Bengalore: ದೆಹಲಿಯಲ್ಲಿ(Delhi) ವಿಪರೀತ ವಾಯುಮಾಲಿನ್ಯ (air pollution) ಉಂಟಾದ ಬಳಿಕ ಇದೀಗ ಬೆಂಗಳೂರಿಗೂ(Bangalore) ಅದೇ ಪರಿಸ್ಥಿತಿ ಎದುರಾಗಿದೆ. ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಇದ್ದರೆ, ಕರ್ನಾಟಕದಲ್ಲಿ(Karnataka) ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ದಿನಕ್ಕೊಂದು ವಾತಾವರಣ ಇದೆ. ಒಮ್ಮೆ ಬಿಸಿಲು,(sunny)ಒಮ್ಮೆ ಚಳಿ (cold), ಮತ್ತೊಮ್ಮೆ ಮಳೆ..(rain)ಈ ಎಲ್ಲಾ ವಾತಾವರಣದ(atmosphere) ನಡುವಲ್ಲಿ ಸದ್ದೇ ಇಲ್ಲದೆ ವಾಯುಮಾಲಿನ್ಯ ತನ್ನ ಕದಂಬಬಾಹು ಚಾಚಿದೆ.
ಕಳೆದ ವರ್ಷ ಗಾಳಿಯ ಗುಣಮಟ್ಟ(Air quality) ಕಡಿಮೆ ಆಗಿತ್ತು, ಈ ವರ್ಷ ಸಂಪೂರ್ಣವಾಗಿ ಗಾಳಿಯ ಗುಣಮಟ್ಟ ಕುಸಿದಿದೆ. ಈ ಬಗ್ಗೆ ಗ್ರೀನ್ ಪೀಸ್ ಇಂಡಿಯಾ(Greenpeace India) ಎಂಬ ಸಂಸ್ಥೆ ಮಾಹಿತಿ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಾಳಿಯಲ್ಲಿರೋ ನೈಟ್ರೋಜನ್ ಡೈ ಆಕ್ಸೈಡ್(Nitrogen dioxide) ಪ್ರಮಾಣ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ(World Health Organization) ನಿಗದಿಪಡಿಸಿದ ಪ್ರಮಾಣಕ್ಕಿಂತಲೂ ನೈಟ್ರೋಜನ್ ಡೈ ಆಕ್ಸೈಡ್ ದುಪ್ಪಟ್ಟು ಹೆಚ್ಚಾಗಿದೆ. ಇದ್ರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ವಾಹನಗಳಿಂದ ಹೊರಬರುವ ಇಂಧನದಿಂದ(fuel) ವಾಯುಮಾಲಿನ್ಯದ ಹೆಚ್ಚಾಗುತ್ತಿದೆ. ಬೆಂಗಳೂರಿನ ಹೆಬ್ಬಾಳ(Hebbala), ಪೀಣ್ಯ(Penya), ಸಿಲ್ಕ್ಬೋರ್ಡ್(Silk Board) ಸೇರಿ ನಾನಾ ಭಾಗಗಳಲ್ಲಿ ಕಲುಷಿತ ಗಾಳಿಪ್ರಮಾಣ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ 295 ದಿನಗಳ ಕಾಲ ಸಂಶೋಧನೆ ನಡೆಸಿತ್ತು. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗೋಕೆ ಪ್ರಮುಖ ಕಾರಣ ಅಂದ್ರೆ ವಾಹನ ಸಂಖ್ಯೆ ಹೆಚ್ಚಳ,ಪರಿಸರ ಹಾನಿಕಾರಕ ಪಟಾಕಿಯ(fireworks) ಬಳಕೆ.. ಅಲ್ಲಲ್ಲಿ ಕಸ ಬಿಸಾಕುವುದು.. ಸಿಲಿಕಾನ್ ಸಿಟಿಯ ಕೆಲವೊಂದು ಮನೆಗಳಲ್ಲಿ ಒಬ್ಬೊಬ್ಬರು ಒಂದೊಂದು ವಾಹನ ಬಳಕೆ ಮಾಡ್ತಾರೆ. ಒಂದೇ ಮನೆಯಿಂದ ಐದಾರು ವಾಹನಗಳು ರಸ್ತೆಗೆ ಇಳಿಯುತ್ತೆ. ಇನ್ನೂ ಬೆಂಗಳೂರಿನಲ್ಲಿ ದೀಪಾವಳಿ(Diwali) ಹಬ್ಬದ ಟೈಮ್ನಲ್ಲಿ ಅತ್ಯೇಚ್ಛವಾಗಿ ಪರಿಸರಕ್ಕೆ ಹಾನಿಕಾರಕ ಆಗಿರೋ ಪಟಾಕಿಗಳನ್ನ ಉಡಾಯಿಸಿರುತ್ತಾರೆ. ದೀಪಾವಳಿ ಮಾತ್ರ ಅಲ್ಲದೆ ಯಾವುದಾದ್ರೂ ಸೆಲಬ್ರೇಶನ್ ಟೈಮ್ನಲ್ಲೂ ಕೂಡ ಪಟಾಕಿ ಉಡಾಯಿಸಿ ಸಂಭ್ರಮಿಸುತ್ತಾರೆ. ಇದ್ರಿಂದ ಪರಿಸರದಲ್ಲಿ ಪಟಾಕಿ ಹೊಗೆ ಮಿಶ್ರಣಗೊಂಡು ಪರಿಸರ ಮಾಲಿನ್ಯ(Environmental pollution) ಆಗುತ್ತಿದೆ. ಬೆಂಗಳೂರಿನಲ್ಲಿ ಜನ ತಮ್ಮ ಮನೆಯಲ್ಲಿರೋ ಕಸ, ವ್ಯಾಜ್ಯಗಳನ್ನ ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಇದ್ರಿಂದ ಕಸ ಅಲ್ಲಲ್ಲಿ ಕೊಳೆತು ಗಬ್ಬು ನಾರುತ್ತದೆ. ಈ ವ್ಯಾಜ್ಯದ ವಾಸನೆ ಕೂಡ ಗಾಳಿಯಲ್ಲಿ ಸೇರಿ ಮನುಷ್ಯನ ದೇಹ ಸೇರುತ್ತಿದೆ. ಈ ಎಲ್ಲಾ ಕಾರಣದಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
ಕಲುಷಿತ ಗಾಳಿ ಸೇವನೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಚರ್ಮ ರೋಗ(skin disease), ಕಣ್ಣಿಗೆ ತೊಂದರೆ(Eye trouble), ಉಸಿರಾಟದ ತೊಂದರೆ(Difficulty breathing) ಸೇರಿ ನಾನಾ ಆರೋಗ್ಯ ಸಮಸ್ಯೆ ಕಾಡಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಮಾಸ್ಕ್(Mask) ಧರಿಸಿ ಪ್ರಯಾಣ ಮಾಡುವುದು ಉತ್ತಮ. ಒಂದು ವೇಳೆ ಮಾಸ್ಕ್ ಧರಿಸದೆ ರಸ್ತೆಗೆ ಇಳಿದಿದ್ದೇ ಆದಲ್ಲಿ ನಾನಾ ಖಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ.