ಸರ್ಕಾರಿ ಹುದ್ದೆಯ ನಿರೀಕ್ಷಿತರಿಗೆ ಶುಭ ಸುದ್ದಿ ಸಿಕ್ಕಿದ್ದು, ಭಾರತೀಯ ವಾಯು ಸೇನೆಯಲ್ಲಿನ (Indian Air Force) ಗ್ರೂಪ್ ಸಿ ವಿಭಾಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸೆ. 30ರ ಒಳಗೆ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳ ಸಂಖ್ಯೆ – 250
ಗ್ರೂಪ್ ಸಿ ವಿಭಾಗದ ಸುಮಾರು 250 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ ಮೆಸ್ ಸ್ಟಾಫ್, ಎಂಟಿಎಸ್, ಲಾಂಡ್ರಿಮ್ಯಾನ್, ಸ್ಟೋರ್ ಕೀಪರ್, ಕಾರ್ಪೆಂಟರ್, ಫೈರ್ ಮ್ಯಾನ್, ಬಾಣಸಿಗ ಸೇರಿದಂತೆ ವಿವಿಧ ಹುದ್ದೆಗಳಿವೆ.
ವಿದ್ಯಾರ್ಹತೆ : ಎಸ್ಎಸ್ಎಲ್ಸಿ , ಪಿಯುಸಿ ಮತ್ತು ಪದವಿ (ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸಬಹುದು).
ವಯಸ್ಸು : ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು 25 ವರ್ಷ. ಇನ್ನು ಒಬಿಸಿ, ಎಸ್ಸಿ ಎಸ್ಟಿ, ದೈಹಿಕ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ.
ಸಂಬಳ : ತಿಂಗಳಿಗೆ 18 ಸಾವಿರ ದಿಂದ 25. 500 ರೂ ಗಳವರೆಗೆ ವೇತನ
ಅರ್ಜಿ ಸಲ್ಲಿಕೆ ವಿಧಾನ : ಅಭ್ಯರ್ಥಿಗಳ ಹುದ್ದೆ ಮತ್ತು ವಿದ್ಯಾರ್ಹತೆ ಅನುಸಾರ ತಮ್ಮ ಆಯ್ಕೆಯ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಈ ಅರ್ಜಿಯನ್ನ ಸಂಪೂರ್ಣವಾಗಿ ಭರ್ತಿ ಮಾಡಿ, ಉಲ್ಲೇಖಿಸಿದ ವಿಳಾಸ ಅಭ್ಯರ್ಥಿ ಅರ್ಜಿಯ ಲಕೋಟೆಯಲ್ಲಿ ಸ್ವಯಂ ವಿಳಾಸ ದಾಖಲಿಸಿ, ವಾಯುಪಡೆ ಕಚೇರಿಗೆ ರವಾನಿಸಬೇಕು.
ಆಭ್ಯರ್ಥಿಗಳು ಹುದ್ದೆಯ ಮತ್ತಷ್ಟು ವಿವರ, ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಗೆ ಕೆಳಗಿರುವ ಲಿಂಕ್ ಕ್ಲಿಕ್ ಮಾಡಬಹುದು.
http://www.davp.nic.in/WriteReadData/ADS/eng_10801_19_2021b.pdf