ದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಮೇಲಿನ ಹುದ್ದೆಯ ಅಧಿಕಾರಿಗೆ ವಿಷಯ ಕಳುಹಿಸುತ್ತದೆ.

ಮತ್ತೆ ಮುಂದಿನ ಏಳು ದಿನವೂ ಪರಿಹಾರವಾಗದಿದ್ದರೆ ಇಲಾಖೆಯ ಮುಖ್ಯಸ್ಥರಿಗೆ ತಲುಪುತ್ತದೆ. ಗರಿಷ್ಠ 21 ದಿನಗಳೊಳಗೆ ಸಮಸ್ಯೆ ಪರಿಹಾರವಾಗಲೇಬೇಕು.

ಈಗಾಗಲೇ ಸಿಸ್ಟಮ್ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಸಾರ್ವಜನಿಕರಿಗೆ ಅಧಿಕೃತವಾಗಿ ಭಳಿಗೊಳ್ಳಲಿದ್ದು, ನಾಗರಿಕರು ಪತ್ರ ಬರೆಯುವ ತೊಂದರೆ, ಅಧಿಕಾರಿಗಳ ಕೈಯಲ್ಲಿ ಸುತ್ತಾಡುವ ತೊಂದರೆ ಎಲ್ಲವೂ ಕಡಿಮೆಯಾಗಲಿದೆ.

ಭಾರತದಲ್ಲಿ ತಂತ್ರಜ್ಞಾನ ಆಧಾರಿತ ಸಾರ್ವಜನಿಕ ಸೇವೆಯ ಉತ್ತಮ ಉದಾಹರಣೆಯಾಗಿ ಕರ್ನಾಟಕವು ಮತ್ತೊಮ್ಮೆ ಗುರುತಿಸಿಕೊಳ್ಳಬಹುದಾಗಿದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಆರ್​ಟಿಒ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: 4 ಸಾವಿರ ಖಾಸಗಿ ಬಸ್ ತಪಾಸಣೆ, 102 ಬಸ್ ಸೀಜ್, 1 ಕೋಟಿ ದಂಡ
Tags: artifical intelligenceCaseKarnatakaRegistration

Related News

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ಪ್ರಮುಖ ಸುದ್ದಿ

ಹೋಟೆಲ್‌ ಕಿಚನ್‌ಗಳಿಗೆ ಹೊಸ ರೂಲ್ಸ್‌; CCTV ಕ್ಯಾಮೆರಾ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

August 11, 2026
ಬಿಡದಿ ಪಾದಯಾತ್ರೆ ಅರ್ಧಕ್ಕೆ ಅಂತ್ಯ: ರೈತರಿಗಾಗಿ ಹೋರಾಟ ಮುಂದುವರಿಸುವುದಾಗಿ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ
ಪ್ರಮುಖ ಸುದ್ದಿ

ಬಿಡದಿ ಪಾದಯಾತ್ರೆ ಅರ್ಧಕ್ಕೆ ಅಂತ್ಯ: ರೈತರಿಗಾಗಿ ಹೋರಾಟ ಮುಂದುವರಿಸುವುದಾಗಿ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಘೋಷಣೆ

August 11, 2026
ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಸಾವಿನ ಸಂಖ್ಯೆ 111ಕ್ಕೆ ಏರಿಕೆ, ನೂರಾರು ಕಟ್ಟಡಗಳಿಗೆ ಹಾನಿ
ದೇಶ-ವಿದೇಶ

ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ: ಸಾವಿನ ಸಂಖ್ಯೆ 111ಕ್ಕೆ ಏರಿಕೆ, ನೂರಾರು ಕಟ್ಟಡಗಳಿಗೆ ಹಾನಿ

August 11, 2026
ಸೆಪ್ಟೆಂಬರ್ 1ರಿಂದ SEBI ಹೊಸ ನಾಮಿನೇಷನ್ ನಿಯಮ ಜಾರಿ: ಡಿಮ್ಯಾಟ್, ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಪ್‌ಡೇಟ್
ಪ್ರಮುಖ ಸುದ್ದಿ

ಸೆಪ್ಟೆಂಬರ್ 1ರಿಂದ SEBI ಹೊಸ ನಾಮಿನೇಷನ್ ನಿಯಮ ಜಾರಿ: ಡಿಮ್ಯಾಟ್, ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಪ್‌ಡೇಟ್

August 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.