Former MLA Soumya Reddy has been elected as the President of the State Congress Women’s Unit
Bengaluru: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಮಹಿಳಾ ಘಟಕದ ಅಧ್ಯಕ್ಷರಾಗಿ ಮಾಜಿ ಶಾಸಕಿ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಅವರನ್ನು ನೇಮಿಸಲಾಗಿದೆ. ಸದ್ಯ ಪುಷ್ಪಾ ಅಮರನಾಥ್ ಅವರು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಸೌಮ್ಯಾ ರೆಡ್ಡಿ (Soumya Reddy) ಅವರ ನೇಮಕದ ಪ್ರಸ್ತಾವಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ (Jayanagar) ಕ್ಷೇತ್ರದಿಂದ ಚುನಾಯಿತರಾಗಿದ್ದ ಸೌಮ್ಯಾ ರೆಡ್ಡಿ, 2023ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕಿಳಿದಿದ್ದ ಅವರು ಕಡಿಮೆ ಅಂತರದಲ್ಲಿ ಪರಾಭವ ಹೊಂದಿದ್ದರು.
ಹಾಲಿ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amaranath) ಅವರ ಅವಧಿ ಲೋಕಸಭೆ ಚುನಾವಣೆಗೆ ಮೊದಲೇ ಮುಗಿದಿತ್ತು. ಅಲ್ಲದೆ, ಸದ್ಯ ಅವರು ‘ಗ್ಯಾರಂಟಿ’ ಯೋಜನೆಗಳ (Guarantee Scheme) ಅನುಷ್ಠಾನದ ರಾಜ್ಯಮಟ್ಟದ ಸಮಿತಿಯ ಉಪಾಧ್ಯಕ್ಷೆ. ಹೀಗಾಗಿ, ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿಯಡಿ ಅವರು ಈ ಸ್ಥಾನವನ್ನು ತೆರವುಗೊಳಿಸಿದ್ದರು.
ಹಾಗಾಗಿ ಕರ್ನಾಟಕ ಜೊತೆಗೆ ಚಂಡಿಗಡ ಮತ್ತು ಅರುಣಾಚಲ ಪ್ರದೇಶ ಅಧ್ಯಕ್ಷರ ನೇಮಕವನ್ನು ಎಐಸಿಸಿ (AICC) ಹೊರಡಿಸಿದೆ. ಸೌಮ್ಯ ರೆಡ್ಡಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ (D K Shivakumar) ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ರಾಜ್ಯದಲ್ಲಿ ಅಭ್ಯರ್ಥಿಯನ್ನು ಹುಡುಕುವ ಪ್ರಕ್ರಿಯೆ ಆರಂಭಿಸಿದ್ದರು.
ಚರ್ಚೆಯ ವೇಳೆ ಕೃಪಾ ಅಮರ್ ಆಳ್ವ, ಕಮಲಾಕ್ಷಿ ರಾಜಣ್ಣ (Kamalakshi Rajanna), ಐಶ್ವರ್ಯ ಮಹದೇವ್, ನಯನಾ ಮೋಟಮ್ಮ, ವೀಣಾ ಕಾಶಪ್ಪನವರ್ ಮತ್ತು ಕವಿತಾ ರೆಡ್ಡಿ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಹೈಕಮಾಂಡ್ ಸೌಮ್ಯ ರೆಡ್ಡಿಗೆ ಮಣೆ ಹಾಕಿದೆ. ಇವರು ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೂಡಾ ಆಗಿರುತ್ತಾರೆ.
AICC appoints Sowmya Reddy Kannada Live
Bengaluru: Soumya Reddy, daughter of former MLA and minister Ramalinga Reddy, has been appointed as the president of the women's wing of the Karnataka Pradesh Congress Committee (KPCC). Presently Pushpa Amarnath was the President of the State Congress Women's Unit. AICC President Mallikarjuna Kharge has approved the proposal of appointment of Soumya Reddy for the post vacated by him, AICC General Secretary K.C. Venugopal said. Soumya Reddy, who was elected from Jayanagar constituency in 2018 assembly election, was defeated in 2023 election. Also, in the recently held Lok Sabha elections, he contested against Tejaswi Surya from Bangalore South Constituency and lost by a narrow margin. The term of incumbent Speaker Pushpa Amaranath ended before the Lok Sabha elections. Also, he is currently the Vice-President of the State Level Committee for Implementation of Guarantee Schemes. Thus, he had vacated the post under the one post per person policy. So the AICC has issued the appointment of the president of Chandigarh and Arunachal Pradesh along with Karnataka. Soumya Reddy said DCM D.K. Shivakumar (D K Shivakumar) is recognized in his close circle. All India Mahila Congress president Alka Lamba had started the process of finding a candidate in the state. During the discussion, the names of Krupa Amar Alva, Kamalakshi Rajanna, Aishwarya Mahadev, Nayana Motamma, Veena Kashappanavar and Kavita Reddy were mentioned. Finally, the high command has given Soumya Reddy's face. She is also an environmentalist and social activist.